ಕಾಡಿಲ್ಲದ ನಾಡಲ್ಲಿ ಹುಲಿ ಬಂದಿತ್ತು

ಕಾಡಿಲ್ಲದ ನಾಡಲ್ಲಿ ಹುಲಿ ಬಂದಿತ್ತು

ದಟ್ಟವಾದ ಕಾಡು ಇದ್ದ ಶಿಕಾರಿಪುರ ಮಾತ್ರವಲ್ಲದೆ ಅರೆ ಮಲೆನಾಡಾದ ಶಿವಮೊಗ್ಗ, ಇದೀಗ ಬಟ್ಟ ಬಯಲಾಗುತ್ತಿದೆ. ಬಯಲುಸೀಮೆಯ ಉಷ್ಣಾಂಶ ಶಿವಮೊಗ್ಗ ಜಿಲ್ಲೆಗೂ ತಲುಪಿದೆ. ಒಂದೆಡೆ ಬಗರ್ ಹುಕಂನಿಂದ ಕಾಡು ನಾಶವಾಗುತ್ತಿದೆ. ಮತ್ತೊಂದೆಡೆ ಪೀಠೋಪಕರಣಗಳ ಹೆಸರಿನಲ್ಲಿ ಮರ

ಗಳ್ಳರು ಕಾಡನ್ನು ಲೂಟಿ ಮಾಡುತ್ತಿದ್ದಾರೆ. ಇದಕ್ಕೆ ಒಂದೆಡೆ ಜನಪ್ರತಿನಿಧಿಗಳ ಕುಮ್ಮಕ್ಕು ಇದ್ದರೆ, ಮತ್ತೊಂದೆಡೆ ಅರಣ್ಯ ಇಲಾಖೆಯ ನಿರ್ಲಕ್ಷ್ಯವಾಗಿದೆ ಎನ್ನುವುದು ಜಗಜ್ಜಾಹೀರು.

ಕಾಡೇ ಇಲ್ಲದ ಶಿಕಾರಿಪುರದಲ್ಲಿ, ಮೊನ್ನೆಯಂದು ಧಿಡೀರ್ ಆಗಿ ಹೆಬ್ಬುಲಿಯೊಂದು ಪ್ರತ್ಯಕ್ಷವಾಯಿತು. ಕಾಡಿನಲ್ಲಿ ಚೆನ್ನಾಗಿಯೇ ಇದ್ದ ಹುಲಿ, ಆಹಾರ ಸಿಗದ ಕಾರಣ ನಾಡಿಗೆ ಬಂದಿದೆ ಎನ್ನುವ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ. ಹುಲಿ ಅಡಗಿದ್ದ ಬಾಳೆ ತೋಟದ ಸುತ್ತಮುತ್ತ ಸುಮಾರು 10ಸಾವಿರಕ್ಕೂ ಅಧಿಕ ಜನಸಂಖ್ಯೆ ಜಮಾವಣೆಗೊಂಡಿತು.

ಯಾವುದೋ ಎಮ್ಮೆಗೆ ಓಡಿಸುವಂತೆ , ಹುಲಿಯನ್ನು ಓಡಿಸಲು ಹೋದ ವ್ಯಕ್ತಿ ಹುಲಿ ಬಾಯಿಗೆ ಸಿಕ್ಕು ಮೃತಪಟ್ಟ, ಮತ್ತೊಬ್ಬ ಬಾಲಕ ಹತ್ತಿರದಿಂದ ನೋಡಲು ಹೋಗಿ ಹುಲಿಯಿಂದ ಭಾರೀ ದಾಳಿಗೆ ತುತ್ತಾದ. ಇಷ್ಟೆಲ್ಲಾ ಘಟನೆ ನಡೆಯುತ್ತಿರುವಾಗಲೇ ಜನ ರೊಚ್ಚಿಗೆದ್ದಿದ್ದರು. ನಾವೇ ಹುಲಿಯನ್ನು ಸಾಯಿಸುತ್ತೇವೆ ಎಂದು ಕೂಗಾಟ ಬೇರೆ. ಇವರನ್ನು ಸಮಾಧಾನಗೊಳಿಸುವ ಹೊತ್ತಿಗೆ ಪೊಲೀಸರು ಸುಸ್ತಾಗಿದ್ದರು, ಅಂತೂ ಸಂಜೆ ಸುಮಾರಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು. ಇದೀಗ ಹುಲಿರಾಯ ತಾವರೆಕೊಪ್ಪ ಸಿಂಹಧಾಮದಲ್ಲಿ ಇದ್ದಾನೆ. ಭಾರೀ ಭೋಜನ ಪ್ರಿಯನಾದ ಇವನನ್ನು ಸಾಕುವುದು ಕಷ್ಟವಂತೆ ಹಾಗಾಗಿ ಮತ್ತೆ ಬೇರೆ ಪ್ರದೇಶದ ಅರಣ್ಯಕ್ಕೆ ಬಿಡುತ್ತಿದ್ದಾರೆ.

 

Image preview

 

Image preview

 

 

Comments