ತಾನೇ ಸಾಕಿದ್ದ ಒಸಾಮಾನ ಬಲಿತೆಗೆದುಕೊಂಡ ಒಬಾಮಾ!

ತಾನೇ ಸಾಕಿದ್ದ ಒಸಾಮಾನ ಬಲಿತೆಗೆದುಕೊಂಡ ಒಬಾಮಾ!

 

ತಾನೇ ಸಾಕಿದ್ದ ಒಸಾಮಾನ ಬಲಿತೆಗೆದುಕೊಂಡ ಒಬಾಮಾ!

ಅಫ್ಘಾನಿಸ್ತಾನದಿಂದ ಅಮೇರಿಕಾ ಸೇನೆ ಮರಳುವ ದಿನ ಸನ್ನಿಹಿತವಾಗಿದೆ
ಹಾಗಾಗಿ ಒಸಾಮಾನ ಕೊಲೆಯೂ ಆ ಅಪರಾತ್ರಿಯಲ್ಲಿ ನಡೆದುಹೋಗಿದೆ

ಒಸಾಮಾನಿದ್ದಷ್ಟೂ ದಿನ ಪಾಕಿಗೆ ಅಮೇರಿಕಾ ಭರ್ಜರಿ ಸಹಾಯ ನೀಡುತ್ತಿತ್ತು
ಇನ್ನು ಮುಂದೆ ಆರ್ಥಿಕ ಸಹಾಯಕ್ಕೂ ಬಂದರೂ ಬರಬಹುದೇನೋ ಆಪತ್ತು

ಪಾಕಿನ ಸೈನ್ಯಕ್ಕೆ ಗೊತ್ತಿಲ್ಲದಂತೆ ದಂಡು ಪ್ರದೇಶದಲ್ಲಿ ಆತ ಅದೆಂತು ಅಡಗಿದ್ದ
ಪಾಕಿನವರಿಗೆ ಅರಿವಿಲ್ಲದೇ ಅಮೇರಿಕಾದವರ ಕೈಗಾತ ಹೇಗೆ ಈಗ ಸಿಕ್ಕಿಬಿದ್ದ

ಅವರ ನೆಲದಲ್ಲಿ ಹೇಳದೇ ಕೇಳದೇ ಕಾರ್ಯ ನಡೆಸಿದ್ದಕ್ಕೆ ಪಾಕಿನ ಆಕ್ರೋಶ
ಪಾಕಿನ ಸಹಾಯಕ್ಕೆ ಧನ್ಯವಾದ ಸಲ್ಲಿಸಿದ ಒಬಾಮಾ ಪಡುತ್ತಿದ್ದ ಸಂತೋಷ

ಕಥೆಗಳ ಹೇಳುವುದು ಪಾಕಿನವರಿಗೆ ಗೊತ್ತಿದ್ದಂತೆ ಆ ದೊಡ್ಡಣ್ಣನಿಗೂ ಗೊತ್ತು
ನಾವೆಲ್ಲಾ ಮೂಗಿನ ಮೇಲೆ ಬೆರಳಿಟ್ಟು ಬರೀ ಆಶ್ಚರ್ಯ ಚಕಿತರು ಈ ಹೊತ್ತು

ಮುಂದಿನ ಚುನಾವಣೆಗೆ ಈಗಿಂದಲೇ ತಯಾರಿ ನಡೆಸಬೇಕಾಗಿದೆ ಒಬಾಮಾ
ಹಾಗಾಗಿ ಬಲಿಯ ಕುರಿಯಂತೆ ಹತನಾಗಿ ಹೋದ ನೋಡಿ ಪಾಪಿ ಒಸಾಮಾ

ಸೈನ್ಯ ಹಿಂಪಡೆಯದೇ ಚುನಾವಣೆಯಲ್ಲಿ ಒಬಾಮಾಗೆ ಮರುಜಯ ಸುಲಭವಲ್ಲ
ಹಾಗಾಗಿ ಇಷ್ಟುದಿನ ಸಾಕಿದ್ದ ಒಸಾಮನನ್ನು ಬಲಿತೆಗೆದುಕೊಂಡು ಬಿಟ್ಟನಲ್ಲಾ!!
*********************************************************

Rating
No votes yet

Comments