ಅಭ್ಯಾಸ 10 ಅಭ್ಯಾಸದ ವಾರ್ಷಿಕೋತ್ಸವ ಅಭ್ಯಾಸದ ಗುರುವರ್ಯ ಡಾ ಎಚೆಸ್ವೀಯವರ ಮನೆಯಲ್ಲಿ "ಸಖಿ" ತಾರೀಖು ೨೪.೦೪.೨೦೧೧
ಮೊನ್ನೆ ಮೊನ್ನೆ ನಡೆದಂತಿದೆ!!! ಆದರೂ ಅಭ್ಯಾಸ ಶುರುವಾಗಿ ಒಂದು ವರುಷ ವಾಯ್ತು.
ಈ ಸಾರಿಯ ಅಭ್ಯಾಸ ಗುರುಗಳು ತಾವು ನಡೆಸದೇ ತಮ್ಮ ಶಿಷ್ಯಂದಿರ ಮೂಲಕ ತಾವು ಆರಂಭಿಸಿದ ಅಭ್ಯಾಸದ ಹಾದಿಯನ್ನು ಸಿಂಹಾವಲೋಕನ ಮಾಡ ಬಯಸಿದ್ದರು.
ಅದು ತುಂಬಾನೇ ಅಭೂತಪೂರ್ವವಾಗಿ ಒಂದು ಅಮ್ರತ ಸೀಂಚನದಂತೆ ನಡೆಯಿತು.
ಕುಮಾರಿ ಸ್ಫರ್ಷ ಅತ್ಯಂತ ಭಾವಪೂರ್ಣವಾಗಿ ಸುಮಧುರವಾಗಿ ಕುವೆಂಪುರವರ (ಅಂತರ ತಮಗೇ ಗುರು) ಬೇಂದ್ರೆ (ನಾನು ಬಡವಿ ಆತ ಬಡವ) ಪುತಿನ (ಕೃಷ್ಣನಾ ಕೊಳಲಿನಾ ಕರೆ ), ಕೆ ಎಸ್ ನ (ತೌರ ಸುಖದೊಳಗೆನ್ನ ಮರೆತಿಹಳು ಎನ್ನದಿರಿ),ಗೋ ಅಡಿಗ ( ಎದೆಯು ಮರಳಿ ತೊಳಲುತಿದೆ) ಎಚ್ ಎಸ್ಸ್ವೀ ( ನೀಲ ಮೇಘಶ್ಯಾಮಾತೀತ) ತನ್ಮಯತೆಯಿಂದ ಹಾಡುತ್ತಿದ್ದರೆ ಕುಳಿತವರೆಲ್ಲರನ್ನು ಆ ಭಾವಗಳ ಅಮಲಿನಲ್ಲಿ ತಲೆದೂಗುವಂತೆ ಮಾಡಿತ್ತು.
ಶ್ರೀಮತಿ ಕುಸುಮ ಅವರೂ ತಮ್ಮ ಮಧುರ ಕಂಠದಿಂದ "ಮಾಧವಾ ಯಾಕೆ ಕಾಡುತಿಹೆ ಬಡ ಗೋಪಿಕೆಯ" ಹಾಗೂ " ಅಮ್ಮಾ ನಾನು ದೇವರಾಣೆ" ಹಾಡಿ ಎಲ್ಲರನ್ನೂ ಭಾವದ ತನ್ಮಯತೆಯಲ್ಲಿ ಮುಳುಗೇಳುವಂತೆ ಮಾಡಿದ್ದರು.
ಅಭ್ಯಾಸ ನಡೆದು ಬಂದ ದಾರಿಯನ್ನು ಈ ಅಭ್ಯಾಸದ ನಡೆಸೋಣದ ರೂವಾರಿ ರಾಜಶೇಖರ ಮಾಳೂರರವರು ಹಂತಹಂತವಾಗಿ ಬಿಚ್ಚಿಟ್ಟರು. ನಾನು ಮೊದಲಿನ ಅಭ್ಯಾಸದಿಂದಲೇ ಇದರಲ್ಲಿ ಪಾಲುಗೊಳ್ಳುತ್ತಾ ಬಂದಿದ್ದರೂ ಅಭ್ಯಾಸವು ರೂಪುಗೊಂಡ ರೀತಿಯನ್ನು ಇವತ್ತೇ ಕೇಳಿ ತಿಳಿದೆ. ನಿಜವಾಗಿಯೂ ಗುರುಗಳ ಮಾರ್ಗದರ್ಶನದಲ್ಲಿ ಅತ್ಯುತ್ತಮವಾಗಿ ಮೂಡಿಬರುತ್ತಿರುವ ಈ ಅಭ್ಯಾಸವು ಸಾಹಿತ್ಯ ಆಸಕ್ತರನ್ನು ಎಲ್ಲೆಲ್ಲಿಂದಲೋ ತಮ್ಮ ದೈನಂದಿನ ಕೆಲಸ ಕಾರ್ಯಗಳ ಮಗ್ನತೆಯ ನಡುವೆಯೂ ಭಾವತ್ಮಕವಾಗಿ ಒಂದುಗೂಡಿಸಿದೆ ಮತ್ತು ಕನ್ನಡ ಸಾಹಿತ್ಯ ಪರಂಪರೆಯ ಇತಿಹಾಸದ ಪುಟ ಪುಟವನ್ನೂ ನಮ್ಮೆದುರು ಅನಾವರಣ ಮಾಡಿ ಅದರಲ್ಲಿ ಇನ್ನೂ ಆಸಕ್ತಿ ಹುಟ್ಟುವಂತೆ ಮಾಡಿದೆ. ಪಂಪ, ರನ್ನ, ನಾಗಚಂದ್ರ, ಜನ್ನ, ರಾಘವಾಂಕ, ಕುಮಾರವ್ಯಾಸ ಮಹಾನುಭಾವರ ಕಾವ್ಯಗಳನ್ನು ಗುರುಗಳು ಕಲಿಸಿದ ಪದ್ಯ ಭಾಗಗಳ ತಿರುಳುಗಳನ್ನು ಹೆಕ್ಕಿ ಹೇಳುತ್ತಾ ಅಂದಂದಿನ ದಿನದ ಅಭ್ಯಾಸದ ಕಾಲಕ್ಕೇ ನಮ್ಮೆಲ್ಲರನ್ನೂ ಕರೆದೊಯ್ದರು.
ಪಂಪ ವಿಕ್ರಮಾರ್ಜುನ ವಿಜಯ ವನ್ನು ಮನೋಹರ ಸಾಲಿಮಠ್ ರವರೂ ರನ್ನನ ಗಧಾಯುದ್ಧವನ್ನು ಶ್ರೀಕಾಂತ್ ಉಡುಪರೂ, ನಾಗಚಂದ್ರ ನ ರಾಮಚಂದ್ರ ಚರಿತ ಮಾನಸ ವನ್ನು ಚಂದನದೇವರೂ, ರಾಘವಾಂಕನ ಹರಿಶ್ಚಂದ್ರ ಕಾವ್ಯವನ್ನು ನಾಗರಾಜ ವಸ್ತಾರೆಯವರೂ, ಕುಮಾರವ್ಯಾಸನ ಭಾರತ ಕಥಾಮಂಜರಿಯನ್ನು ಪ್ರಸನ್ನ ಕುಲಕರ್ಣಿಯವರೂ ಅತ್ಯಂತ ಸಮರ್ಪಕವಾಗಿ ವಿವರಿಸಿದುದೂ ಅಪರೂಪದ ಕಲಾತ್ಮಕ ಪ್ರದರ್ಶಿನಿಯಾಗಿತ್ತು. ಅದರಲ್ಲೂ ನಾಗರಾಜ ವಸ್ತಾರೆಯವರು ತಮ್ಮದೇ ಅಪರೂಪದ ಕಾವ್ಯಮಯ ಭಾಷೆಯಲ್ಲಿ ಕೊಟ್ಟ ವಿವರಣೆ ಮತ್ತು ತನ್ನ ಉದ್ಯೋಗದ ತಿರುಳಿನ ಸಾಮ್ಯತೆಯ ಉಪಮೆಯ ಸೀಂಚನ ಅವರ ಕಲಾತ್ಮತೆಯ ದ್ಯೋತಕವೂ ಅನ್ನಿಸಿತು.
ಅನುಬಾವದಲ್ಲಿ ಸುರೇಶರು ತಮ್ಮದೇ ಮನೆಗೆಲಸ ಮಾಡಿದ್ದ, ಅಭ್ಯಾಸಕ್ಕೆ ಬಂದಿದ್ದ / ಬರುತ್ತಿದ್ದ ಪ್ರತಿಯೋರ್ವರನ್ನೂ ಸಂ-ದರ್ಶಿಸಿ ಅವರೆಲ್ಲರ ಮನದಿಂಗಿತವನ್ನೂ ಕ್ರೋಢೀಕರಿಸಿ ಮುಂಬರುವ ದಿನಗಳಲ್ಲಿ ಅಭ್ಯಾಸದ ಸ್ವರೂಪವನ್ನು ಯಾವ ಯಾವ ರೀತಿ ಬದಲಾವಣೆ ತರಬಹುದೆನ್ನುವ ಎಲ್ಲರ ಅನಿಸಿಕೆಗಳನ್ನು ಹನಿಹನಿಯಾಗಿ ವಿವರಿಸಿದರು.
ಮಧ್ಯೆ ಶ್ರೀಮತಿ ಎಮ್ ಆರ್ ಕಮಲ ರವರು ( ಕವಯಿತ್ರಿ , ಅಧ್ಯಾಪಕಿ ) ಈ ಸಾರಿ ಅಭ್ಯಾಸವನ್ನು ಅಭ್ಯಸಿಸಿದ ಶಿಷ್ಯಂದಿರ ಮೇಲಿನ ಪಾಠಗಳ ಬಗ್ಗೆ ನಿರರ್ಗಳವಾಗಿ ಹೊಗಳಿ ಹೇಳಿದ ಪರಿಯಲ್ಲಿ ಎಲ್ಲಾಅಭ್ಯಾಸಿಗಳಿಗೂ ಗುರುಗಳಿಗೂ ಒಂದು ಹಿರಿಮೆ ತಂದಿತು.
ತನ್ನರಿವು ಕಡಿಮೆಯೇ ಎನ್ನುತ್ತಿದ್ದ ಪ್ರತಿಯೋರ್ವರೂ ಅವರಿಗೆ ಮೀಸಲಿಟ್ಟ ಹತ್ತು ನಿಮಿಷದ ಅವಧಿಯನ್ನು ಲಂಘಿಸಿ ಮುಂದುವರಿಯುತ್ತಿದ್ದುದು ಅವರ ಅಭ್ಯಾಸದ ಕಲಿಕೆ ಮತ್ತು ಪ್ರದರ್ಶನದ ಅಪರೂಪದ ಕುತೂಹಲಕಾರೀ ವಿಷಯವಾಗಿತ್ತು, ಇದೇ ನಮ್ಮ ಗುರುಗಳಿಗೂ ಅಲ್ಲಿದ್ದ ಸಮಸ್ತ ಅಭ್ಯಾಸಿಗಳ ಒಮ್ಮನಸ್ಸಿನ ಅನುಭವವಾಗಿತ್ತು. ಇದೇ ವಿಷಯವನ್ನು ಮುಂದಿನ ತಮ್ಮ ಮಾತುಗಳಲ್ಲಿ ಮಾನ್ಯ ಎಚೆಸ್ವೀಯವರು ಕಕ್ಕುಲತೆಯಿಂದ ಅರುಹಿದರು. ಮುಂಬರುವ ದಿನಗಳಲ್ಲಿ ಅಭ್ಯಾಸವು ಸರ್ವಾಂಗ ಸುಂದರವಾಗಿ ಹೊರಹೊಮ್ಮಲಿದೆ ಎಂದೂ ತಮ್ಮ ಮನದಿಂಗಿತ ತಿಳಿಸಿದರು.
ಮುಂದಿನ ಅಭ್ಯಾಸದ ದಿನಗಳಲ್ಲಿ ಅಲ್ಲಮ, ಅಕ್ಕ, ಬಸವಣ್ಣ ರ ವಚನ , ಕನಕ ಪುರಂದರ ರ ದಾಸ ಸಾಹಿತ್ಯದ ಮಜಲುಗಳನ್ನೂ,ಚಂಪೂ, ಮತ್ತು ನವ್ಯ ಕಾವ್ಯದ ಪರಿಯನ್ನೂ, ಸವಿಯುವ ಭಾಗ್ಯ ಅಭ್ಯಾಸಿಗಳ ಪಾಲಿಗಾಗಲಿದೆ.
ಮುಖ್ಯ ಅತಿಥಿಗಳಾಗಿ ಬರಬೇಕಿದ್ದ ನರಹಳ್ಳಿ ಬಾಲಸುಬ್ರಮಣ್ಯರೂ , ಶ್ರೀಯುತ ಟಿ ಪಿ ಅಶೋಕರೂ, ಎನ್ ಎಸ್ ಲಕ್ಷ್ಮೀ ನಾರಾಯಣ ಭಟ್ಟರೂ ನಮ್ಮೆಲ್ಲರ ಜತೆಗೂಡಿದ್ದೂ ಒಂದು ಸುಯೋಗವಾಗಿತ್ತು.
ನಂತರ ಸುಗ್ರಾಸ ಭೋಜನ, ಒಂದರ ಹಿಂದೊಂದು ಬರುತ್ತಿರುವ ಭಕ್ಷಗಳು, ಪ್ರತಿಯೋರ್ವರನ್ನೂ ಒತ್ತಾಯಿಸಿ ಉಣಬಡಿಸುತ್ತಿರುವ ರೀತಿ ಎಲ್ಲವೂ ಅವರನ್ನು ನನ್ನ ಮತ್ತು ಬಂದವರೆಲ್ಲರ ಮನದಲ್ಲೂ ಸಹ ಸಂಭಂದಿಗಳ ಅನುಭವ ಆಗಿದ್ದುದು ಸುಳ್ಳಲ್ಲ. ಗುರುಗಳು ತಾವು ಸ್ವತಹ ಜ್ವರದಿಂದ ಬಳಲಿದ್ದರೂ ಏನೂ ಆಗದ ಹಾಗೆ ನಮ್ಮೆಲ್ಲರ ಜತೆ ಸಹಕರಿಸಿ ಉಪಚರಿಸಿದ ರೀತಿಗೆ ಅವರೇ ಅವರಿಗೆ ಮಾದರಿ.ನಿಜವಾಗಿಯೂ ಕನ್ನಡಕ್ಕೆ ನಮಗೆ ಅಭ್ಯಾಸವನ್ನು ತೋರಿಸಿ, ಮಾರ್ಗದರ್ಶಕರಾದ ಮಾನ್ಯ ಡಾ ಎಚ್ ಎಸ್ವೀಯವರಿಗೆ ಏನು ಕೊಟ್ಟರೂ ಕಡಿಮೆಯೇ. ಇಂತಹವರು ನೂರ್ಕಾಲ ಬಾಳಲಿ. ಅಭ್ಯಾಸವೂ ಹತ್ತಾರು ವರುಷ ನಡೆದು ಸಾಹಿತ್ಯಾಸಕ್ತರೆಲ್ಲರ ಕಣ್ಣಾಗಲಿ.
Comments
ಉ: ಅಭ್ಯಾಸ 10 ಅಭ್ಯಾಸದ ವಾರ್ಷಿಕೋತ್ಸವ ಅಭ್ಯಾಸದ ಗುರುವರ್ಯ ಡಾ ...
ಉ: ಅಭ್ಯಾಸ 10 ಅಭ್ಯಾಸದ ವಾರ್ಷಿಕೋತ್ಸವ ಅಭ್ಯಾಸದ ಗುರುವರ್ಯ ಡಾ ...
In reply to ಉ: ಅಭ್ಯಾಸ 10 ಅಭ್ಯಾಸದ ವಾರ್ಷಿಕೋತ್ಸವ ಅಭ್ಯಾಸದ ಗುರುವರ್ಯ ಡಾ ... by partha1059
ಉ: ಅಭ್ಯಾಸ 10 ಅಭ್ಯಾಸದ ವಾರ್ಷಿಕೋತ್ಸವ ಅಭ್ಯಾಸದ ಗುರುವರ್ಯ ಡಾ ...
ಉ: ಅಭ್ಯಾಸ 10 ಅಭ್ಯಾಸದ ವಾರ್ಷಿಕೋತ್ಸವ ಅಭ್ಯಾಸದ ಗುರುವರ್ಯ ಡಾ ...
ಉ: ಅಭ್ಯಾಸ 10 ಅಭ್ಯಾಸದ ವಾರ್ಷಿಕೋತ್ಸವ ಅಭ್ಯಾಸದ ಗುರುವರ್ಯ ಡಾ ...
In reply to ಉ: ಅಭ್ಯಾಸ 10 ಅಭ್ಯಾಸದ ವಾರ್ಷಿಕೋತ್ಸವ ಅಭ್ಯಾಸದ ಗುರುವರ್ಯ ಡಾ ... by prasannakulkarni
ಉ: ಅಭ್ಯಾಸ 10 ಅಭ್ಯಾಸದ ವಾರ್ಷಿಕೋತ್ಸವ ಅಭ್ಯಾಸದ ಗುರುವರ್ಯ ಡಾ ...