ಚೆಲುವೆಯೆ ನಿನ್ನ ನೋಡಲು

ಚೆಲುವೆಯೆ ನಿನ್ನ ನೋಡಲು

ಕವನ


ಚೆಲುವೆಯೆ ನಿನ್ನ ನೋಡಲು

ಚೆಲುವೆಯೇ ನಿನ್ನ ನೋಡಲು,
ಮನಸಾಯಿತು ಮಾತಾಡಲು,

ಮಾತಾಡಿಸಿ, ಮನ ಕಲುಕಿಸಿ,
ಬರುವೆ ನೀ ನನ್ನ ಜೊತೆಯೆಂದು,

ಮರೆತೆನು ನಾ ನನ್ನದೆಲ್ಲವ,
ಅರಿಯಲು ಹೊರಟೆ ನಿನ್ನದೆಲ್ಲವ,

ಕಳೆದೆನು ಸಮಯ, ಕಲಿಕೆಯ
ಗಳಿಸಲು ನನ್ನ ಮನದ ರಮೆಯ,

ಬಂದೆನು ಹತ್ತಿರ, ಸೇರಲು ಕಾತರ
ನಿನ್ನ ಮನದ ಮಾತ ಕೇಳಲು ಆತುರ

ತಿಳಿಯದಾದೆ ನಿನ್ನ, ಸಮ್ಮೋಹಕ ಬಲೆಯ,
ಅರಿಯದೆ ತೆತ್ತೆನು ನನ್ನ ಜೇವನದ ಬೆಲೆಯ

ಇಂದಿಗೂ, ಎಂದಿಗೊ ತಿಳಿದೆನು ಸತ್ಯವ,
ಕಲಿಯದೆ, ಗಳಿಸದೆ ಮನ್ನಿಸರು ಪ್ರೀತಿಯ.

ಚೆಲುವೆಯೇ ಇನ್ನು ನಿನ್ನ ನೋಡಲು,
ಮನಸು ಮಾಡಿದೆನು ಎಂದೂ ಸುಮ್ಮನಿರಲು.

                    -ಮಧ್ವೇಶ್

Comments