ಸತ್ಯ - ಮಿಥ್ಯ

ಸತ್ಯ - ಮಿಥ್ಯ

ಯಾವುದು ಸತ್ಯ ಯಾವುದು ಮಿಥ್ಯ ಈ ಜಗದೊಳು
ಹಗಲಾದರೆ ಉದಯಿಸುವ ಆ ಸೂರ್ಯ ಸತ್ಯವೋ
ಇರುಳಾದರೆ ಅಸ್ತಮಿಸುವ ಆ ಸೂರ್ಯ ಮಿಥ್ಯವೋ
ಭೂಮಿ ಸತ್ಯವೋ ಆಗಸ ಮಿಥ್ಯವೋ ಅರಿಯದಾಗಿದೆ..
 
ಮಾನವನ ಜನನ ಸತ್ಯವೋ ಇಲ್ಲ ಮರಣ ಮಿಥ್ಯವೋ
ಸಂಬಂಧಗಳು ಸತ್ಯವೋ ಇಲ್ಲ ಸ್ನೇಹಗಳು ಮಿಥ್ಯವೋ
ಭಾವನೆಗಳು ಸತ್ಯವೋ ಇಲ್ಲ ಪ್ರೀತಿಯು ಮಿಥ್ಯವೋ
ಯಾವುದು ಸತ್ಯ ಯಾವುದು ಮಿಥ್ಯ ಈ ಜಗದೊಳು
 
ಓಡುವ ನದಿ ಸತ್ಯವೋ ಉಕ್ಕೇರುವ ಸಾಗರ ಮಿಥ್ಯವೋ 
ಬೀಸುವ ತಂಗಾಳಿ ಸತ್ಯವೋ ಉಗ್ರರೂಪ ಬಿರುಗಾಳಿ ಮಿಥ್ಯವೋ
ಬೀಜದಿಂದ ವೃಕ್ಷ ಸತ್ಯವೋ ವೃಕ್ಷದಿಂದ ಬೀಜ ಮಿಥ್ಯವೋ
ಯಾವುದು ಸತ್ಯ ಯಾವುದು ಮಿಥ್ಯ ಈ ಜಗದೊಳು...
 
ಚಿತ್ರ ಕೃಪೆ : ಅಂತರ್ಜಾಲ

 

Rating
No votes yet

Comments