ಮಾತು-ಮೌನ

ಮಾತು-ಮೌನ

ಶ್ರೀಯುತ ಆಸು ರವರ ‘ಮೌನವೆ ರೂಡಿಯಾದರೆ‘ ಕವನದ ಸಾಲುಗಳು ಮನಮುಟ್ಟುವಂತ್ತಿದ್ದವು, ಆ ಸಾಲುಗಳನ್ನು ಓದಿದ ನಂತರ ಮತ್ತು ಅದಕ್ಕೆ ಸಂಪದಿಗರಿಂದ ಬಂದ ಪ್ರತಿಕ್ರಿಯೆಗಳನ್ನು ನೋಡಿದ ನನ್ನ ಮನಸ್ಸು ಈ ಬರಹವನ್ನು ಬಿಳಿ ಕಾಗದದ ಮೇಲೆ ಬರೆಯುತ್ತಿದೆ. ಆ ದಿನ ಪ್ರಾಂಬಿಸಿದ ಬರಹ ಮುಗಿಯಲು ತೆಗೆದುಕೊಂಡ ದಿನಗಳೆಷ್ಟೊ ನಾನರಿಯೆ, ಇರಲಿ


ಮೌನ - ಮಾತು ಈ ಎರಡರ ನಡುವೆ ಇರುವ ಅಂತರ ಅಜ ಗಜಾಂತರ. ಮೌನದ ನಡುವೆ
ಒಂದು ಸಣ್ಣ ಶಬ್ದ ಸೇರಿದರೆ ಅಲ್ಲಿಗೆ ಮೌನದ ವಿಷಯ ಮುಗಿಯಿತು.


‘ಸಂಪೂರ್ಣ ಶುದ್ದ ಮೌನದ‘ ವಿಚಾರವಾಗಿ ನಾನು, ಹಾಗು ನನ್ನ ಸ್ನೇಹಿತರೊಬ್ಬರು ಆಗ್ಗಾಗ್ಗೆ ಮಾತನಾಡಿಕೊಳ್ಳುತ್ತಿರುತ್ತೇವೆ. ಹೀಗೆ ಒಮ್ಮೆ ಮಾತನಾಡುತ್ತ ಅಂದೊಕೊಂಡಿದ್ದು, ‘ನಾವು ಸಮಾಜದಲ್ಲಿ ಸಾಮೂಹಿಕವಾಗಿ ಬೇಕಾದಷ್ಟು ದಿನಗಳನ್ನು ಆಚರಿಸುತ್ತೇವೆ, ಅನೇಕ ಜಯಂತಿಗಳನ್ನು ನಡೆಸುತೇವೆ, ಯಾರಾದರೂ ಪ್ರಮುಖರೂ ಅಥವ ಮಹಾತ್ಮರೂ ಇಹಲೋಕ ತೊರೆದರೆ ಶೋಕಾಚರಣೆಯೂ ಉಂಟು, ಅದೇ ರೀತಿ ಯಾವುದಾರೂ ಒಂದು ದಿನ- ದಿನ ಪೂರ್ತಿ ಕಂಡಿತಾ ಸಾದ್ಯವಿಲ್ಲ - ಒಂದೆರಡು ಕ್ಷಣಗಳನ್ನಾದರೂ ಗೊತ್ತು ಪಡಿಸಿ, ಆ ನಿಗದಿತ ಗಳಿಗೆಯಲ್ಲಿ ಇಡಿ ಪ್ರಪಂಚ ‘ಸಂಪೂರ್ಣ ಮೌನ‘ ವನ್ನು ಆಚರಿಸಲು ಸಾದ್ಯವೆ?. ಹಾಗಾದಾಗ ಆ ಕ್ಷಣಗಳ್ಳಾದರೂ ನಮ್ಮ ಹೆತ್ತಮನ (ಧರಣಿ ಮಾತೆಯ) ಕಿವಿಗೆ ಯಾವ ಶಬ್ದವೂ ಬೀಳದೆ, ಆಕೆ ತನ್ನ ಒಳನೋವನ್ನು ಕೂಗಿ ಹೇಳುವ ಮಾತುಗಳು ಭಹುಷಃ ನಮಗೆ ಕೇಳಬಹುದೇನೊ...?.‘


ಆದರೂ ಇಲ್ಲಿ ಮತ್ತೊಂದು ವಿಚಾರ ಉಂಟು. ಒಂದು ಪಕ್ಷ ‘ಸಂಪೂರ್ಣ ಮೌನವನ್ನು‘ ಆಚರಿಸಲು ಸಹಕರಿಸಿ, ನಿರ್ದಾರ ಕೈಗೊಂಡು, ಎಲ್ಲ ಶಬ್ದಗಳನ್ನೂ ನಿಲ್ಲಿಸಿ ನಿಂತರೂ ಕೂಡ ೧೦೦ ಪ್ರತಿಶತ ಮೌನ ದಕ್ಕುವುದಿಲ್ಲ. - ಕಾರಣ ನಾವು ‘ಮೌನವನ್ನು‘ ಹೊರಗೆ ತೋರ್ಪಡಿಸುತ್ತಾ, ತುಟಿಗಳನ್ನಾಡಿಸದೆ ಯಾವುದೆ ಶಬ್ದವಾಗದಿದ್ದರೂ, ನಮ್ಮ ಅಂತರಾತ್ಮದ ಜೊತೆಗಿನ ‘ಮನಸ್ಸು‘ ಯಾವುದಾದರೊಂದು ವಿಚಾರವನ್ನು ಹಚ್ಚಿಕೊಂಡು ಮಾತನಾಡುತ್ತಲೇ ಇರುತ್ತದೆ. ಹಾಗೆಂದಾಗ ನಾವು ಸಂಪೂರ್ಣ ಮೌನವನ್ನು ಆಚರಿಸುವುದು ಬಹಳ ಕಷ್ಟ ಸಾದ್ಯವೇನೋ ಅನಿಸುತ್ತದೆ. ಮುಂದುವರೆಯುತ್ತಾ, ಒಂದು ವೇಳೆ ಎಲ್ಲರೂ ಸಾಧಕರಾಗಿ ಮನಸ್ಸು ಮಾಡಿ, ಸಂಪೂರ್ಣ ಮನಸ್ಸಿನ ಮೌನವನ್ನೂ ಸಾಧಿಸಿ ಪ್ರಕೃತಿಯಲ್ಲಿನ ಎಲ್ಲ ಶಬ್ದಗಳೂ ನಿರ್ಜೀವವಾಗಿ, ನಮ್ಮಿಂದ ಮಾಲೀನ್ಯಗೊಂಡಿರುವ ಶಬ್ದಗಳನ್ನೆಲ್ಲಾ ನಿಸ್ತೇಜಗೊಳಿಸಿ, ಆ ‘ಸಂಪೂರ್ಣ ಮೌನ‘ ವನ್ನು (ಊಹೆಗೆ ನಿಲುಕದ್ದು) ಊಹಿಸಿದರೆ ನಿಜವಾಗಿಯೂ ಭಯವೆನಿಸುತ್ತದೆ. ಅದು ಅತಿ ಭಯಂಕರ ಅಥವ ಮನೋಹರ. ಆ ಮೌನವನ್ನು ಭಹುಷಃ ಪರಮಾತ್ಮ ಶಕ್ತಿ ಅಥವ ಧರಣಿಮಾತೆ ಬಿಟ್ಟು ಬೇರ್ಯಾರಿಂದಲೂ ಸಹಿಸಲು ಸಾದ್ಯವಿಲ್ಲವೇನೊ. ಈ ಭೂಮಿ ಸೃಷ್ಟಿಯಾಗುವುದಕ್ಕೆ ಮುನ್ನ, ಭೂಮಿಯ ಮೇಲೆ ಪ್ರಪ್ರತಮ ಜೀವಚರ ಬರುವುದಕ್ಕೆ ಮುನ್ನ, ಭೂತಾಯಿ ಹೇಗಿದ್ದಳು? ಇಲ್ಲವೆ ಈ ಸೃಷ್ಟಿ ನಾಶವಾಗಿ ಉಳಿವ ಜೀವ ರಹಿತ ಭೂಮಾತೆ, ಹೇಗಿದ್ದಾಳು? ಆ ನಿಸ್ತೇಜ ನಿಶಬ್ದವನ್ನು ಹೇಗೆ ಸಹಿಸಿಯಾಳು? ಭಹುಷಃ ಭೂತಾಯಿಗೆ ಕೂಡ  ಈ ಎಲ್ಲ ಜೀವರಾಶಿಯನ್ನು ತೊರೆದು ಇರಲು ಮನಸ್ಸು ಒಪ್ಪುವುದಿಲ್ಲವೇನೊ, ಹಾಗಾಗಿ ತನ್ನ ಮಕ್ಕಳು ಎಷ್ಟೆ ತಪ್ಪುಗಳನ್ನು ಮಾಡುತ್ತಿದ್ದರೂ ಕಷ್ಟ ಕೊಟ್ಟರೂ ಸಂಪೂರ್ಣ ನಾಶಕ್ಕೆ ನಿಂತು ಕೈ ಮೇಲೆತ್ತುವುದಿಲ್ಲವೆನಿಸುತ್ತಿದೆ, ಆದರೆ ಅದನ್ನೇ ನಾವು ಶ್ರೀರಕ್ಷೆಯನ್ನಾಗಿಸಿಕೊಳ್ಳಬಾರದು, ಏಕೆಂದರೆ ‘ತಪ್ಪಿಗೆ ಶಿಕ್ಷೆ ತಪ್ಪಿದ್ದಲ್ಲ‘ ಆಗ ‘ಮಾಡಿದ್ದುಣ್ಣೋ ಮಹರಾಯ‘. ಆದ್ದರಿಂದ ‘ಏನಾದರೂ ಆಗಲಿ ಮೊದಲು ಮಾನವರಾಗೋಣ‘, ಬಾಳೋಣಾ ಬದುಕೋಣ, ಬಾಳಿ ಬದುಕಲು ಬಿಡೋಣ.
 - ಮೌನವಾಗಿ ಓದಿದ ತಮಗೆ ಧನ್ಯವಾದಗಳು -
ರಾಮಮೋಹನ.      

Rating
No votes yet

Comments