ಮಹಾಭಾರತದ ಕತೆ

ಮಹಾಭಾರತದ ಕತೆ

ರಾಮಾಯಣ ಮಹಾಭಾರತದ ಕತೆ ನಮಗೆಲ್ಲ ಗೊತ್ತಿದ್ದದ್ದೇ - ಅಂತ ತಿಳುಕೊಂಡಿರ್ತೀವಿ . ಆದ್ರೆ ಅಲ್ಲಿನ ಘಟನೆಗಳ ಸೀಕ್ವೆನ್ಸು - ಅನುಕ್ರಮ - ಯಾವ್ದಾದ ಮೇಲೆ ಯಾವ್ದು - ( ಇಂಗ್ಲೀಷು , ಸಂಸ್ಕ್ರುತ - ಕನ್ನಡ ಎಲ್ಲದಕ್ಕೂ ನ್ಯಾಯ ಒದಗಿಸಿದ ಹಾಗಾಯ್ತು :) ) ನಮಗೆ ನೆನಪಿರೋದಿಲ್ಲ . ಇನ್ನೊಮ್ಮೆ ಓದಲುಕೂತಾಗಲೇ ಗೊತ್ತಾಗೋದು . ನಮ್ಮ ಪ್ರೈಮ್ ಮಿನಿಸ್ಟರ್ ಗಳ , ಚೀಫ್ ಮಿನಿಸ್ಟರ್ ಗಳ ಕ್ರಮಾನಾದ್ರೂ ನೀವು ಸರಿಯಾಗಿ ಹೇಳಬಹುದಾ ?
ಹೋಗಲಿ ಬಿಡಿ , ಮಹಾಕಾವ್ಯಗಳ ವಿಷಯ ಮಾತಾಡುವಾಗ ಹುಲುಮಾನವರ ವಿಷಯ ಏಕೆ?
ಕನ್ನಡದ ಆಸ್ತಿ - ಮಾಸ್ತಿ ವೆಂಕಟೇಶ್ ಅಯ್ಯಂಗಾರ ಅವರ ಆದಿಕವಿ ವಾಲ್ಮೀಕಿ ಮತ್ತು ಶ್ರೀ ರಾಮ ಪಟ್ಟಾಭಿಷೇಕ ಕಾವ್ಯ ಓದಿ , ರಾಮಾಯಣದ ನಿಜವಾದ ಭಾಗ ಯಾವುದು , ಅದು ಏಕೆ ಮಹಾಕಾವ್ಯ ಎಂದೆಲ್ಲ ತಿಳಿದು ರಸಗ್ರಹಣ ಮಾಡಿದ್ದೆನು . ಅಂತರ್ಜಾಲದಲ್ಲಿರುವ ಈ ಪುಸ್ತಕಗಳ ಲಿಂಕನ್ನೂ ಕೊಟ್ಟಿದ್ದೆ. ಇಲ್ಲಿ - ( http://www.sampada.net/blog/shreekant_mishrikoti/24/08/2007/5492)

ಇದೀಗ ಅಂತರ್ಜಾಲದಲ್ಲೇ ಇರುವ , ಮಹಾಭಾರತ ಕುರಿತಾದ ಪುಸ್ತಕ , ’ಭಾರತತೀರ್ಥ’ ಓದುತ್ತಿರುವೆ. ಅದು ಇಲ್ಲಿದೆ . http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=2030020027587

ಈಗ ಮೊದಲ ನಲವತ್ತು ಪುಟ ಓದಿದ್ದೇನೆ. ಸಂಕ್ಷಿಪ್ತವಾಗಿ ಮಹಾಭಾರತದ ಕತೆಯನ್ನು ಈ ಭಾಗದಲ್ಲಿ ಕೊಟ್ಟಿದ್ದಾರೆ . ಒಟ್ಟು ಕಥೆಯ ಘಟನಾಕ್ರಮ ತಿಳಕೊಂಡಂತಾಯಿತು.
ಇಷ್ಟರಲ್ಲಿ ನಾನು ಕಂಡುಕೊಂಡ ಕೆಲ ವಿಷಯಗಳು .
೧. ರಾಮಾಯಣದಲ್ಲಿನಂತೆ ಇಲ್ಲೂ ಅನೇಕ ಭಾಗಗಳು ಯಾರ್ಯಾರೋ ಸೇರಿಸಿದ್ದು . ಒಂದು ಲಕ್ಷ ಶ್ಲೋಕಗಳ ಈ ಕಾವ್ಯದಲ್ಲಿ ಮೂಲಭಾಗ ೨೪,೦೦೦ ಶ್ಲೋಕದ್ದು ಮಾತ್ರ
೨. ಭರತನ ವಂಶಜರು ಈ ಕೌರವರು ಪಾಂಡವರು , ಅವರು ಭಾರತರು , ಅವರಕತೆಯೇ ಭಾರತ .
೩. ಈ ಕತೆಯನ್ನು ಹೇಳೋದು ವ್ಯಾಸರು . ಲೋಕದ ಜೀವನವನ್ನು ಚೆನ್ನಾಗಿ ಅರಿತ ಈತ ಬಾಳಿನ ತತ್ವವನ್ನು ತಿಳಿಸಿ ಕೃಷ್ಣನನ್ನು ಭಗವಂತನ ಅವತಾರ ಎಂದು ಗುರುತಿಸಿದ್ದಾನೆ. ಕೃಷ್ಣನ ಸ್ವರೂಪವನ್ನು ಜನಕ್ಕೆ ತಿಳಿಸಲು ಕೃಷ್ಣನೇ ತಳೆದ ಇನ್ನೊಂದು ರೂಪವೆ ಇವನು ಎಂದು - ಎರಡನೇ ಕೃಷ್ಣ ಅಥವಾ ಕೃಷ್ಣ ದ್ವೈಪಾಯನ ಎಂದು ಕರೆಯುತ್ತಾರೆ .
೪. ಪಾಂಡವರು ಮತ್ತು ಕೌರವರು ಇಬ್ಬರೂ ಕುರುವಂಶಜರೇ ಆದರೂ . ಯುಧಿಷ್ಟಿರ (ಧರ್ಮರಾಯ )ಮತ್ತು ಅವನ ನಾಲ್ವರು ಸೋದರರನ್ನು ಬಿಟ್ಟು ಉಳಿದವರಿಗಷ್ಟೇ ಕೌರವರು ಅಂದಾಗ ಈ ಪಾಂಡವರು ಅಧಿಕೃತವಾಗಿ ಕುರುವಂಶದವರಲ್ಲ ಅಂತ ಕತೆ ಹೇಳುವಾಗಲೆ ನಿರ್ಧರಿಸಿದ ಹಾಗೆ ಕಾಣುತ್ತೆ :) ,

....(ಮುಂದುವರಿದೀತು)

Rating
No votes yet

Comments