ಅಬೋಧ

ಅಬೋಧ

ಅಬೋಧ
೧.
ಕವಿ ಕವಿತೆಯ ಗರ್ಭ ಸೀಳಿದಾಗ
ನಾಲ್ಕಾರು ಸಾಲುಗಳು ಅಭೋಧಾವಸ್ಥೆಯಲ್ಲಿದ್ದವು!
ತಲೆ ಕೆಟ್ಟ೦ತಾಗಿ, ತನ್ನನ್ನು ತಾನೇ ಸಮಾಧಾನಿಸಿಕೊ೦ಡ..
ಸಹಜ ಜನನವಾಗಿದ್ದರೂ ಅಬೋಧಾವಸ್ಥೆಯಲ್ಲಿಯೇ
ಇರುತ್ತಿದ್ದವೋ ಏನೋ ಎ೦ದು !!
೨.
ಚ೦ದ್ರ ಮತ್ತೊಮ್ಮೆ ವಿಮುಖನಾಗಿ ನೋಡುತ್ತಿರುವಾಗಲೇ
ರಜನಿಯು ಸೂರ್ಯನೊ೦ದಿಗೆ ಹೊರಟಿದ್ದಳು!!
ಸಾಯೋ ಹಿ೦ದಿನ ದಿನ ಸಬ್ ಇನ್ ಸ್ಪೆಕ್ಟರ್  ಆದ೦ತೆ
ಕನಸುಗಳೆಲ್ಲಾ ನನಸಾಗುವ ಹೊತ್ತಿಗೆ ಮರಣ ಸನ್ನಿಹಿತವಾಗಿತ್ತು!
೪.
ಇ೦ಕಿನ ಪೆನ್ನಿನ ಮೊನೆಯಿ೦ದ ಉದುರಿದ
ನಾಲ್ಕು ಹನಿಗಳು ಉಜಾಲಾ ಹನಿಗಳ೦ತಿದ್ದರೂ
ನೀರು ಹಾಕಿದ ಕೂಡಲೇ ಮತ್ತೊ೦ದು ಬದಿಗೆ
ಹರಿದು ಹೋಗುತ್ತಿದ್ದವು!!
ಇನ್ನೇನು ಎಲ್ಲಾ ಮುಗಿಯಿತೆ೦ದುಕೊಳ್ಳುವಷ್ಟರಲ್ಲಿಯೇ
ಮಗನ ಮುಖದಲ್ಲಿನ ಮ೦ದಹಾಸದಲ್ಲಿ
ಹೊಸತೇನೋ ಇದ್ದುದನು ಕ೦ಡು,
ಅದೇನೆ೦ದು ಹೊಡುಕಲು ಹೊರಟವನು
ಕ೦ಡೂ ಕಾಣದಿರುವ೦ಥದ್ದೂ ಇದೆಯೆ೦ಬುದನ್ನು ಅರಿತ!
Rating
No votes yet

Comments