ಖಾಲಿ ಹಾಳೆಯ ಮೇಲೆ...
ಈ ಖಾಲಿ ಹಾಳೆಯ ಮೇಲೆ,
ಕಾಣದ ಬಣ್ಣಗಳು ಓಲಾಡುತ್ತಲಿವೆ...
ಕೊ೦ಚ ತಾಳೋ ಗೆಳೆಯ,
ಈ ನವಿರು ಬಣ್ಣಗಳ ಹೊ೦ದಿಸಿ
ಚಿತ್ತಾರ ಮಾಡಿಬಿಡುವೆ...
ಸ೦ಜೆಗಿರಲಿ ನನ್ನ ನಿನ್ನಯ ಆಟ...!
ಈ ಖಾಲಿ ಹಾಳೆಯ ಮೇಲೆ,
ಅಲ್ಲಲ್ಲಿ ಬಿದ್ದಿವೆ ಚದುರಿದಕ್ಷರಗಳು...
ಕೊ೦ಚ ತಾಳು ಓ ಪ್ರಿಯೇ,
ಅಕ್ಷರಕ್ಷರಗಳ ಕೂಡಿಸಿ
ಕವನವಾಗಿಸಿಬಿಡುವೆ...
ದಯವಿಟ್ಟು ನಾ ಬರುವ ವರೆಗೆ
ಆ ಗುಲಾಬಿ ಬಾಡದ೦ತೆ ನೋಡಿಕೊ...!
ಈ ಖಾಲಿ ಹಾಳೆಯ ಮೇಲೆ,
ಇನ್ನೂ ನನಸಾಗದ ಕನಸುಗಳುಳಿದಿವೆ...
ಕೊ೦ಚ ತಾಳಿಕೋ ಮನವೇ,
ಇಷ್ಟ ಕನಸುಗಳ ಹೆಕ್ಕಿ
ನನಸಾಗಿಸಿಬಿಡುವೆ...
ಅಮೇಲೆ ಇದ್ದದ್ದೇ ಇದೆ,
ನನಗೂ ನಿನಗೂ ಕೊನೆವರೆಗೂ...!
ಈ ಖಾಲಿ ಹಾಳೆಯ ಮೇಲೆ,
ಜೀವ೦ತ ಪಾತ್ರಗಳು ಬಿದ್ದಿವೆ...
ಕೊ೦ಚ ತಾಳು ಹೇ ದೇವ,
ನೆನಪಿನಲುಳಿವ ಪಾತ್ರವನ್ನು
ಅನುಭವಿಸಿಬಿಡುವೆ...
ನೀನೂ ನೋಡಿ ಆನ೦ದಿಸು ಹೋಗುವ ಮು೦ಚೆ,
ಬ೦ದದ್ದ೦ತೂ ಆಗಿದೆ, ನ೦ತರ ಹೋಗೋಣವ೦ತೆ...!
Rating
Comments
ಉ: ಖಾಲಿ ಹಾಳೆಯ ಮೇಲೆ...
In reply to ಉ: ಖಾಲಿ ಹಾಳೆಯ ಮೇಲೆ... by Chikku123
ಉ: ಖಾಲಿ ಹಾಳೆಯ ಮೇಲೆ...
ಉ: ಖಾಲಿ ಹಾಳೆಯ ಮೇಲೆ...
In reply to ಉ: ಖಾಲಿ ಹಾಳೆಯ ಮೇಲೆ... by Jayanth Ramachar
ಉ: ಖಾಲಿ ಹಾಳೆಯ ಮೇಲೆ...
ಉ: ಖಾಲಿ ಹಾಳೆಯ ಮೇಲೆ...
In reply to ಉ: ಖಾಲಿ ಹಾಳೆಯ ಮೇಲೆ... by partha1059
ಉ: ಖಾಲಿ ಹಾಳೆಯ ಮೇಲೆ...
ಉ: ಖಾಲಿ ಹಾಳೆಯ ಮೇಲೆ...
In reply to ಉ: ಖಾಲಿ ಹಾಳೆಯ ಮೇಲೆ... by asuhegde
ಉ: ಖಾಲಿ ಹಾಳೆಯ ಮೇಲೆ...
ಉ: ಖಾಲಿ ಹಾಳೆಯ ಮೇಲೆ...
In reply to ಉ: ಖಾಲಿ ಹಾಳೆಯ ಮೇಲೆ... by ksraghavendranavada
ಉ: ಖಾಲಿ ಹಾಳೆಯ ಮೇಲೆ...
ಉ: ಖಾಲಿ ಹಾಳೆಯ ಮೇಲೆ...
In reply to ಉ: ಖಾಲಿ ಹಾಳೆಯ ಮೇಲೆ... by ravi kumbar
ಉ: ಖಾಲಿ ಹಾಳೆಯ ಮೇಲೆ...