ಮೌನ ಬೇಡ!

ಮೌನ ಬೇಡ!

ಮೌನ ಬೇಡ!!!

ಸಖೀ,
ಬೂದಿ ಮುಚ್ಚಿದ
ಕೆಂಡದಂತೆ
ಆಡುತ್ತಾ ಇರಬೇಡ
ಸದಾ ಒಳಗೊಳಗೇ
ಬುಸುಗುಟ್ಟುತ್ತಾ
ಇರಬೇಡ

ನನ್ನ ಮೇಲಿರುವ
ಸಿಟ್ಟನ್ನು ಇನ್ನಿತರರ
ಮೇಲೆ ಬರಿದೇ
ಹಾಯಬಿಡಬೇಡ

ಒಳಗಿರುವ ಕ್ರೋಧವನು
ಕಾರಿಬಿಡು ಒಮ್ಮೆಗೇ
ಚಿಂತೆಯಿಲ್ಲ
ನಾ ನಾಶವಾದರೂ
ಉರಿದುಕೊಂಡು ಧುತ್ತನೇ

ಆದರೆ
ನಿನ್ನ ಈ ಮೌನದಿಂದ
ಉಸಿರುಗಟ್ಟಿಸಿಕೊಂಡು
ಪ್ರತಿಕ್ಷಣವೂ ಸಾಯುತಿರಲು
ಸಖೀ,
ನಾ ನಿಜಕೂ ಸಿದ್ಧನಿಲ್ಲ!
*-*-*-*-*-*-*

Rating
No votes yet

Comments