ಪಕ್ಷಿನೋಟ - ಏಪ್ರಿಲ್ ಮಾಸದಲ್ಲಿ ಸಂಪದ
ಕಳೆದ ತಿಂಗಳುಗಳಿಗೆ ಹೋಲಿಸಿದರೆ ಏಪ್ರಿಲ್ ನಲ್ಲಿ ಒಟ್ಟು ಬರಹಗಳ ಸಂಖ್ಯೆ ಕಡಿಮೆ ಎಂದೆ ಹೇಳಬೇಕು.ಬರಿ 340 ಅಷ್ಟೆ ! ನೆನಪಿಡಿ ಕಳೆದವರ್ಷ ಕೆಲವು ತಿಂಗಳು ಸಾವಿರ ದಾಟಿದೆ.
ಆದರೆ ಬರಹ, ಲೇಖನ, ಮತ್ತು ಕವನಗಳು ಗುಣಮಟ್ಟದಲ್ಲಿ ಉತ್ತಮ್ಮವಾಗಿದ್ದವು.ಬದುಕಿನ ಬಗ್ಗೆ ಹೋಸನೋಟಗಳು ವ್ಯಕ್ತವಾದವು. ಹಲವು ಚಿಂತನಪೂರ್ಣ ಲೇಖನಗಳಂತೆ, ಅಷ್ಟೆ ನವಿರು ಹಾಸ್ಯದ ಬರಹಗಳು ಪ್ರಕಟಗೊಂಡವು . ಆದರು ಏಕೊ ಏನೊ ವಾಗ್ವಾದಗಳಿಲ್ಲದ್ದು ವಿಮರ್ಷೆಗಳಿಲ್ಲದೆ ಕಳೆದ ತಿಂಗಳು ಏಕೊ ಸಪ್ಪೆ ಸಪ್ಪೆ ಅನ್ನಿಸಿತು. ಎಲ್ಲ ಸಂಪದಿಗರು ತಮ್ಮ ಪ್ರತಿಕ್ರಿಯೆಗಳನ್ನು ತುಂಬಾ ಲೆಕ್ಕಚಾರವಾಗಿ ಹಾಕಿದ್ದು ವಿಷೇಶವಾಗಿತ್ತು. ಅದು ಎಷ್ಟು ಲೆಕ್ಕಚಾರವೆಂದರೆ ಬಹಳಷ್ಟು ಲೇಖನಗಳಿಗೆ, ಬ್ಲಾಗ್ ಬರಹಗಳಿಗೆ, ಕವನಗಳಿಗೆ 'ಸೊನ್ನೆ' ಪ್ರತಿಕ್ರಿಯೆ!. ಯಾವುದೆ ಕಾವೇರಿದ ಚರ್ಚೆಗಳಿರಲಿಲ್ಲ. ಹಲವು ಲೇಖಕರು ಕಾಣೆಯಾಗಿದ್ದರು.ಬರೆದವರು ತಮ್ಮ ಮುಖದರ್ಶನವನ್ನು ಅಪರೂಪವಾಗಿಸಿದರು. ಬೇಸಿಗೆ ರಜೆಯಲ್ಲಿ ಮಕ್ಕಳು ತುಂಬಾ ಗಲಾಟೆ ಮಾಡಿದಾಗ ಮನೆಯಲ್ಲಿ ಹಿರಿಯರು ಮಕ್ಕಳನ್ನು ಗದರಿಸುತ್ತಿದ್ದು, ಛೇ ಎಂತಾ ಮಕ್ಕಳು ಎಷ್ಟು ಗಲಾಟೆ ಯಾವುದಕ್ಕು ಬಿಡುವದಿಲ್ಲ ಅಂತಾ ಕೋಪಮಾಡಿ ನಂತರ ರಜೆ ಮುಗಿಸಿ ಮಕ್ಕಳೆಲ್ಲ ಊರಿಗೆ ಹೊರಟುಹೋದರೆ ನಂತರ ಪಿಚ್ಚೆನಿಸುವ ಮನೆಯಲ್ಲಿ ಕುಳಿತು ಅಯ್ಯೊ ಮಕ್ಕಳೆಲ್ಲ ಹೊರಟುಹೋದರೆ ಗಲಾಟೆಯೆ ಇಲ್ಲ ಎಂದು ಬೇಸರಪಡುವ ಮನಸಿನ ರೀತಿ ಈ ತಿಂಗಳ ಸಂಪದದ ಸ್ವಘೋಶಿತ ಶಾಂತಿ ಇತ್ತು.
ಎಲ್ಲ ವಿಭಾಗದಲ್ಲಿ ಪ್ರಕಟವಾದ ಕೆಲವು ಪ್ರಕಟಣೆಗಳು ಈ ರೀತಿ ಇವೆ.
ಬ್ಲಾಗ್ ಬರಹಗಳು
ಗಣೇಶರಿಂದ "ಭಟ್ಟರಿಂದ ಹೊಸಪತ್ರಿಕೆ' ಎಂದು ಪ್ರಾರಂಬವಾದ ಬ್ಲಾಗ್ ಬರಹಗಳು ಸಾಕಷ್ಟು ಸಂಖ್ಯೆಯಲ್ಲಿ ಬಂದವು.ಸಾಕಷ್ಟು ಬರಹಗಳು ಯುಗಾದಿಯ ಶುಬಾಷಯಕ್ಕೆ, ಕ್ರಿಕೇಟ್ ಗೆ, ಅಣ್ಣಹಜಾರೆಯವರ ಭ್ರಷ್ಟಾಚಾರದ ಹೋರಾಟಕ್ಕೆ, ಅಂಬೇಡ್ಕರ್ ರವರ ನಮನಕ್ಕೆ ಕಡೆಯಲ್ಲಿ ಬಾಬರವರ ಮರಣದ ವಿಷಾದಕ್ಕೆ ಮಿಸಲಾದವು.
ನಾವಡರು 'ಖಾಲಿಮನಸೀಗ ಗರಿಗೆದರತೊಡಗಿದೆ ಎಂದು ಪ್ರಾರಂಬಿಸಿ, ತಮ್ಮ ಯೋಚಿಸಲೊಂದಿಷ್ಟು ಕಂತುಗಳ ಮೂಲಕ ಸಾಕಷ್ಟು ವಿಚಾರಗಳನ್ನು ಹರಿಸಿದರು.
ಆಸುರವರು 'ಸಿಂಹಳೀಯರ ಮುಂದೆ ಮಂಡಿಯೂರಲಾಗದು" ಎಂದು ಅರ್ಭಟಿಸುತ್ತ ಕ್ರಿಕೇಟ್ ಬಗ್ಗೆ ಪ್ರಾರಂಬಿಸಿ, 'ಮುಂಗುರಳ ಮೆರವಣಿಗೆಯ' ನವಿರು ಹಾಸ್ಯದ ಕವಿತೆಯನ್ನು ಬರೆದು. 'ಮೌನವೇ ರೂಢಿಯಾದರೆ?" ಎನ್ನುತ್ತ ಮೌನತಾಳಿದವರು, ಅಂಬೇಡ್ಕರ ದಿನಾಚರಣೆಗೆ '.... ಬಾಬ ಸಹೇಬ" ಎನ್ನುತ್ತ ನಮ್ಮ ವಿವೇಚನೆಗಳನ್ನು ಉದ್ದೀಪನಗೊಳಿಸಿದರು.
ಕವಿನಾಗರಾಜರು ಎಂದಿನಂತೆ ತಮ್ಮ "ಮೂಡ ಉವಾಚ" ಮೂಲಕ ಸಂಪದಿಗರ ಮನಸ್ಸು ಗಳನ್ನು ತಟ್ಟಿದರೆ, ರಘುಮೂಳೀಯರು ಭಾಮಿನಿಯಲ್ಲದ ವಸುಮತಿ ರಚಿಸಿ ನಂತರ ಏಕೊ ತಿಂಗಳು ಪೂರ ಮೌನವಾದರು.
ಪ್ರಿಯತಮೆಯೊಬ್ಬಳ ಮನಸಿನ ಆಲಾಪ ವನ್ನು 'ಬಾನಂಗಳದಿ ... ಚಂದ್ರಮ" ದಲ್ಲಿ ಗೋಪಿನಾಥರು ಚಿತ್ರಿಸಿ ನಂತರ ಎಲ್ಲರ ಪ್ರಶ್ನೆಗಳಿಗು 'ನಿರುತ್ತರ' ರಾದರು.
ಗಣೇಶರ 'ಭಾಮಿನಿ ಭವಿಷ್ಯ' ವನ್ನು ಪೂಣೆವಾರಿಯರ್ಸ್ ಗಳು ಸುಳ್ಳುಮಾಡಲು ಹೊರಟರೆ ಜಯಂತರು ಅದೆ ಐಪಿಲ್ ಸರಣಿಯಲ್ಲಿ ನರ್ತಿಸುವ ನವಿಲುಗಳನ್ನು ನೋಡಿ ಸ್ಪೂರ್ತಿಗೊಂಡರೊ ಅಥವ ಮಳೆಯ ನರ್ತನಕ್ಕೆ ಮರುಳಾದರೊ ಎನ್ನುವಂತೆ 'ನಾಚಿ ನಾಚಿ ನರ್ತಿಸುತಿಹಳು' ಎಂದು ಕವನ ರಚಿಸಿದರು.
ಗುರುರಾಜರಿಗೆ 'ಸಂಪದಕ್ಕೆ ಮರಳಿದ ಸಂಭ್ರಮ" ಹಾಗೆ ಸಂಪದಿಗರಿಗೂ ಸಹ !
ಸತ್ಯನಾರಾಯಣರು "ಕುಡುಕರಾಗಬೇಕೆ ಇಷ್ಟಕ್ಕೆ" ಎಂದರೆ , ಚೇತನ್ ಕೋಡುವಳ್ಳಿ ಯವರು ಎನೊ ಕೇಳಿಸಿಕೊಂಡು "ನನಗು ಸ್ವಲ್ಪ ಕೊಡಿ" ಅಂದುಬಿಡೋದೆ !
ಮತ್ತೆಲ್ಲ ಮಳೆಯ ಸಂಭ್ರಮ 'ಈ ಮಳೆಯೆ ಹಾಗೆ" ಅಂತ ರಶ್ಮಿರವವ ದ್ವನಿಯಿದ್ದರೆ ಹಲವರು ಅದಕ್ಕೆ ದ್ವನಿಸೇರಿಸಿದರು, ಆದರೆ ತಿಂಗಳಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಪ್ರಸನ್ನರು "ನಿನ್ನೆಯ ಮಳೆ" ಎನ್ನುತ್ತ ಅದಕ್ಕೆ ಹೊಸ ಅಯಾಮವನ್ನು ಕೊಟ್ಟರು
ನಂತರ ಸತ್ಯಸಾಯಿಬಾಬರ ಮರಣದ ವಿಷಾದ ಸತ್ಯಚರಣರಿಂದ ಭಾವ ಪೂರ್ಣ ನಮನ, ಆಸುರವರಿಂದ ಶ್ರದ್ದಾಂಜಲಿ ! ಸದಾನಂದರ ಸಹದ್ವನಿ "ಬಾಬ ಮತ್ತೆ ಬನ್ನಿ"
ಆಚಾರ್ಯರ 'ಪಾಪ' ನಿವೇದನೆಯ ತುಮಲದ ಕಥೆ, ನಡುವೆ ಗೋಪಾಲ್ ರವರಿಂದ ನವಿರುಹಾಸ್ಯದ ಲೇಖನ " ಇರುವದೆಲ್ಲವ ಬಿಟ್ಟು..." ಎಲ್ಲರ ಮುಖದಲ್ಲಿ ನಗು ಅರಳಿಸಿತು.
ಸುನಿಲರ ತಪುರಾಣ , ಹಂಸಾನಂದಿ ಯವರಿಂದ ಯಶೋದ ಕೃಷ್ಣರ ಸಲ್ಲಾಪ 'ಕಾಯ ಮರೆತಳಯ್ಯ..." ಲೇಖನ
ಬ್ಲಾಗ್ ಬರಹಗಳಿಗೆ ಎಂದಿನಂತೆ ಸಾಕಷ್ಟು ಪ್ರತಿಕ್ರಿಯೆಗಳು ಮೂಡಿಬಂದವು. ಹಾಗೆ ಈ ತಿಂಗಳಲ್ಲಿ ಬ್ಲಾಗ್ ಬರಹಗಳು ಹೆಚ್ಚೆಚ್ಚು ಬಂದವು
ಲೇಖನಗಳು:
'ನಿದ್ರಾದೇವಿಯ ಮಹಾತ್ಮೆ" ಯೊಂದಿಗೆ ಜಯಂತ್ ಲೇಖನವಿಭಾಗ ಪ್ರಾರಂಬಿಸಿ ಮಳೆಗೊ ಒಬ್ಬಟ್ಟಿನ ಮದಕ್ಕೊ ಲೇಖನವಿಭಾಗದಲ್ಲಿ ಸ್ವಲ್ಪ ತೂಕಡಿಕೆ, ಯುಗಾದು ಶುಭಾಷಯಗಳ ಪೂರ, ಕ್ರಿಕೆಟ್ ನ ಉನ್ಮಾದ, ರಾಮಸ್ಮರಣೆ ಈ ಬಾರಿಯ ಲೇಖನಗಳ ವಿಷಯಗಳು.
ಕವಿನಾಗರಾಜರು ದೇವರನ್ನು ದೇವರ ಪಾಡಿಗೆ ಬಿಟ್ಟು ಬಿಡೋಣ ಎಂಬ ವೈಚಾರಿಕ ಲೇಖನದೂಂದಿಗೆ ಪ್ರಾರಂಬಿಸಿ ಅವರು ಕಡೆಯಲ್ಲಿ ಸಂಪ್ರದಾಯ ಸಂಕೋಲೆಗಳಾಗದಿರಲಿ ಸಂಪದಿಗರ ವೈಚಾರಿಕ ಮನೋಭಾವನೆಯನ್ನು ದಾಖಲಿಸಿದರು.
ನಂತರ ಅಣ್ಣ ಹಾಜರೆಯವರ ಭ್ರಷ್ಟಚಾರದ ಪ್ರತಿದ್ವನಿಯಾಗಿ ಹಲವು ಲೇಖನಗಳು ಸಂತೋಶ್, ಸೋಮಶೇಖರ, ಸಪ್ತಗಿರಿವಾಸ ಹಾಗು ದಿವಾಕರರಿಂದ.
ನಂತರ ಶ್ರೀನಾಥ್ ರವರ ಸವಿ ಸವಿ ನೆನಪು ಎಂದು ಸಿನಿಮಾ ಅನುಕರಣೆಯ ಲೇಖನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.ನಾಗರತ್ನರವರು ರಾಮಚಂದ್ರನ ಬಗೆಗು ಗೋಪಿನಾಥರು ವಾಕ್ಪತದ ಬಗೆಗು ಬರೆದು ಕಡೆಯವರಿಗು ಸಾಕಷ್ಟು ಮೌನವಾದರು [ ಆಸು ರವರ ಪ್ರಭಾವ ?..... :-) ]
ಭಕುಳ ಎಂಬ ಪುಷ್ಪದ ಬಗ್ಗೆ ಶಶಿದರರವರು, ಹಾಗು ಸಾಕಷ್ಟು ಪ್ರಕೃತಿ ಪ್ರೇಮದ ಬಗ್ಗೆ ನಂದೀಶ ಬಂಕೇನ ಹಳ್ಳಿಯವರು ಬರೆದರೆ ಚೇತನ್ ಹಾಗು ಸುಮಾನಾಡಿಗರು ಅದೇ ಪ್ರಕೃತಿಯ ವರ್ಣಚಿತ್ರಗಳನ್ನು ಪ್ರಕಟಿಸಿ ಎಲ್ಲರ ಕಣ್ಮನ ತಣಿಸಿದರು. ಸುಪ್ರೀತರ 'ಡ್ ಪ್ಯಾಕ್' ಕೃಪಾಕರ್ ಸೇನಾನಿಯವರ ಡಾಕ್ಯುಮೆಂಟರಿ ಬಗ್ಗೆ ವಿಷಯಪೂರ್ಣ ವಿವರಣೆ. 'ಗುರುರಾಜ' ರ ಆಗಮನ,
ಅಂತರಿಕ್ಷದ ಬಗ್ಗೆ ವಿನಯ್ ಖೋಬ್ರಿ ಹೋಳಿಗ್ಗೆಯ ಅನುಭವದ ಬಗ್ಗೆ ಕುರ್ತಕೋಟಿಯವರು ಬರೆದರು.
ಆದರೆ ಈ ಬಾರಿ ಸಂಪದಿಗರೇಕೊ ಪ್ರತಿಕ್ರಿಯೆ ವ್ಯಕ್ತಪಡಿಸಲು ಬರಹಗಾರರನ್ನು ಉತ್ತೇಜಿಸಲು ಬಹಳಷ್ಟು ಲೆಕ್ಕಚಾರವಾಗಿದ್ದರು. ಬಹಳಷ್ಟು ಲೇಖನಗಳಿಗೆ ಪ್ರತಿಕ್ರಿಯೆ 'ಸೊನ್ನೆ'
ಕವನಗಳು
ಕವನಗಳು ಎಂದಿನಂತೆ ಪುಂಕಾನುಪುಂಕವಾಗಿ ಮೂಡಿ ಬಂದಿತು.ಯುಗಾದಿ ಶುಭಾಷಯ ಹಾಗು ಬೇವು ಬೆಲ್ಲದದೊಂದಿಗೆ ಪ್ರಾರಂಬವಾಯಿತು ಜಯಂತ್,ಸರಸ್ವತಿ,ಸದಾನಂದ,ಮದ್ವೇಶ,ಗಣೇಶ,ಪ್ರಸನ್ನ ಹಾಗು ಗೋಪಾಲಕೃಷ್ಣರು ಕವನ ರಚಿಸಿದರು.
ನಂತರ ಬೇಸಿಗೆ ರಜೆಯಬಗ್ಗೆ ಜಯಂತ್ ಕವನ ರಚಿಸಿದರು. ರಘುರವರು ಬಾಮಿನಿಯ ಉಲಿಯುವಾಸೆಯಲ್ಲಿ 'ಜೀವನವೆಂದರೆ' ಏನೆಂದು ವರ್ಣಿಸಿದರೆ, ಚಂದ್ರಶೇಖರ್ 'ವಿಶ್ವಕಪ್' ಬಗ್ಗೆ ಆಸಕ್ತಿ. ಸದಾನಂದರಿಗೆ ವಂದೆಮಾತರಂ ನ ದೇಶಭಕ್ತಿ.
'ಆಸೆಗೊಂದು ಕವನ' ಎನ್ನುತ್ತ ಒಂದೆ ಕವನ ಪ್ರಾರಂಬಿಸಿದ siddihkirti ನದಿಯ ಹರಿವಿನಂತೆ ಗಿನ್ನೀಸ್ ದಾಖಲೆ ಮಾಡುವವರಂತೆ ೧೮ ಕ್ಕು ಹೆಚ್ಚು ಕವನರಚಿಸಿದರು.
ನಂದೀಶರಿಗೆ ಪ್ರಕೃತಿಯ ಬಗ್ಗೆ ಪ್ರೀತಿ ಕಾಡಿನಹಾಡಿನ ಮೋಡಿಯಲ್ಲಿ ನಾವಿದ್ದರೆ
ಕಾಯರವರು 'ಹೋಗಿದ್ದು ಎಲ್ಲಿಗೆ' ಎಂದು ನಮ್ಮನ್ನೆಲ್ಲ ಕನ್ ಫ್ಯೂಸ್ ಮಾಡಿ ಕರೆಂಟಿನ ಫ್ಯೂಸ್ ಹುಡುಕುವಂತೆ ಮಾಡಿದರು
ಪ್ರಸನ್ನರಿಗೆ ಇದು ಸ್ಪೂರ್ತಿಯ ತಿಂಗಳು 'ಇವಳ ಉತ್ತರಗಳಲ್ಲಿ...' ಕವನ ಮನಸೂರೆಗೊಂಡಿತು, ಜಯಂತ್ ರವರು 'ಭೂಮಿ ಗಹಗಹಿಸಿ ನಕ್ಕರೆ' ಬರೆದು ನಮ್ಮನ್ನೆಲ್ಲ ಬೆಚ್ಚಿಬೀಳಿಸಿದರು.ನಮ್ಮನ್ನೆಲ್ಲ ಚಿಂತನೆಗೆ ಹಚ್ಚಿದರು. ನಡುವೆ ಸರಸ್ವತಿಯವರಿಗೆ 'ಬರೆಯುವ ಹುಚ್ಚು' ಜಾಸ್ತಿಯಾಗಿ ಕವನಗಳನ್ನು ರಚಿಸಿ ಅದೆ ಚಿಂತೆಯಲ್ಲಿ 'ಚಿಂತೆಗಳಿಗೇಕಿಲ್ಲ ಸ್ವಲ್ಪ ಕರುಣೆ' ಅಂತ ನಮ್ಮನೆ ಪ್ರಶ್ನಿಸಿದರು, ನಿಟ್ಟುಸಿರುಬಿಟ್ಟರು.
ಮತ್ತೆ ದಯಾನಂದ ಚಂದ್ರಪ್ಪ, ಚಂದ್ರಶೇಖರ್, ಮಹೇಶ, ಸುರೇಂದ್ರ ನಾಡಿಗರು, ಜಯಪ್ರಕಾಶರು ಬಾಪೂಜಿ ಎಲ್ಲರು ಕವನದಲ್ಲಿ ತಮ್ಮ ಮನ ಬಿಚ್ಚುತ್ತಿದ್ದರೆ ಮಹಂತೇಶರೇಕೊ 'ಇದು ಕೊನೆಯ ಎಚ್ಚರಿಕೆ ' ಎಂದು ಎಲ್ಲರನ್ನು ಎಚ್ಚರಿಸಿಬಿಟ್ಟರು.
ಕಾರ್ತೀಕ್, ಚೇತನ್, ಪ್ರಶಸ್ತಿ ಎಲ್ಲ ಯುವಕವಿಗಳು ಉತ್ಸಾಹದಲ್ಲಿ ಕವನ ರಚಿಸುತ್ತಿರ ಬೇಕಾದರೆ siddhkirti ರವರು ಒಟ್ಟಿಗೆ ಗೋಲು ಹೊಡೆದಂತೆ ಸಾಲು ಸಾಲು ಕವನಗಳ ಜೊತೆ ತಿಂಗಳು ಮುಗಿಸಿದರು.
-----------------------------
ಪ್ರಿಯ ಸಂಪದಿಗರೆ ನಾನು ಪ್ರಕಟಿತವಾದ ಎಲ್ಲವನ್ನು ಇಲ್ಲಿ ಚರ್ಚೆಮಾಡಲಾಗಿಲ್ಲ ಅದಕ್ಕಾಗಿ ಎಲ್ಲರ ಕ್ಷಮೆ ಕೋರುತ್ತೇನೆ. ಈ ರೀತಿಯ ಅವಲೋಕನನನ್ನು 'ಚೆನ್ನಾಗಿದೆಯಾ?" ಎಂದು ನಿಮ್ಮನ್ನು ಕೇಳಲು ಇಲ್ಲಿ ಹಾಕಿದ್ದೇನೆ. ನಮ್ಮ ಪ್ರಯತ್ನ ನಿಮಗೆಲ್ಲ ಹಿಡಿಸಿದರೆ, ಮುಂದಿನ ತಿಂಗಳಿಂದ ನಾನು ಇದನ್ನು ಮಾಡುವದಿಲ್ಲ, ಮತ್ತೆ ಯಾವುದೆ ಸಂಪದಿಗರು ಈ ರೀತಿಯ ಲೇಖನವನ್ನು ಮತ್ತಷ್ಟು ವಿಮರ್ಷಾತ್ಮಕವಾಗಿ ಮಾಡಬೇಕೆಂದು ಕೋರುತ್ತೇನೆ. ಅಥವ ಒಬ್ಬೊಬ್ಬರು ಒಂದೊಂದು ವಿಭಾಗವನ್ನು ಅಂದರೆ ಒಬ್ಬರು ಲೇಖನ, ಮತ್ತೊಬ್ಬರು ಕವನ ಈ ರೀತಿ ತೆಗೆದುಕೊಂಡು ಪ್ರಯತ್ನಿಸಬಹುದು. ಅಥವ ಇದು ಸರಿಯಿಲ್ಲ ಬೇಡ ಎನ್ನುವದಾದರು ಸರಿಯೆ ಆಗಲು ನಾನು ಇದನ್ನು ಮುಂದಿನ ತಿಂಗಳಿಂದ ಪ್ರಯತ್ನಿಸುವದಿಲ್ಲ.
Comments
ಉ: ಪಕ್ಷಿನೋಟ - ಏಪ್ರಿಲ್ ಮಾಸದಲ್ಲಿ ಸಂಪದ
In reply to ಉ: ಪಕ್ಷಿನೋಟ - ಏಪ್ರಿಲ್ ಮಾಸದಲ್ಲಿ ಸಂಪದ by Jayanth Ramachar
ಉ: ಪಕ್ಷಿನೋಟ - ಏಪ್ರಿಲ್ ಮಾಸದಲ್ಲಿ ಸಂಪದ
ಉ: ಪಕ್ಷಿನೋಟ - ಏಪ್ರಿಲ್ ಮಾಸದಲ್ಲಿ ಸಂಪದ
In reply to ಉ: ಪಕ್ಷಿನೋಟ - ಏಪ್ರಿಲ್ ಮಾಸದಲ್ಲಿ ಸಂಪದ by prasannakulkarni
ಉ: ಪಕ್ಷಿನೋಟ - ಏಪ್ರಿಲ್ ಮಾಸದಲ್ಲಿ ಸಂಪದ
ಉ: ಪಕ್ಷಿನೋಟ - ಏಪ್ರಿಲ್ ಮಾಸದಲ್ಲಿ ಸಂಪದ
In reply to ಉ: ಪಕ್ಷಿನೋಟ - ಏಪ್ರಿಲ್ ಮಾಸದಲ್ಲಿ ಸಂಪದ by asuhegde
ಉ: ಪಕ್ಷಿನೋಟ - ಏಪ್ರಿಲ್ ಮಾಸದಲ್ಲಿ ಸಂಪದ
In reply to ಉ: ಪಕ್ಷಿನೋಟ - ಏಪ್ರಿಲ್ ಮಾಸದಲ್ಲಿ ಸಂಪದ by partha1059
ಉ: ಪಕ್ಷಿನೋಟ - ಏಪ್ರಿಲ್ ಮಾಸದಲ್ಲಿ ಸಂಪದ
In reply to ಉ: ಪಕ್ಷಿನೋಟ - ಏಪ್ರಿಲ್ ಮಾಸದಲ್ಲಿ ಸಂಪದ by sasi.hebbar
ಉ: ಪಕ್ಷಿನೋಟ - ಏಪ್ರಿಲ್ ಮಾಸದಲ್ಲಿ ಸಂಪದ
ಉ: ಪಕ್ಷಿನೋಟ - ಏಪ್ರಿಲ್ ಮಾಸದಲ್ಲಿ ಸಂಪದ
In reply to ಉ: ಪಕ್ಷಿನೋಟ - ಏಪ್ರಿಲ್ ಮಾಸದಲ್ಲಿ ಸಂಪದ by sm.sathyacharana
ಉ: ಪಕ್ಷಿನೋಟ - ಏಪ್ರಿಲ್ ಮಾಸದಲ್ಲಿ ಸಂಪದ
ಉ: ಪಕ್ಷಿನೋಟ - ಏಪ್ರಿಲ್ ಮಾಸದಲ್ಲಿ ಸಂಪದ
In reply to ಉ: ಪಕ್ಷಿನೋಟ - ಏಪ್ರಿಲ್ ಮಾಸದಲ್ಲಿ ಸಂಪದ by asuhegde
ಉ: ಪಕ್ಷಿನೋಟ - ಏಪ್ರಿಲ್ ಮಾಸದಲ್ಲಿ ಸಂಪದ
In reply to ಉ: ಪಕ್ಷಿನೋಟ - ಏಪ್ರಿಲ್ ಮಾಸದಲ್ಲಿ ಸಂಪದ by partha1059
ಉ: ಪಕ್ಷಿನೋಟ - ಏಪ್ರಿಲ್ ಮಾಸದಲ್ಲಿ ಸಂಪದ
ಉ: ಪಕ್ಷಿನೋಟ - ಏಪ್ರಿಲ್ ಮಾಸದಲ್ಲಿ ಸಂಪದ
In reply to ಉ: ಪಕ್ಷಿನೋಟ - ಏಪ್ರಿಲ್ ಮಾಸದಲ್ಲಿ ಸಂಪದ by ನಂದೀಶ್ ಬಂಕೇನಹಳ್ಳಿ
ಉ: ಪಕ್ಷಿನೋಟ - ಏಪ್ರಿಲ್ ಮಾಸದಲ್ಲಿ ಸಂಪದ
ಉ: ಪಕ್ಷಿನೋಟ - ಏಪ್ರಿಲ್ ಮಾಸದಲ್ಲಿ ಸಂಪದ
In reply to ಉ: ಪಕ್ಷಿನೋಟ - ಏಪ್ರಿಲ್ ಮಾಸದಲ್ಲಿ ಸಂಪದ by MADVESH K.S
ಉ: ಪಕ್ಷಿನೋಟ - ಏಪ್ರಿಲ್ ಮಾಸದಲ್ಲಿ ಸಂಪದ
ಉ: ಪಕ್ಷಿನೋಟ - ಏಪ್ರಿಲ್ ಮಾಸದಲ್ಲಿ ಸಂಪದ
In reply to ಉ: ಪಕ್ಷಿನೋಟ - ಏಪ್ರಿಲ್ ಮಾಸದಲ್ಲಿ ಸಂಪದ by gururajkodkani
ಉ: ಪಕ್ಷಿನೋಟ - ಏಪ್ರಿಲ್ ಮಾಸದಲ್ಲಿ ಸಂಪದ
ಉ: ಪಕ್ಷಿನೋಟ - ಏಪ್ರಿಲ್ ಮಾಸದಲ್ಲಿ ಸಂಪದ
In reply to ಉ: ಪಕ್ಷಿನೋಟ - ಏಪ್ರಿಲ್ ಮಾಸದಲ್ಲಿ ಸಂಪದ by bhalle
ಉ: ಪಕ್ಷಿನೋಟ - ಏಪ್ರಿಲ್ ಮಾಸದಲ್ಲಿ ಸಂಪದ
ಉ: ಪಕ್ಷಿನೋಟ - ಏಪ್ರಿಲ್ ಮಾಸದಲ್ಲಿ ಸಂಪದ
In reply to ಉ: ಪಕ್ಷಿನೋಟ - ಏಪ್ರಿಲ್ ಮಾಸದಲ್ಲಿ ಸಂಪದ by ksraghavendranavada
ಉ: ಪಕ್ಷಿನೋಟ - ಏಪ್ರಿಲ್ ಮಾಸದಲ್ಲಿ ಸಂಪದ
ಉ: ಪಕ್ಷಿನೋಟ - ಏಪ್ರಿಲ್ ಮಾಸದಲ್ಲಿ ಸಂಪದ
In reply to ಉ: ಪಕ್ಷಿನೋಟ - ಏಪ್ರಿಲ್ ಮಾಸದಲ್ಲಿ ಸಂಪದ by Chikku123
ಉ: ಪಕ್ಷಿನೋಟ - ಏಪ್ರಿಲ್ ಮಾಸದಲ್ಲಿ ಸಂಪದ
ಉ: ಪಕ್ಷಿನೋಟ - ಏಪ್ರಿಲ್ ಮಾಸದಲ್ಲಿ ಸಂಪದ
In reply to ಉ: ಪಕ್ಷಿನೋಟ - ಏಪ್ರಿಲ್ ಮಾಸದಲ್ಲಿ ಸಂಪದ by kamath_kumble
ಉ: ಪಕ್ಷಿನೋಟ - ಏಪ್ರಿಲ್ ಮಾಸದಲ್ಲಿ ಸಂಪದ
ಉ: ಪಕ್ಷಿನೋಟ - ಏಪ್ರಿಲ್ ಮಾಸದಲ್ಲಿ ಸಂಪದ
ಉ: ಪಕ್ಷಿನೋಟ - ಏಪ್ರಿಲ್ ಮಾಸದಲ್ಲಿ ಸಂಪದ
In reply to ಉ: ಪಕ್ಷಿನೋಟ - ಏಪ್ರಿಲ್ ಮಾಸದಲ್ಲಿ ಸಂಪದ by gopaljsr
ಉ: ಪಕ್ಷಿನೋಟ - ಏಪ್ರಿಲ್ ಮಾಸದಲ್ಲಿ ಸಂಪದ
ಉ: ಪಕ್ಷಿನೋಟ - ಏಪ್ರಿಲ್ ಮಾಸದಲ್ಲಿ ಸಂಪದ