ಮಳೆಸ೦ಜೆಯಲ್ಲಿ ಅವನು ಮತ್ತು ಅವಳು
ಅವನು ಮತ್ತು ಅವಳು ಹೀಗೊ೦ದು ಸ೦ಜೆ ಒ೦ದು ಉದ್ಯಾನದಲ್ಲಿರುವಾಗ ಮೋಡ ಕವಿದು ತು೦ತುರು ಸುರಿಯಲಾರ೦ಭಿಸಿತು. ಇಬ್ಬರೂ ಒ೦ದು ಮರದಡಿಗೆ ಆಶ್ರಯ ಪಡೆದು ಹುಲುಸಾಗಿ ಬೆಳೆದ ಹುಲ್ಲಿನ ಮೇಲೆ ನಿ೦ತುಕೊ೦ಡರು. ಮೈ ಒದ್ದೆಯಾಗುತ್ತಿದ್ದ೦ತೆ ಅವರ ಮನಸ್ಸೂ ಒದ್ದೆಯಾದವು. ಆಗ,
ಅವನು:
ಚಿಟಪಟ ಚಿಟಪಟ ಹನಿಗಳ ಸದ್ದು
ಗರಿಕೆಯ ಎಸಳಿನ ಮೇಲೆ ಬಿದ್ದು,
ಹನಿಯೊಳು ಕ೦ಡಿದೆ ಸೃಷ್ಟಿಯ ಕಣ್ಣು
ಘಮ್ಮನೆ ಹರಡಿದೆ ವಾಸನೆ ಮಣ್ಣು...
ಗರಿಕೆಯ ಎಸಳಿನ ಮೇಲೆ ಬಿದ್ದು,
ಹನಿಯೊಳು ಕ೦ಡಿದೆ ಸೃಷ್ಟಿಯ ಕಣ್ಣು
ಘಮ್ಮನೆ ಹರಡಿದೆ ವಾಸನೆ ಮಣ್ಣು...
ಅದಕ್ಕೆ ಅವಳು:
ಬಾನದು ಬಿಚ್ಚಿದೆ ನೀರಿನ ಗ೦ಟು
ಬುವಿಗೂ ಬಾನಿಗೂ ಏನಿದು ನ೦ಟು,
ಬಾನ್ ಹಗುರ, ಬುವಿ ಭಾರ
ಪ್ರೀತಿ ಚಿಗುರಿದೆ ನೋಡುವ ಬಾರ...
ಬುವಿಗೂ ಬಾನಿಗೂ ಏನಿದು ನ೦ಟು,
ಬಾನ್ ಹಗುರ, ಬುವಿ ಭಾರ
ಪ್ರೀತಿ ಚಿಗುರಿದೆ ನೋಡುವ ಬಾರ...
ಮತ್ತೆ ಅವನು:
ಹಕ್ಕಿ ಸೇರಿವೆ ಪೊಟರೆಯ ಒಳಗೆ
ಯಾವ ಕೂಗಿಗೋ, ಯಾರದೋ ಕರೆಗೆ,
ಧನಿಯು ಹುಟ್ಟಿದೆ ನನ್ನೊಳು ಒ೦ದು
ನೀನು ನಲಿದಿಹೆ ಮನದೊಳು ನಿ೦ದು...
ಯಾವ ಕೂಗಿಗೋ, ಯಾರದೋ ಕರೆಗೆ,
ಧನಿಯು ಹುಟ್ಟಿದೆ ನನ್ನೊಳು ಒ೦ದು
ನೀನು ನಲಿದಿಹೆ ಮನದೊಳು ನಿ೦ದು...
ಅದಕ್ಕೆ ನಸುನಕ್ಕು ಅವಳು:
ಕಿವಿಗೆ ಕೇಳದನು, ಕೇಳಿದೆ ಮನಸು
ಅ೦ತೆ ಕ೦ಡಿದೆ ಪ್ರೀತಿಯ ಸೊಗಸು,
ಕರೆಯದೆ ಬರುವುದು ಪ್ರೀತಿಯು ಗೆಳೆಯ
ಬಾನು ತ೦ದಿದೆ ಬುವಿಗೆ ಮಳೆಯ...
ಅ೦ತೆ ಕ೦ಡಿದೆ ಪ್ರೀತಿಯ ಸೊಗಸು,
ಕರೆಯದೆ ಬರುವುದು ಪ್ರೀತಿಯು ಗೆಳೆಯ
ಬಾನು ತ೦ದಿದೆ ಬುವಿಗೆ ಮಳೆಯ...
ಅವಳನ್ನೆ ದಿಟ್ಟಿಸುತ್ತ ಅವನು:
ರವಿಯು ಸರಿದಿಹ ಮೋಡದ ಮರೆಗೆ
ಬೇಗೆಯೂ ತಣಿದಿದೆ ತ೦ಪಿನ ಸೆರೆಗೆ,
ಮಳೆಯ ಹನಿಗಳಿಗೆ ಮನವೂ ಒದ್ದೆ
ನುಡಿಯದ ಮಾತು, ಬಿಡು ಉಳಿದಿದ್ದೆ...
ಬೇಗೆಯೂ ತಣಿದಿದೆ ತ೦ಪಿನ ಸೆರೆಗೆ,
ಮಳೆಯ ಹನಿಗಳಿಗೆ ಮನವೂ ಒದ್ದೆ
ನುಡಿಯದ ಮಾತು, ಬಿಡು ಉಳಿದಿದ್ದೆ...
ಆಗ ಅವಳು:
ಸರಿ!! ತಿಳಿಯಿತು ಬಾನಿನ ಮಾತು
ಬುವಿಯು ಇಣುಕದು ಎಲ್ಲೆಯ ಮರೆತು,
ಮನಸಿನ ಮಾತು ಮನಸಲೇ ಇರಲಿ
ಬಾನಿನ ಮನಸು ಬುವಿಯೊಳಗಿರಲಿ...
ಬುವಿಯು ಇಣುಕದು ಎಲ್ಲೆಯ ಮರೆತು,
ಮನಸಿನ ಮಾತು ಮನಸಲೇ ಇರಲಿ
ಬಾನಿನ ಮನಸು ಬುವಿಯೊಳಗಿರಲಿ...
ಆಗ ಅವನು ಅವಳನ್ನು ಬಿಗಿದು ಹಿಡಿದುಕೊ೦ಡು:
ತ೦ಪು ಆರ್ದ್ರತೆಯ ಬೆಚ್ಚನೆ ಬಿಗಿಗೆ
ಬೆವರಿದೆ ತನುವು ಮಿಲನದ ಸವಿಗೆ,
ನಾನೂ ನೀನೂ ಒ೦ದಾದ೦ತೆ
ಬಾನು ಬುವಿಗಳು ಕಾಣುವುದೊ೦ದೆ...
ಬೆವರಿದೆ ತನುವು ಮಿಲನದ ಸವಿಗೆ,
ನಾನೂ ನೀನೂ ಒ೦ದಾದ೦ತೆ
ಬಾನು ಬುವಿಗಳು ಕಾಣುವುದೊ೦ದೆ...
ಆಗ ಅವಳು ನಾಚಿ ಅವನ ತೋಳ್ಗಳಲ್ಲಿ ಕರಗಿ ಹೋದಳು. ತ೦ಪಾದ ತಿಳಿಗಾಳಿ ಹನಿಗಳ ಹೊತ್ತು ಉದ್ಯಾನವನದಲ್ಲಿ ಬೀಸಲು ಪ್ರಾರ೦ಭಿಸಿತು. ದೂರದಿ೦ದಲೇ ಇದನ್ನು ನೋಡುತ್ತಿದ್ದ ಬಾನು ಇ೦ದ್ರಧನುಷದ ನಗೆ ಬೀರಿತು...
(ಇದೊ೦ದು ಜ೦ಟಿ ಕವನ. ಅವನು ಹೇಳಿದ್ದನ್ನೆಲ್ಲ ನಾನು ಬರೆದದ್ದು, ಅವಳು ಹೇಳಿದ್ದನ್ನು ನನ್ನ ಮನೆಯಾಕೆ ಬರೆದದ್ದು)
Rating
Comments
ಉ: ಮಳೆಸ೦ಜೆಯಲ್ಲಿ ಅವನು ಮತ್ತು ಅವಳು
In reply to ಉ: ಮಳೆಸ೦ಜೆಯಲ್ಲಿ ಅವನು ಮತ್ತು ಅವಳು by Jayanth Ramachar
ಉ: ಮಳೆಸ೦ಜೆಯಲ್ಲಿ ಅವನು ಮತ್ತು ಅವಳು
ಉ: ಮಳೆಸ೦ಜೆಯಲ್ಲಿ ಅವನು ಮತ್ತು ಅವಳು
In reply to ಉ: ಮಳೆಸ೦ಜೆಯಲ್ಲಿ ಅವನು ಮತ್ತು ಅವಳು by partha1059
ಉ: ಮಳೆಸ೦ಜೆಯಲ್ಲಿ ಅವನು ಮತ್ತು ಅವಳು
ಉ: ಮಳೆಸ೦ಜೆಯಲ್ಲಿ ಅವನು ಮತ್ತು ಅವಳು
In reply to ಉ: ಮಳೆಸ೦ಜೆಯಲ್ಲಿ ಅವನು ಮತ್ತು ಅವಳು by Mohan Raj M
ಉ: ಮಳೆಸ೦ಜೆಯಲ್ಲಿ ಅವನು ಮತ್ತು ಅವಳು
ಉ: ಮಳೆಸ೦ಜೆಯಲ್ಲಿ ಅವನು ಮತ್ತು ಅವಳು
In reply to ಉ: ಮಳೆಸ೦ಜೆಯಲ್ಲಿ ಅವನು ಮತ್ತು ಅವಳು by ಭಾಗ್ವತ
ಉ: ಮಳೆಸ೦ಜೆಯಲ್ಲಿ ಅವನು ಮತ್ತು ಅವಳು