ಹೂವಿನ ಚಿತ್ರ ಕಳಿಸಿಹೆ ನಿನಗೆ!

ಹೂವಿನ ಚಿತ್ರ ಕಳಿಸಿಹೆ ನಿನಗೆ!

ಹೂವಿನ ಚಿತ್ರ ಕಳಿಸಿಹೆ ನಿನಗೆ!

ಹೂವಿನ ಚಿತ್ರ ಕಳಿಸಿಹೆ ನಿನಗೆ ಹೂವಲಿ ನನ್ನ ಪ್ರೀತಿಯಿದೆ
ಪ್ರಿಯತಮ ನೀನು ತಿಳಿಸು ನಿನಗೆ ನನ್ನೀ ಪ್ರೀತಿ ಸ್ವೀಕೃತವೇ

ಪ್ರೀತಿ ತುಂಬಿದೆ ಈ ಪತ್ರದಲಿ ಮುತ್ತುಗಳಿರುವಷ್ಟು ಸಾಗರದಲ್ಲಿ
ನಿನ್ನಾ ಕೈಗಳ ನಾ ಚುಂಬಿಸುತ್ತಿದ್ದೆ ನೀನಿರುತ್ತಿದ್ದರೆನ್ನ ಬಳಿಯಲ್ಲಿ

ನಿನಗೆ ನಿದ್ರೆ ಬರುತಿರಬಹುದು, ಕನಸೇನ ಕಂಡಿಹೆ ನೀನು
ಕಣ್ತೆರದಾಗ ಒಂಟಿ ನಾನು ನನಸಾಗಲೇ ಇಲ್ಲಾ ಕನಸು
ಒಂಟೀ ತನವನು ನೀಗುವೆ ನಾನು ತಾಳೀ ಕಟ್ಟಲು ಬಾ ನೀನು
ಪ್ರೀತಿಸಿ ನನ್ನ ಮರೆಯದಿರು ನೀ, ಪ್ರೀತಿಯ ಕಲಿಸಿದವಳು ನೀನು

ಹೂವಿನ ಚಿತ್ರ ಕಳಿಸಿಹೆ ನಿನಗೆ ಹೂವಲಿ ನನ್ನ ಪ್ರೀತಿಯಿದೆ
ಪ್ರಿಯತಮ ನೀನು ತಿಳಿಸು ನಿನಗೆ ನನ್ನೀ ಪ್ರೀತಿ ಸ್ವೀಕೃತವೇ

ಪ್ರೀತಿ ತುಂಬಿದೆ ಈ ಪತ್ರದಲಿ ಮುತ್ತುಗಳಿರುವಷ್ಟು ಸಾಗರದಲ್ಲಿ
ನಿನ್ನಾ ಕೈಗಳ ನಾ ಚುಂಬಿಸುತ್ತಿದ್ದೆ ನೀನಿರುತ್ತಿದ್ದರೆನ್ನ ಬಳಿಯಲ್ಲಿ

ಪತ್ರಗಳಿಂದ ತೃಪ್ತಿಯೇ ಇಲ್ಲ ಭೇಟಿಯ ಹಂಬಲ ಮನದಲ್ಲೀ
ಚಂದಿರ ಅಂಗಳಕ್ಕಿಳಿದು ಬರಲೀ ಅಂತಹ ರಾತ್ರಿ ನಮದಿರಲೀ
ಭೇಟಿ ಆಗುವ ಪರಿ ಹೇಗೆಂದು ನೀನೇ ನನಗೆ ಬರೆದು ಬಿಡು
ನಿನ್ನ ದಾರಿಯ ಕಾಯುತಲಿರುವೆ ಎಂದು ಬರುವೆ ನೀ ತಿಳಿಸಿ ಬಿಡು

ಹೂವಿನ ಚಿತ್ರ ಕಳಿಸಿಹೆ ನಿನಗೆ ಹೂವಲಿ ನನ್ನ ಪ್ರೀತಿಯಿದೆ
ಪ್ರಿಯತಮ ನೀನು ತಿಳಿಸು ನಿನಗೆ ನನ್ನೀ ಪ್ರೀತಿ ಸ್ವೀಕೃತವೇ

ಪ್ರೀತಿ ತುಂಬಿದೆ ಈ ಪತ್ರದಲಿ ಮುತ್ತುಗಳಿರುವಷ್ಟು ಸಾಗರದಲ್ಲಿ
ನಿನ್ನಾ ಕೈಗಳ ನಾ ಚುಂಬಿಸುತ್ತಿದ್ದೆ ನೀನಿರುತ್ತಿದ್ದರೆನ್ನ ಬಳಿಯಲ್ಲಿ
******************************

ನಲವತ್ತೊಂದು ವರುಷಗಳ ಹಿಂದಿನ ಒಂದು ಪ್ರಖ್ಯಾತ ಹಿಂದೀ ಚಲನ ಚಿತ್ರ ಗೀತೆಯ (ಫೂಲ್ ತುಮೇ ಬೇಜಾ ಹೈ ಖತ್ ಮೆ..ಫೂಲ್ ನಹೀಂ ಮೇರಾ ದಿಲ್ ಹೈ) ಭಾವಾನುವಾದದ ಪ್ರಯತ್ನ ಇಲ್ಲಿದೆ.
ಗೀತೆಯ ಮೂಲ ದಾಟಿಯನ್ನು ಕಾಯ್ದುಕೊಳ್ಳುವ ಪ್ರಯತ್ನ ಕೂಡ ಮಾಡಿರುತ್ತೇನೆ

ಚಿತ್ರ: ಸರಸ್ವತೀ ಚಂದ್ರ
ಗಾಯಕರು: ಮುಕೇಶ್ ಹಾಗೂ ಲತಾ ಮಂಗೇಶ್ಕರ್
ಸಾಹಿತ್ಯ: ಇಂದೀವರ್
ಸಂಗೀತ: ಕಲ್ಯಾಣ್ ಜೀ ಆನಂದ್ ಜೀ
ವರ್ಷ: ೧೯೬೮

Rating
No votes yet

Comments