ಇದ್ಯಾರು ಕೊಟ್ಟ ಶಾಪ....
ಕವನ
ನಾ ಹುಟ್ಟಿದಾಗಿನಿಂದ,
ನೀ ನಿಲ್ಲದಂತೆ ಓಡುತಿರುವೆ,
ಇದ್ಯಾರು ಕೊಟ್ಟ ಶಾಪ ನಿನಗೆ.....
ನಾ ಅತ್ತರೂ ನೀ ನಿಲ್ಲುತ್ತಿಲ್ಲ ,
ನಾ ನಕ್ಕರೂ ನೀ ನಿಲ್ಲುತ್ತಿಲ್ಲ ,
ನಾ ಕರೆದರೂ ನೀ ಕೇಳುತಿಲ್ಲ ,
ಇದ್ಯಾರು ಕೊಟ್ಟ ಶಾಪ ನಿನಗೆ .....
ಎಸ್ಟೋ ನಡೆದವು ಶಾಂತಿ ಕ್ರಾಂತಿ,
ಏನೇ ಆದರು ನಿನಗ್ಯಾಕಿಲ್ಲ ವಿಶ್ರಾಂತಿ,
ಇದ್ಯಾರು ಕೊಟ್ಟ ಶಾಪ ನಿನಗೆ .....
ಓ ಸಮಯವೇ ಬಾ ನನ್ನೊಡನೆ ,
ಹೇಳು ನನಗೆ ನೀ ಬಂದೊಡನೆ,
ಇದ್ಯಾರು ಕೊಟ್ಟ ಶಾಪ ನಿನಗೆ ...........
Comments
ಉ: ಇದ್ಯಾರು ಕೊಟ್ಟ ಶಾಪ....