ಸುಳ್ಳಿನ ಸಂಗ

ಸುಳ್ಳಿನ ಸಂಗ

ಕವನ
ಸುಳ್ಳೊಂದು ಕಾರಣವಣ್ಣ
	ಸಮಸ್ಯೆಗಳ ನೂರಾರು ಸೃಷ್ಟಿಸುವುದಣ್ಣ
ಸುಳ್ಳೊಂದು ಬಂದೂಕಿನಂತಣ್ಣ
	ನಂಬಿಕೆಗೆ ಗುಂಡು ತೂರುವುದಣ್ಣ
ಸುಳ್ಳೊಂದು ಕತ್ತಿಯಂತಣ್ಣ
	ಸಂಬಂಧಗಳ ಕಡಿದು ತುಂಡರಿಸುವುದಣ್ಣ
ಸುಳ್ಳೊಂದು ಕತ್ತರಿಯಂತಣ್ಣ
	ಜೀವನವ ಚೂರು ಚೂರಾಗಿಸುವುದಣ್ಣ
ಸುಳ್ಳೊಂದು ಆಯುಧವಣ್ಣ
	ರಕ್ಷಣೆಗಿಂತ ಅಪಾಯವೇ ಮಿಗಿಲಣ್ಣ
ಸುಳ್ಳಿನ ಸಂಗ ಒಳಿತಲ್ಲಣ್ಣ
	ಸಂಗದಿಂದ ಭಂಗ ತಪ್ಪಿದಲ್ಲಣ್ಣ.

(ಪತ್ರಿಕೆಯಲ್ಲಿ ಬಂದ ಇಂಗ್ಲಿಷ್ ನುಡಿಗಟ್ಟಿನ ಅನುವಾದ) 

Comments