ನಾಯಿಯ ಹಾಲಿನ ಮೇವು
ಇದು ಚೀನಾದಲ್ಲಿ ನಡೆದಿದ್ದು. ‘ಸಿಂಹುಲಿ’ ಮರಿಗಳಿಗೆ ನಾಯಿಯೊಂದು ಹಾಲೂಡಿಸಲು ಒಪ್ಪಿತು. ಹೌದಾ? ಮೊದಲು ಈ ಸಿಂಹುಲಿ ಏನು ಎನ್ನುವುದನ್ನು ಹೇಳು, ಎಂದಿರೋ? ಗಂಡು ಸಿಂಹ ವಾಗಿ, ಹುಲಿ ಹೆಣ್ಣಾಗಿ ಇವರೀರ್ವರ ಮಿಲನದ ಫಲವಾಗಿ ಹುಟ್ಟುವ ಮರಿಗೆ ಸಿಂಹುಲಿ ಎನ್ನುತ್ತಾರೆ. ಎನ್ನುತ್ತಾರೆ ಅಂತ ನನ್ನ ಊಹೆ. ಏಕೆಂದರೆ ಈ ಮರಿಗಳಿಗೆ ಆಂಗ್ಲ ಭಾಷೆಯಲ್ಲಿ liger ಎನ್ನುತ್ತಾರೆ. lion + tiger = liger. ಕನ್ನಡದಲ್ಲಿ ಸಿಂಹ + ಹುಲಿ = ಸಿಂಹುಲಿ, ಹೇಗಿದೆ? ಅಥವಾ ಇದಕ್ಕೆ ಬೇರೇನಾದರೂ ಪರ್ಯಾಯ ಪದವಿದ್ದರೆ ವಾಚಕ ಪ್ರಭು ತಿಳಿಸೋಣವಾಗಲಿ.
ಮರಳಿ ಕಥೆಗೆ. zoo ಒಂದರಲ್ಲಿ ಸಿಂಹ ಮತ್ತು ಹುಲಿ ಮಿಲನರಾಗಿ ಹುಟ್ಟಿದ ನಾಲ್ಕು ಮರಿಗಳು ಒಂದೆರಡು ದಿನಗಳ ಕಾಲ ತಾಯಿಯ ಮೊಲೆ ಹಾಲನ್ನು ಕುಡಿದು ನಂತರ ತಮ್ಮ ತಾಯಿ ತಮ್ಮನ್ನು ತ್ಯಜಿಸಿದ ಕಾರಣ ಎರಡ ಮಕ್ಕಳು ಸತ್ತವು. ಉಳಿದ ಎರಡು ಮಕ್ಕಳ ಪಾಡು ನೋಡಿ ಮರುಗಿದ zoo ಸಿಬ್ಬಂದಿ ಅಲ್ಲೇ ಆಗ ತಾನೇ ಮರಿಗಳಿಗೆ ಜನ್ಮ ನೀಡಿದ್ದ ನಾಯಿಯೊಂದರ ಹತ್ತಿರ ಅವುಗಳನ್ನ ಬಿಟ್ಟರು. ಸ್ವಲ್ಪ ಸಮಯ ಹಾಲಿನ ರುಚಿ ಹಿಡಿಸದೆ ಇದ್ದರೂ ಕ್ರಮೇಣ ಅವು ಒಗ್ಗಿ ಕೊಂಡವು ನಾಯಿಯ ಹಾಲಿಗೆ. ಸ್ವಲ್ಪ ದೊಡ್ಡದಾದ ನಂತರ worst scenario ದಲ್ಲಿ ಈ ಮರಿ ‘ಸಿಂಹುಲಿ’ ಗಳು ನಾಯಿಯನ್ನೇ ತಿಂದು ಹಾಕಬಹುದೋ ಅಥವಾ best outcome ಆಗಿ “ಮಲತಾಯಿ”ಯ ಒಡನಾಟದಿಂದ ಸುಶ್ರಾವ್ಯವಾಗಿ ಬೊಗಳಲು ಆರಂಭಿಸುತ್ತೋ ಕಾದು ನೋಡಬೇಕಾದ ಬೆಳವಣಿಗೆ.
ಚಿತ್ರ ಕೃಪೆ: http://www.thedogfiles.com/2011/05/26/dog-helps-feed-abandoned-liger-cubs-in-china/
Rating
Comments
ಉ: ನಾಯಿಯ ಹಾಲಿನ ಮೇವು