ಪ್ರೊಡಕ್ಷನ್ ನಂ -೧ ಭಾಗ-೧
ವಿಶಾಲವಾದ ಗಾಜಿನ ಕಿಟಕಿಯ ಬಳಿ ನಿಂತಿದ್ದ ಸುಮತಿ ಕೈಯಲ್ಲಿದ್ದ ಫೋಟೋನ ದಿಟ್ಟಿಸಿ ನೋಡುತ್ತಿದ್ದಳು...
ಮುಂದಿನ ಕಿಟಕಿಯೊಳಗೆ ಇಡೀ ನಗರದ ಟ್ರಾಫಿಕ್, ನೆಲದ ಮೇಲೆ ಹರಡಿರುವ ರಾಶಿ ರಾಶಿ ಸೀರಿಯಲ್ ಲೈಟ್ಸ್ ನಂತ ಸ್ಟ್ರೀಟ್ ಲೈಟ್ಸ್ ಗದ್ದಲ ಗೋಜಲು ಎಷ್ಟೇ ಇದ್ದರೂ ನಗರದ ಗದ್ದಲಕ್ಕೂ ಅವಳ ಮೌನಕ್ಕೂ ಮಧ್ಯೆ ಕಿಟಕಿಯ ಗಾಜು ತಡೆ ಗೋಡೆಯಾಗಿ ನಿಂತಿತ್ತು.
ಫೋಟೋದಲ್ಲಿ ನೆಟ್ಟಿದ್ದ ಕಣ್ಣನ್ನು ಹಾಗೇ ಕಿಟಕಿಯೆಡೆಗೆ ವರ್ಗಾಯಿಸುತ್ತಾ ಇದನ್ನೇ ಚಿಂತಿಸುತ್ತಿದ್ದಳು, ಈ ಗಾಜೆಂಬ metaphor ನನ್ನ ಸಿನಿಮಾ ಕಥೆಯಲ್ಲು ಪ್ರಮುಖ ಪಾತ್ರವಾಗಿಬಿಟ್ಟಿದೆಯಲ್ಲ ಅಂತ.
ಆದರೆ ವ್ಯತ್ಯಾಸವೆಂದರೆ ಮೌನದ ನಿಶ್ಚಲ ನೀರವತೆ ನನ್ನ ವಾಸ್ತವದಲ್ಲಿದೆ, ಸನಿಹವೇ ಇದ್ದರು ಗದ್ದಲ , ಗೋಜಲು ಎಂಬುದನ್ನು ಈ ಗಾಜು ಕೇಳಿಸದಂತೆ ತಡೆಹಿಡಿದಿದೆ.
ನನ್ನ ಸಿನಿಮಾದಲ್ಲಿ ಗದ್ದಲ, ಗೋಜಲಿನೆಡೆಯಲ್ಲಿ ನಾನಿದ್ದೇನೆ, ನಿಶ್ಚಲ ನೀರವ ಮೌನ ಗಾಜಿನ ಆ ಕಡೆಗಿದ್ದರೂ ಗಾಜಿನ ಪ್ರಾಮುಖ್ಯತೆ ನನಗೆ ಅವಶ್ಯಕತೆ ಇಲ್ಲದಂತಾಗಿದೆ.
ಈ ಮನೆಗೆ ನಾನೇ ಇಷ್ಟ ಪಟ್ಟು ಇಷ್ಟು ದೊಡ್ಡದಾದ ಕಿಟಕಿಯನ್ನು ಮಾಡಿಸಿ ಹೊರಗಿನ ಪ್ರಪಂಚ ವಿಶಾಲವಾಗಿ ಕಾಣಲೆಂದು ಮತ್ತು ಹೊರಗಿನ ಗದ್ದಲ ಕೇಳಿಸಿದಿರಲೆಂದು ಈ ಗಾಜನ್ನು ಹಾಕಿಸಿದ್ದು.
ನನ್ನದೇ ಕಥೆಯಲ್ಲಿ ನಾನೆಂಥ ಆದರ್ಶವಾದಿ ಎಂದು ತೋರಿಸಲು ಅರವಿಂದ್ ನನಗೆ ಡೈವೊರ್ಸ್ ಕೊಟ್ಟು ಶೀಬಾಳನ್ನು ಮದುವೆ ಅಗುವಂತೆ ಕಥೆ ಹೆಣೆದಿದ್ದೆ.
ಆ ಆದರ್ಶದೊಂದಿಗೆ ನಾನು ಆಧುನಿಕ ಮನೋಭಾವದ ನಿರ್ದೇಶಕಿ ಅಂತ ನಿರೂಪಿಸಲೇ ಅಲ್ಲವೇ ಇಡೀ ಸಿನಿಮಾ ಕಥೆಯೊಳಗೆ ಒಬ್ಬರಿಗೆ ಮತ್ತೊಬ್ಬರೊಂದಿಗೆ ದೈಹಿಕ ಸಂಬಂದವಿದ್ದರೂ ಅದನ್ನು ಮೀರಿದಂತ ಭಾವನೆಗಳಿಗೆ, ಭಾವನಾತ್ಮಕ ಸಂಬಂದಗಳಿಗೆ ಉತ್ತೇಜಿಸುವಂತ ದೃಶ್ಯ ನಿರೂಪಿಸಿ ಇಡೀ ಸಿನಿಮಾ ಕಥೆ ಮಾಡಿರುವುದು.
ಸಿನಿಮಾ ಬಡ್ಜೆಟ್ ಪ್ರಾಬ್ಲಂ ಆಗದಿರಲಿ ಅಂತ ನನ್ನ ಸ್ನೇಹಿತರನ್ನೇ ಇದರೊಳಗೆ ನಟಿಸಲು ಒಪ್ಪಿಸಿ ಸಿನಿಮಾ ಪ್ರಾರಂಭಿಸಿದ್ದು.
ಈಗ ಸಿನಿಮಾ ಕೊನೆ ಹಂತ ತಲುಪುವ ಹೊತ್ತಿಗೆ ನನ್ನ ಸ್ಥಿತಿ ಈ ಗಾಜಿನ ಆಚಿಗಿನ ಸ್ಥಿತಿಯಾಗಿದೆ. ಬರಿ ಗದ್ದಲ, ಗೋಜಲು,
ಗಾಜಿನ ಈ ಕಡೆಗೆ ಉಸಿರು ಕಟ್ಟಿಸುವಂತ ಪರಿಸ್ಥಿತಿ ಆ ಕಡೆಗೆ ಸೃಷ್ಟಿಯಾಗಿದೆ.
ನಾನು ಸಿನಿಮಾ ಮಾಡಲು ಶುರು ಮಾಡಿದಾಗ ನಾನೇಳಿದ ಕಥೆಯನ್ನು ಎಲ್ಲರೂ ಮೆಚ್ಚಿದರು, ಹೊಗಳಿದರು. ನೀನೇಳಿದಂತೆ ಈ ಕಥೆಯ ಯಾವುದೇ ಪಾತ್ರವನ್ನು ನೀ ಹೇಳಿದಂತೆ ನಟಿಸುವ ಕೆಲಸವಷ್ಟೇ ನಮ್ಮದು. ಕಥೆಯೊಳಗೆ ನಾವು ಯಾವುದೇ ಕಾರಣಕ್ಕೂ ತಲೆಹಾಕುವುದಿಲ್ಲ ಅಂತ ಎಲ್ಲರೂ ಹೇಳಿದ್ದರು.
ನನಗು ಅದೇ ಧೈರ್ಯವಿತ್ತು.
ಇಲ್ಲಿ ನಟಿಸೋದಿಕ್ಕೆ ಒಪ್ಪಿರೋರೆಲ್ಲ ಯಾರು .. ಎಲ್ಲರೂ ನನ್ನವರೇ.. ನನಗೆ ಬೇಕಾದವರೆ. ನನ್ನ ಗಂಡ ಮಗಳು. ಅವಳ ಸ್ನೇಹಿತ. ಗಂಡನ ಸ್ನೇಹಿತನ ತಂಗಿ, ಮತ್ತೊಬ್ಬ.
ಸೋ ಯಾರು ನನ್ನ ಅಭಿವ್ಯಕ್ತಿಗೆ ಅಡ್ಡಿ ಪಡಿಸೋದಿಲ್ಲ ಅಂತ ನಂಬಿ ಶೂಟಿಂಗ್ ಶುರು ಮಾಡಿದ್ದು.
ಬಡ್ಜೆಟ್ಟು ಲೊಕೇಶನ್ನು ಡೇಟ್ಸ್ ಹೊಂದಿಸೋದಿಕ್ಕೆ ಪ್ರಾಬ್ಲಂ ಆಗಿದ್ದರಿಂದಲೇ ಶೂಟಿಂಗ್ ತಡವಾಯಿತು. ಇದನ್ನು ಮೊದಲೇ ಊಹಿಸಿಯೇ ಅಲ್ಲವೇ ವಿಶಾಲವಾದ ನನ್ನ ಮನೆಯಲ್ಲೇ ಎಲ್ಲರಿಗೂ ಉಳಿದುಕೊಳ್ಲಲು ವ್ಯವಸ್ಥೆ ಮಾಡಿದ್ದು.
ಈ ಹದಿನೈದು ದಿನಗಳಿಂದ ಕ್ಯಾಮೆರಾ ಯೂನಿಟ್ಟಿಗೆ ಬೇರೆ ಶೂಟಿಂಗ್ ಇದೆ ಅಂತೇಳಿ ಶೂಟಿಂಗ್ ಬ್ರೇಕ್ ಕೊಟ್ಟು ನಾನು ಆದಷ್ಟು ಎಡಿಟಿಂಗ್ ಕೆಲಸಗಳನ್ನು ಮುಗಿಸಿಕೊಳ್ಲೋಣ ಅಂತ ಸಾಕಷ್ಟು ಹೊತ್ತು ಓಂ ಸ್ಟುಡಿಯೋದಲ್ಲೇ ಇರಬೇಕಾಗಿ ಬಂದದ್ದು.
ಈಗ ಮನೆಗೆ ಬಂದು ನೋಡಿದ್ರೆ ಯಾರೂ ಪತ್ತೇನೆ ಇಲ್ಲ..
ಮುಂದಿನ ಸೋಮವಾರದಿಂದ ಬ್ಯಾಲೆನ್ಸ್ ಶೂಟಿಂಗ್ ಸ್ಟಾರ್ಟ್ ಮಾಡೋಣ ಅಂತ ಫೋನ್ ಮಾಡಿದ್ರೆ ..ಈಗ ಎಲ್ಲರೂ ಕಥೆ ಬದಲಾಯಿಸಬೇಕು ಅಂತಿದ್ದಾರೆ.. ಅದಕ್ಕಾಗಿ ಎಲ್ರೂ ಒಟ್ಟಿಗೆ ಬರ್ತಿದ್ದಾರೆ . ಈಗ ಕಥೆ ಬದಲಾಯಿಸೋದಾ..
ಯಾಕಿರಬಹುದು.. ಯಾವ ಪಾತ್ರ...? ಯಾವ ಸನ್ನಿವೇಶ..? ಒಂದೂ ಗೊತ್ತಾಗ್ತಾ ಇಲ್ಲ. ಎಲ್ಲರೂ ಮೆಚ್ಚಿದ್ದ ಕಥೆ ಈಗ .. ಅದೂ ಈ ಹಂತಕ್ಕೆ ಬಂದ ಮೇಲೆ.. ಏನಾಯಿತು ಇವರಿಗೆಲ್ಲ...
ಓ ಡೋರ್ ಬೆಲ್ .. ಎಲ್ರೂ ಬಂದ್ರು ಅಂತ ಕಾಣುತ್ತೆ...
(ಮುಂದುವರಿಯುವುದು)
ಈ ಕಥೆಗೆ ಶೀರ್ಷಿಕೆ ಇನ್ನೂ ಇಟ್ಟಿಲ್ಲ. ಹಾಗಾಗಿ ಪ್ರೊಡಕ್ಷನ್ ನಂ ೧ ಅಂತ ಸಧ್ಯಕ್ಕೆ ಹಾಕಿದ್ದೇನೆ. ನಿಮಗೇನಾದರು ಸೂಕ್ತ ಶೀರ್ಷಿಕೆ ತೋಚಿದರೆ.. ಖಂಡಿತವಾಗಿಯೂ ಹಂಚಿಕೊಳ್ಳಬಹುದು. ಕೊನೆಯಲ್ಲಿ ಶೀರ್ಷಿಕೆ ಅಂತಿಮಗೊಳಿಸೋಣ.
ಮಂಸೋರೆ
Comments
ಉ: ಪ್ರೊಡಕ್ಷನ್ ನಂ -೧ ಭಾಗ-೧
In reply to ಉ: ಪ್ರೊಡಕ್ಷನ್ ನಂ -೧ ಭಾಗ-೧ by bhalle
ಉ: ಪ್ರೊಡಕ್ಷನ್ ನಂ -೧ ಭಾಗ-೧
In reply to ಉ: ಪ್ರೊಡಕ್ಷನ್ ನಂ -೧ ಭಾಗ-೧ by manjunath s reddy
ಉ: ಪ್ರೊಡಕ್ಷನ್ ನಂ -೧ ಭಾಗ-೧
In reply to ಉ: ಪ್ರೊಡಕ್ಷನ್ ನಂ -೧ ಭಾಗ-೧ by ಗಣೇಶ
ಉ: ಪ್ರೊಡಕ್ಷನ್ ನಂ -೧ ಭಾಗ-೧
In reply to ಉ: ಪ್ರೊಡಕ್ಷನ್ ನಂ -೧ ಭಾಗ-೧ by manjunath s reddy
ಉ: ಪ್ರೊಡಕ್ಷನ್ ನಂ -೧ ಭಾಗ-೧