ಕ್ರಾಂತಿ

ಕ್ರಾಂತಿ

ಕವನ

ಓ ಭಾರತಾಂಬೆಯ ಮಕ್ಕಳೇ ಎದ್ದು ಬನ್ನಿರಿ

ಶುಭ್ರವಾಗಿಸೋಣ ಈ ನಮ್ಮ ದೇಶವ

ಜಾತಿಯ ಮರೆತು ಒಂದಾಗಿ ಸೇರೋಣ

ಅನ್ಯಾಯದ ಕಳೆಯ ಕೀಳೋಣ ಬನ್ನಿ..

 

ನವಚೈತನ್ಯವ ನವೋಲ್ಲಾಸವ ತುಂಬಿಕೊಂಡು ಬನ್ನಿ

ತೊಲಗಿಸೋಣ ಭ್ರಷ್ಟಾಚಾರವ ದೇಶದಿಂದ

ಭಗತ್ ಸಿಂಗ್, ಆಜಾದ್, ಸುಭಾಷರ ಹಾಗೆ

ಕೆಚ್ಚೆದೆಯ ಹೋರಾಟವ ಮಾಡೋಣ ಬನ್ನಿರಿ...

 

ಕ್ರಾಂತಿ ಗೀತೆಯ ಹಾಡುತಲಿ ಹೊಡೆದೋಡಿಸೋಣ ಉಗ್ರರ

ಸಮಾಜವ ಶುಚಿ ಮಾಡೋಣ ಲಂಚವೆಂಬ ಕೊಳೆಯ ಕಿತ್ತೊಗೆದು

ಪ್ರತಿಯೊಬ್ಬರೂ ಆಗೋಣ ಒಬ್ಬೊಬ್ಬ ಯೋಧ

ನಿರ್ಮಿಸೋಣ ಯಾರೂ ಅಲುಗಾಡಿಸದ ಭವ್ಯ ಭಾರತವ

 

Comments