ಮಲೆನಾಡ ಬೆಳಗು
ಕವನ
ಮೂಡಣದಿ ರವಿ ಮೂಡುತಿರಲು
ಹಾಡುವುದು ಹಕ್ಕಿಗೊರಳು
ಏನು ಖುಷಿ! ಏನು ಖುಷಿ!
ಮೆತ್ತನ್ನ ಹುಲ್ಲು ಹಾಸಿನೊಳು
ಮುತ್ತಾಗಿ ಹೊಳೆವುದಿಬ್ಬನಿ
ಏನದೆಂಥ ಚೆಲುವು!
ಕರೆದ ಬಿಸಿಬಿಸಿ ನೊರೆಹಾಲು
ಹೀರಿ ಹಿಗ್ಗುವುದು ಮನವು
ಏನು ಸವಿ!ಏನು ಸವಿ!
ಹಂಡೆ ತುಂಬ ಕಾದ ನೀರು
ಮಂಡೆ ತಂಪು ,ದೇಹ ಹಗುರು
ಆಹಾ! ಅದೇನು ಹಿತವು!
ಬಿಸಿರೊಟ್ಟಿಯ ಜೊತೆ ಜೊತೆಗೆ
ಮೊಸರು, ಜೋನಿ ಬೆಲ್ಲ, ಬೆಣ್ಣೆ
ಏನದೆಂಥ ರುಚಿಯು!
ಮಲೆನಾಡಿನಾ ಬೆಳಗು
ಭಲೆ ಕಾಯಕಕೆ ತೊಡಗು
ಆಹಾ! ಈ ಬದುಕು ಬಲು ಸೊಗಸು!
Comments
ಉ: ಮಲೆನಾಡ ಬೆಳಗು
In reply to ಉ: ಮಲೆನಾಡ ಬೆಳಗು by ನಂದೀಶ್ ಬಂಕೇನಹಳ್ಳಿ
ಉ: ಮಲೆನಾಡ ಬೆಳಗು