ಬೆಳದಿಂಗಳಾಗಿ !!!
ಕವನ
ಭಾವನೆಗಳು ಹೇಳದೇ, ನಾ ಮೊಕಿಯಾದೆ,
ಮೌನದಿ ನಾ ಕರೆದರೆ,
ನೀ ಬಂದಿಹೆ ಬೆಳದಿಂಗಳಾಗಿ !
ಅಪ್ಪಿ ನಲಿದಿರುವೆ, ತಬ್ಬಿ ಅತ್ತಿರುವೆ,
ನೋವು ನಲಿವಿಗೆ, ನೀ ಜೊತೆಯಾಗಿರುವೆ,
ನೋವೆಲ್ಲಾ ನಲಿವಾಗಿ,
ನೀ ಬಂದಿಹೆ ಬೆಳದಿಂಗಳಾಗಿ !
ಮೌನವೇ ಮಾತಾಗಿ, ಪ್ರೀತಿಯ ಹೂವಾಗಿ,
ನಿನ್ನ ನಗುವಲ್ಲಿ ನಾ ಬೆರೆತಿರುವೆ,
ಆ ಪ್ರೀತಿಯೇ ಮೌನವಾಗಿ,
ನೀ ಬಂದಿಹೆ ಬೆಳದಿಂಗಳಾಗಿ !
ನೋಡುವ ಆಸೆಯು ದಿನವೆಲ್ಲಾ ಕಾಡಿ
ಇರುಳಲ್ಲಿ ನೀ ಬಂದಾಗ
ನಾಚಿ ನಾ ನೀರಾಗಿ,
ನೀ ಏಕೆ ಬಂದಿಹೆ ಬೆಳದಿಂಗಳಾಗಿ ?
ಬೆಸೆಯುತ್ತ ಕೈಯನ್ನು ಸಾಗುವ ನಾವಿನ್ನು,
ನೂರೆಂಟು ಮೈಲಿ ಜೊತೆಯಲಿ
ಅಡಗಿದೆ ಪ್ರೀತಿ ಮನದಲಿ
ನೀ ಬಂದಿಹೆ ಬೆಳದಿಂಗಳಾಗಿ !
Comments
ಉ: ಬೆಳದಿಂಗಳಾಗಿ !!!
In reply to ಉ: ಬೆಳದಿಂಗಳಾಗಿ !!! by siddhkirti
ಉ: ಬೆಳದಿಂಗಳಾಗಿ !!!
ಉ: ಬೆಳದಿಂಗಳಾಗಿ !!!
In reply to ಉ: ಬೆಳದಿಂಗಳಾಗಿ !!! by Saranga
ಉ: ಬೆಳದಿಂಗಳಾಗಿ !!!