ಕುಂದಾಪ್ರ ಕನ್ನಡ

ಕುಂದಾಪ್ರ ಕನ್ನಡ

 

ನನ್ನಿ ಸುನಿಲರ ಬರಹ ನೋಡಿದೆ,  ಮರೆಯಾಗುತ್ತಿರುವ,  ನನಗೆ ಗೊತ್ತಿರುವ ಕೆಲವು ಕುಂದಾಪ್ರ ಕನ್ನಡದ ಶಬ್ದಗಳನ್ನು ಇಲ್ಲಿ ಬರೆದಿರುವೆ. 

 

ಅಲಾಯ್ದ್  =ಪ್ರತ್ಯೇಕ

 
ಇತ್ಲಾಯ್  = ಈ ಕಡೆ.
 
ಇಕಾಣಿ  =  ಇಲ್ಲಿ ನೋಡಿ
 
ಇಗಣಿ = ತೆಗೆದು ಕೊಳ್ಳಿ
 
ಎಡಿಯ = ಸಾಧ್ಯವಿಲ್ಲ
 
ಏಗಳಿಕೆ =ಯಾವಾಗ
 
ಕರ್ಕರಿ = ರಗಳೆ
 
ಕಲಗಚ್ = ಹುಲ್ಲನ್ನು ಕೊಚ್ಚಿ ಬೇಯಿಸಿದ ದನದ ಆಹಾರ
 
ಕರಡ (ಕಯ್ಡ) = ಒಣಗಿದ ಒಂದು ಜಾತಿಯ ಹುಲ್ಲು
 
ಕಡಿಗೆ = ಎಳೆಯ ಹಲಸಿನ ಕಾಯಿ
 
ಕಾರ್(ರು) = ಮಳೆಗಾಲ (ಕಾರ್ ತಿಂಗಳು)
 
ಕುಂಯ್ಕ್ = ವ್ಯಂಗ್ಯ ಮಾಡು
 
ಕುಂಟೆ = ದನದ ಕುತ್ತಿಗೆಗೆ ಕಟ್ಟುವ ಮರದ ತುಂಡು
 
ಕುಮ್ಚಟ್ =ಕಾಲುಗಳನ್ನು ಮೇಲಕ್ಕೆತ್ತಿ ಹಾರುವುದು
 
ಕೈಕೋಚ್ = ತಂಟೆ ಕೋರತನ
 
ಕೊಜ್ಲ್ =ತೊದಲು
 
ಕೊಂಗಾಟ = ಮುದ್ದು
 
ಕೌಂಚ್ = ಕೆಳಮುಖ
 
ಗಡಾ = ಹುಡುಗ
 
ಗಂಟಿ =ದನಕರುಗಳು
 
ಗಾವು =ಶಾಖ
 
ಗುತ್ತಿ =ಗಿಡ
 
ಗುಮ್ಮಿ =ನೀರಿನ ಸಣ್ಣ ಕೆರೆ
 
ಚಣಿಲ =ಅಳಿಲು
 
ಚಿಟ್ಟಿ = ಮನೆಯ ಜಗುಲಿ
 
ಜಕಣಿ =ದೈವ ಭೂತ
 
ಜಾಪ್ =ಜಂಭ
 
ಜಿರಾಪತಿ ಮಳೆ = ಒಂದೇಸಮನೆ ಮಳೆ
 
ತಳಿಕಂಡಿ =ಕಿಟಕಿ
 
ತಿಂಗೋಡ್ =ಸಂಕ್ರಾಮ್ತಿ
 
ತಿಕಾಣಿ ಇಲ್ಲ= ಗತಿ ಇಲ್ಲ
 
ದಾತ್ರಾಳು = ರಾತ್ರಿಯಲ್ಲಿ
 
ದಿಗಡ್ದಿಮ್ಮಿ =ಗಂಡು ಬೀರಿ
 
ನಕ್ಕುಳ= ಎರೆಹುಳ
 
 ನೇಲು =ನೇಗಿಲು
 
 
ಪಿಣ್ಕುಟಿ =ಸಣ್ಣಗಾತ್ರದ
 
ಬರ್ಗೋಲ್ =ಒಣಎಲೆಗಳನ್ನು ಗುಡಿಸುವ ಸಾಧನ
 
ಬಯ್ಯಾಪತಿಗೆ =ಮುಸ್ಸಂಜೆಯಲ್ಲಿ
 
ಬಂಗ್ರಟಿ =ಗರಟದಿಂದೊಡಗೂಡಿದ ತೆಂಗಿನ ಸಿಪ್ಪೆ (ಮಂಗ ತಿಂದು ತೋಟದಲ್ಲಿ ಬೀಳಿಸಿಹೋದದ್ದು)
 
ಬಾದಿ =ಭಾರ
 
ಬೆಳಾರ್ = ಮರಗಿಡಗಳನ್ನು ಕಡಿದು ಖಾಲಿಯಾದ ಜಾಗ
 
ಸಾಪ್ =ಚೆಂದ
 
ಸಾಲಿ =ಜೇಡ
 
ಸೀಂಬು = ಚೀಪು
 
ಸಿಂವಾಳ =ಎಳನೀರು
 
ಸೈಗೋಲ್ = ಕಬ್ಬಿಣದ ಸರಳು
 
ಹಾಳಿ = ರೈತರು ತಲೆಗೆ ಹಾಕುವ ಅಡಿಕೆ ಹಾಳೆಯ ಟೋಪಿ
 
ಹಿಲಾಲು = ಅಪಹಾಸ್ಯ
 
 
 
ಬೇಸಾಯಕ್ಕೆ ಸಂಬಂಧಿಸಿದ , ನಿತ್ಯಜನಜೀವನದಲ್ಲಿ ಬಳಕೆಯಲ್ಲಿದ್ದಿದ್ದ ಅನೇಕ ಪದಗಳು ಕಣ್ಮರೆಯಾಗುತ್ತಿವೆ. 
ಇನ್ನಷ್ಟು ಪದಗಳನ್ನು ಒಟ್ಟು ಮಾಡಬೇಕು.
ಪುರುಸೊತ್ತಿದ್ದಾಗ್ಳಿಕೆ ಕಾಂಬ!
 
 
Rating
Average: 5 (1 vote)

Comments