ಭೂಮಿ ಗಹಗಹಿಸಿ ನಕ್ಕರೆ...

ಭೂಮಿ ಗಹಗಹಿಸಿ ನಕ್ಕರೆ...

ಕವನ

ಯಾರು ಅಳೆಯಬಲ್ಲರು ನಿನ್ನ ಆದಿ ಅಂತ್ಯವ

ಯಾರು ಹುಡುಕಬಲ್ಲರು ನಿನ್ನ ಮೂಲವ..

ಎಷ್ಟೊಂದು ಸಂಗತಿಗಳ ನಿನ್ನೊಡಲಲ್ಲಿರಿಸಿಕೊಂಡಿರುವೆ

ಊಹೆಗೂ ನಿಲುಕದ ಸೋಜಿಗವು ನೀನು ಪ್ರಕೃತಿ..

 

ಸಾಲು ಸಾಲು ಬೆಟ್ಟಗುಡ್ಡಗಳ ಉಗಮವಾಯಿತು ಹೇಗೆ

ಹರಿಯುವ ನದಿ ತೊರೆ ಸಮುದ್ರಗಳ ಸೃಷ್ಟಿಯು ಹೇಗೆ

ಬಿಸಿಲು ಮಳೆ ಚಳಿ ಗಾಳಿಯ ನಿನ್ನಾಟವು ಹೇಗೆ

ಅರಿಯದಾಗಿದೆ ಇಂದಿಗೂ ಎನಗೆ ವೃಕ್ಷ ಮೊದಲ, ಬೀಜ ಮೊದಲ?

 

ಭೂಮಿ ಗಹಗಹಿಸಿ ನಕ್ಕರೆ ಆಗುವುದು ಭೂಕಂಪ

ಸಮುದ್ರ ಮನ ನೊಂದು ಅತ್ತರೆ ಆಗುವುದು ಪ್ರಳಯ

ನಿನಗಿಲ್ಲ ಯಾವ ಅಡೆತಡೆ, ನಿನಗಿಲ್ಲ ಯಾವುದೇ ಕರುಣೆ

ಉತ್ತರವೇ ಸಿಗದ ಪ್ರಶ್ನೆಯಾಗುಳಿದಿರುವೆ ನೀ ಪ್ರಕೃತಿ

Comments