ನಕ್ಕೂ ನಕ್ಕೂ ಸುಸ್ತಾಗಬಹುದು

ನಕ್ಕೂ ನಕ್ಕೂ ಸುಸ್ತಾಗಬಹುದು

೧. ಪೀಟರ್ ಒಂದು ಕೊಳದ ಮಧ್ಯೆ ಇರುವ ಫಲಕವನ್ನು ಓದಲು ಸಾಧ್ಯವಾಗದೆ ಈಜಿಕೊಂಡು ಹೋಗಿ ಆ ಫಲಕವನ್ನು ಓದಿದಾಗ ಮೂರ್ಚೆ ತಪ್ಪಿ ಬೀಳುತ್ತಾನೆ 

ಕಾರಣ : ಅದರಲ್ಲಿ ಹೀಗೆ ಬರೆದಿರುತ್ತದೆ " ಮೊಸಳೆಗಳಿವೆ ದಯವಿಟ್ಟು ಈಜಬೇಡಿ"

೨. ಪೀಟರ್ ನ ಅಪ್ಪ ಊರಿಂದ ಹಿಂದಿರುಗಿ ಬಂದು ಪೀಟರ್ ನನ್ನು ಕೇಳುತ್ತಾನೆ

ಅಪ್ಪ : ನಿನ್ನಮ್ಮ ಎಲ್ಲಿ?

ಪೀಟರ್ : ಅಮ್ಮ ಸತ್ತು ಹೋದಳು

ಅಪ್ಪ : ಮತ್ತೆ ನನಗ್ಯಾಕೆ ತಿಳಿಸಲಿಲ್ಲ

ಪೀಟರ್ : ನಾನು ನಿಮಗೆ ಸರ್ಪ್ರೈಸ್ ಮಾಡೋಣ ಎಂದು  ಅಂದುಕೊಂಡಿದ್ದೆ  

೩. ಪೀಟರ್ ನ ಮೊಬೈಲ್ ಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಬಹಳ ಹೆದರಿಸುತ್ತಿದ್ದ. ಆಗ ಪೀಟರ್ ತನ್ನ ಮೊಬೈಲ್ ಸಿಂ ಬದಲಾಯಿಸಿ ಆ ಅಪರಿಚಿತ ವ್ಯಕ್ತಿಯ ಮೊಬೈಲ್ ನಂಬರ್ ಗೆ ಹೀಗೆಂದು ಸಂದೇಶ ಕಳುಹಿಸಿದ " ಈಗ ನಾನು ನನ್ನ ನಂಬರ್ ಬದಲಾಯಿಸಿಬಿಟ್ಟೆ, ಈಗ ನೀನಲ್ಲ ನಿಮ್ಮಪ್ಪ ಬಂದರೂ ನನ್ನ ಹೆದರಿಸಲು ಸಾಧ್ಯವಿಲ್ಲ"

೪. ಪೀಟರ್ : ನಾನು ಆಫೀಸ್ ಗೆ ಹೋಗುವ ಮೊದಲು ನನ್ನ ಹೆಂಡತಿಗೆ ಮುತ್ತು ನೀಡುತ್ತೇನೆ

ಪೀಟರ್ ಸ್ನೇಹಿತ : ನಾನು ಸಹ ನಿನ್ನ ಹೆಂಡತಿಗೆ ನೀನು ಆಫೀಸ್ ಗೆ ಹೋದ ನಂತರ ಮುತ್ತು ನೀಡುತ್ತೇನೆ.

ಪೀಟರ್ : ಜೋರಾಗಿ ನಕ್ಕು...ಆದರೆ ಮೊದಲು ನಾನೇ ಅಲ್ವ ಕೊಡೋದು.

೫. ಪೀಟರ್ : ರಾತ್ರಿ ಇಡೀ ರೈಲಿನಲ್ಲಿ ಮೇಲಿನ ಬರ್ತಿನಲ್ಲಿ ಮಲಗಿದ್ದೆ ನಿದ್ದೆಯೇ ಬರಲಿಲ್ಲ.

ಸ್ನೇಹಿತ : ಕೆಳಗಿನ ಸೀಟಿಗೆ ಬದಲಾಯಿಸಿಕೊಳ್ಳಬೇಕಿತ್ತು

ಪೀಟರ್ : ಹುಚ್ಚ, ಕೆಳಗೆ ಬದಲಾಯಿಸಿಕೊಳ್ಳುವುದಕ್ಕೆ ಆ ಸೀಟಿನಲ್ಲಿ ಯಾರೂ ಇರಲೇ ಇಲ್ಲ..

೬. ಪೀಟರ್ ಗೆ ಮಗಳು ಹುಟ್ಟಿದಳು

ಪೀಟರ್ ನ ಹೆಂಡತಿ : ನೋಡ್ರಿ ನಮ್ಮ ಮಗಳು ದೊಡ್ಡವಳಾದಮೇಲೆ ಹುಡುಗರು ಅವಳನ್ನು ಚುದಾಯಿಸುವರು.

ಪೀಟರ್ : ನೀನು ಅದರ ಬಗ್ಗೆ ಚಿಂತಿಸಬೇಡ, ಅದಕ್ಕೊಂದು ಉಪಾಯ ಕಂಡುಹಿಡಿದಿದ್ದೇನೆ.

ಹೆಂಡತಿ : ಏನು?

ಪೀಟರ್ : ಅವಳಿಗೆ "ತಂಗಿ" ಎಂದು ನಾಮಕರಣ ಮಾಡಿಬಿಡೋಣ.

೭. ಪೀಟರ್ ನ ಅಪ್ಪ ಸತ್ತು ಹೋಗಿದ್ದರು, ಪೀಟರ್ ಸ್ವಲ್ಪ ಹೊತ್ತು ಅತ್ತು ಸುಮ್ಮನಾಗಿ ಇದ್ದಕ್ಕಿದ್ದಂತೆ ಜೋರಾಗಿ ಅಳಲು ಶುರು ಮಾಡಿದ

ಸ್ನೇಹಿತ : ಈಗೇನಾಯಿತು?

ಪೀಟರ್ : ನನ್ನ ತಂಗಿ ಈಗಷ್ಟೇ ಕರೆ ಮಾಡಿದ್ದಳು. ಅವರ ಅಪ್ಪ ಸತ್ತರಂತೆ...!!!

೮. ಪೀಟರ್ ನನ್ನು ನಾಸಾ ಅವರು ರಾಕೆಟ್ ನಲ್ಲಿ ಚಂದ್ರನ ಮೇಲೆ ಕಳುಹಿಸಿದರು. ಆದರೆ ರಾಕೆಟ್ ಅರ್ಧಕ್ಕೆ ವಾಪಸ್ ಬಂತು.

ಪೀಟರ್ ನನ್ನು ಏಕೆಂದು ಕೇಳಿದಾಗ " ಇಂದು ಅಮಾವಾಸ್ಯೆ ಅಲ್ಲವೇ ಚಂದ್ರ ಎಲ್ಲಿರುತ್ತಾನೆ" ಎಂದ.

೯. ೯೪೪೯೪೯೪೪೯೪ ಈ ಸಂಖ್ಯೆಯನ್ನು ಪೀಟರ್ ಹೇಗೆ ಡಯಲ್ ಮಾಡಬಹುದು ?

೯೪೪೯೪ ನಂಬರನ್ನು ಒತ್ತಿ ರೀ ಡಯಲ್ ಮಾಡುತ್ತಾನೆ.

೧೦. ಹೋಟೆಲ್ ನಲ್ಲಿ ಪೀಟರ್ ಕೊಟ್ಟ ಕಾರ್ಡನ್ನು ಸಪ್ಲೇಯರ್ ವಾಪಸ್ ಕೊಡುತ್ತಾನೆ

ಪೀಟರ್ : ಏಕೆ ಕಾರ್ಡ್ ವಾಪಸ್ ಕೊಟ್ಟೆ

ಸಪ್ಲೈರ್ : ಸರ್ ಇದು ರೇಶನ್ ಕಾರ್ಡ್

ಪೀಟರ್ : ಮತ್ತೆ ಅಲ್ಲಿ ಬರೆದಿದ್ದರೆ "All Cards accepted " ಎಂದ.

೧೧. ಪೀಟರ್ ತನ್ನ ಸ್ನೇಹಿತನೊಂದಿಗೆ - ನಾನು ಇನ್ನು ಆರು ತಿಂಗಳಲ್ಲಿ ತೆಲುಗು ಕಲಿಯಬೇಕು.

ಸ್ನೇಹಿತ : ಏಕೆ ?

ಪೀಟರ್ : ನಾವು ಒಂದು ತೆಲುಗು ಮಗುವನ್ನು ದತ್ತು ತೆಗೆದುಕೊಂಡಿದ್ದೇವೆ. ಅದು ಇನ್ನು ಆರು ತಿಂಗಳಲ್ಲಿ ಮಾತನಾಡಲು ಶುರುಮಾಡುತ್ತದೆ. ಹಾಗಾಗಿ.

೧೨. ಪೀಟರ್ : ಮೊನ್ನೆ ನನ್ನ ಹೆಂಡತಿ ಬಾವಿಯಲ್ಲಿ ಬಿದ್ದು ಬಿಟ್ಟಳು. ತುಂಬಾ ಗಾಯಗಳಾಗಿ ಚೀರಾಡುತ್ತಿದ್ದಳು.

ಸ್ನೇಹಿತ : ಈಗ ಹೇಗಿದ್ದಾರೆ ನಿನ್ನ ಹೆಂಡತಿ?

ಪೀಟರ್ : ಈಗ ಹುಶಾರಾಗಿರಬಹುದು, ಏಕೆಂದರೆ ನೆನ್ನೆಯಿಂದ ಬಾವಿಯ ಒಳಗಿಂದ ಸದ್ದು ಬರುತ್ತಿಲ್ಲ.

(ಮಿಂಚಂಚೆಯಲ್ಲಿ ಬಂದದ್ದು. ಅಲ್ಲಲ್ಲಿ ಆಂಗ್ಲ ಪದಗಳನ್ನು ಪ್ರಯೋಗಿಸಿದ್ದೇನೆ. ಕ್ಷಮಿಸಿ)
Rating
No votes yet

Comments