ನಯನವೇ ನಾಚಿ, ನಿನ್ನನು, ನೋಡಿದಾ ಘಳಿಗೆ (in tune of 'GAGANVE BAAGI' of Sanju Weds Geeta )

ನಯನವೇ ನಾಚಿ, ನಿನ್ನನು, ನೋಡಿದಾ ಘಳಿಗೆ (in tune of 'GAGANVE BAAGI' of Sanju Weds Geeta )

ಕವನ

ನಯನವೇ ನಾಚಿ, ನಿನ್ನನು, ನೋಡಿದಾ ಘಳಿಗೆ

ಉಸಿರು ಮರೆತಂತೆ, ತೊದಲಿದಾ, ಆ ಕಿರು ನುಡಿಗೆ

ನಿನ್ನ ಭಾವನೆಗಳ ಕಡಲಲಿ,ಮನವು ಹಸಿರಾದ ಈ ದಿನ,

ನಿನ್ನವನಾಗುವಾ ಮುನ್ನ, ಜಗವಾನ್ನೇ ಮರೆವ ಆ ಕ್ಷಣ

ನಯನವೇ ನಾಚಿ, ನಿನ್ನನು, ನೋಡಿದಾ ಘಳಿಗೆ

ಉಸಿರು ಮರೆತಂತೆ, ತೊದಲಿದಾ ,ಆ ಕಿರು ನುಡಿಗೆ

ಕಣ್ಣಿನಾ, ಕಂಪನಾ, ಕನಸೊಂದ ಕಂಡಂತಿದೆ

ಕಾಣದಾ, ಲೋಕಕೆ, ಕೈ ಹಿಡಿದು ಬರಮಾಡಿದೆ

ಹುಸಿಮುನಿಸು ಒಮ್ಮೆ ಮನಿದು, ಹರುಷದಾ ಮೇರೆ ಮೀರಿ,

ಸ್ವಚ್ಚಂದ ಹಕ್ಕಿ ಮನವು, ನಿನ್ನ ಹೃದಯ ಗೂಡು ಸೇರಿ,

ನಿನ್ನವನಾಗುವಾ ಮುನ್ನ, ಜಗವಾನ್ನೇ ಮರೆವ ಆ ಕ್ಷಣ

ನಯನವೇ ನಾಚಿ, ನಿನ್ನನು, ನೋಡಿದಾ ಘಳಿಗೆ

ಉಸಿರು ಮರೆತಂತೆ, ತೊದಲಿದಾ, ಆ ಕಿರು ನುಡಿಗೆ

ನಿನ್ನ ಭಾವನೆಗಳ ಕಡಲಲಿ,ಮನವು ಹಸಿರಾದ ಈ ದಿನ,

ನಿನ್ನವನಾಗುವಾ ಮುನ್ನ, ಜಗವಾನ್ನೇ ಮರೆವ ಆ ಕ್ಷಣ

ಸೂರ್ಯನ.... ಸಂಜೆಯಾ.. ಸೊಬಗಾದಂತೆ ನೀ

ಆಡದಾ.... ಮಾತಿಗೆ.....ಮೊದಲ ದನಿಯಾದೆ ನೀ

ಕವಿಗಳಾ ಗುಂಪೆ ನಿಂತಿದೆ, ನಿನ್ನ ನಡಿಗೆ ಹೊಗಳಲೆಂದು

ಕವನ ಕಾದು ಸೋತಿದೆ, ಹೊಸ ಪದಗಳ ಹುಡುಕುತಲಿಂದು,

ನಿನ್ನವನಾಗುವಾ ಮುನ್ನ, ಜಗವಾನ್ನೇ ಮರೆವ ಆ ಕ್ಷಣ

ನಯನವೇ ನಾಚಿ, ನಿನ್ನನು, ನೋಡಿದಾ ಘಳಿಗೆ

ಉಸಿರು ಮರೆತಂತೆ, ತೊದಲಿದಾ, ಆ ಕಿರು ನುಡಿಗೆ

ನಿನ್ನ ಭಾವನೆಗಳ ಕಡಲಲಿ,ಮನವು ಹಸಿರಾದ ಈ ದಿನ,

ನಿನ್ನವನಾಗುವಾ ಮುನ್ನ, ಜಗವಾನ್ನೇ ಮರೆವ ಆ ಕ್ಷಣ

ಸ್ನೇಹದಿಂದ

ಮಹಾಂತೇಶ(ಮಾನು)

Comments