ಮೌನವೇ ರೂಢಿಯಾದರೆ...?!

ಮೌನವೇ ರೂಢಿಯಾದರೆ...?!

ಮೌನವೇ ರೂಢಿಯಾದರೆ...?!

"ಸಖೀ,
ನೀನು
ಎಲ್ಲಿಯತನಕ
ಮೌನಿಯಾಗಿರಲು
ಬಯಸುವೆಯೋ
ಅಲ್ಲಿಯತನಕ
ನಾನು ನಿನ್ನನ್ನು
ಮಾತನಾಡಿಸಲಾರೆ,

ಆದರೂ,
ನಿನ್ನ ಮೌನಕ್ಕೆ
ಕಾರಣವೇನೆಂದು
ಒಮ್ಮೆಯಾದರೂ
ಮೌನ ಮುರಿದು
ಹೇಳಿಬಿಡು ಬಾರೆ"

"ಗೆಳೆಯಾ,
ಈ ಮೌನ
ಕೋಪದಿಂದಲ್ಲ,
ಮಾತು
ಮನ ಕೆಡಿಸಿತು,
ಮೌನ
ಮನ ಗೆದ್ದಿತು,
ಅದ್ಯಾಕೋ
ಇಂದು
ಮೌನವೇ
ಮಾತಿಗಿಂತ
ಪರಿಶುದ್ಧವೆನಿಸಿತು"

"ಮಾತಿನಿಂದ
ಕೆಡುವುದಕ್ಕೆ
ಮನವೇನು
ಕರೆದು
ತೆರೆದಿಟ್ಟ
ಹಾಲಲ್ಲವಲ್ಲಾ?
ಮಾತುಗಳು
ಎಂತಿದ್ದರೇನು
ಶುದ್ಧವಾದ
ಮನವದು
ಕೆಡಬಾರದಲ್ಲಾ?

ಮೌನ
ಶುದ್ಧವೆಂಬ
ಮಾತು ಸುಳ್ಳಲ್ಲ,
ಆದರೂ
ಸಂವಾದವಿಲ್ಲದೇ
ಬರಿಯ ಮೌನ
ಅದೆಷ್ಟು ಪರಿಶುದ್ಧ
ಆಗಿದ್ದರೇನು?

ಅಲ್ಲದೇ,
ಈ ಮೌನ
ಹೀಗೆಯೇ
ನಮ್ಮಿಬ್ಬರಿಗೂ
ರೂಢಿಯಾಗಿ
ಬಿಟ್ಟರೆ
ನಿಜಹೇಳು
ನಾವು ಸಹಿಸ
ಬಲ್ಲೆವೇನು?!"
**********
ಆತ್ರಾಡಿ ಸುರೇಶ ಹೆಗ್ಡೆ

Rating
No votes yet

Comments