ಉಚಿತ-ಉಚಿತ, ಮೋಸ ಖಚಿತ.

ಉಚಿತ-ಉಚಿತ, ಮೋಸ ಖಚಿತ.

ಕವನ

ಒಂದು ಸೀರೆಗೆ ಇನ್ನೊಂದು ಸೀರೆ ಉಚಿತವೆಂಬ ಜಾಹೀರಾತು

ಸತಿಯ ಕಣ್ಣಿಗೆ ಬಿದ್ದದ್ದೇ ಬಂತು ಪತಿಯ ಜೇಬಿಗೆ ಕುತ್ತು

ರಾಯರ ಕುತ್ತಿಗೆಗೆ ಬಿದ್ದು ಜೋತು

ಕೇಳಿದಳು ಹೊರಡೋಣವೆ ಸಂಜೆಯ ಹೊತ್ತು

ರಾಯರೆಂದರು ಹೋಗದಿರು ಮೋಸ, ನೋಡಿ ಜಾಹೀರಾತು

ಹಿಂದೆ ಇರುವುದು ಏನೋ ಮಸಲತ್ತು.

 

ಹೊತ್ತು ತಂದಳು ಸೀರೆ ಪತಿಯ ಅರಿವಿಗೆ ಬಾರದಂತೆ

ಖುಶಿ ಪಟ್ಟಳು ತಾನೇ ಮಹಾ ಹಣ ಉಳಿಸಿದವಳಂತೆ

ಒಗೆಯಬೇಕಾಯಿತು ತೆಗೆಯಲು ಕಾಫಿ ಚೆಲ್ಲಿದ ಕಲೆ

ಬಣ್ಣ ನೀರಾಗಿ ಹೋಯಿತು ಒಂದೇ ಒಗೆತದಲ್ಲೆ

ಗಿಡ್ಡವಾಗಿ ಉಡಲು ಬರದೆ ದಾನ ಮಾಡಿದಳು ಬಡ ಹುಡುಗಿಗೆ

ಹುಡುಗಿಯೆಂದಳು ಬಣ್ಣ ಮಸುಕಾಗಿದ್ದರು ಪರವಾಗಿಲ್ಲ, ದಾವಣಿ ಚೆನ್ನಾಗಿದೆ.

Comments