ಕಾಲವೇ ಚಲಿಸು ಹಿಂದಕ್ಕೆ
ಚಲಿಸು ಕಾಲವೇ ಚಲಿಸು ಹಿಂದಕ್ಕೆ | ಮತ್ತೆ ಬಾಲ್ಯವನ್ನು ಮರಳಿಸು |
ಚಲಿಸು ಕಾಲವೇ ಚಲಿಸು ಹಿಂದಕ್ಕೆ | ಮತ್ತೆ ಕಾವ್ಯವನ್ನು ಬರೆಯಿಸು ||
ಮೂಡಬಾಂದಳದೆ ತೇರನ್ನೇಱಿದ ಆದಿತ್ಯದೇವನ ಸಂಗದೆ |
ಓಡೆ ಓಟವನ್ನು ಮಾಡೆ ಮಾಟವನ್ನು ಹೂಡೆ ಹೂಟವನ್ನು | ಬಿಡುವಿರದೆ ||
ಚಲಿಸು ಕಾಲವೇ ಚಲಿಸು ಹಿಂದಕ್ಕೆ | ಮತ್ತೆ ಜವ್ವನವ ಮರಳಿಸು |
ಚಲಿಸು ಕಾಲವೇ ಚಲಿಸು ಹಿಂದಕ್ಕೆ | ಮುಪ್ಪು ಬಾರದೊಲರಳಿಸು ||
ಕೞೆದುಹೋಗಿಹ ದಿನಗಳೆಲ್ಲದರ ಆನಂದವ ಕೊಡು ಹಿಂದಕ್ಕೆ |
ಕಾಣುತ್ತಿದ್ದರೂ ಕೈಗೆ ಎಟಕದ ಕನಸನ್ನೂ ಕೊಡು | ಬಿಡುವಿರದೆ ||
ಚಲಿಸು ಕಾಲವೇ ಚಲಿಸು ಹಿಂದಕ್ಕೆ | ಮತ್ತೆ ಬಾಲ್ಯವನ್ನು ಮರಳಿಸು |
ಚಲಿಸು ಕಾಲವೇ ಚಲಿಸು ಹಿಂದಕ್ಕೆ | ಮತ್ತೆ ಕಾವ್ಯವನ್ನು ಬರೆಯಿಸು ||
ಪಡುವ ಬಾಂದಳದೆ ತೇಲುತ್ತಿಪ್ಪ ಆ ತುಂಬುತಿಂಗಳ ಚಂದದೆ |
ಸುರಿಯುತ್ತಿದ್ದರೂ ಮೆಯ್ಗೆ ಸೋಕದ ಬೆಳ್ವೊನಲನ್ನು ಕೊಡು | ಬಿಡುವಿರದೆ ||
ಚಲಿಸು ಕಾಲವೇ ಚಲಿಸು ಹಿಂದಕ್ಕೆ | ಮತ್ತೆ ಕಾವ್ಯವನ್ನು ಬರೆಯಿಸು ||
ಭೂತಕಾಲದ ಭವಿತನಿಧಿಗಳ ಕಳೆದುಹೋದ ಕೀಲಿಗೊಂಚಲನ್ನು |
ಒಮ್ಮೆ ತಂದುಕೊಡು ಒಮ್ಮೆ ತಂದುಕೊಡು ಒಮ್ಮೆ ತಂದುಕೊಡು ದಯೆಯಿರಲಿ ||
Comments
ಉ: ಕಾಲವೇ ಚಲಿಸು ಹಿಂದಕ್ಕೆ
In reply to ಉ: ಕಾಲವೇ ಚಲಿಸು ಹಿಂದಕ್ಕೆ by nagarathnavina…
ಉ: ಕಾಲವೇ ಚಲಿಸು ಹಿಂದಕ್ಕೆ
(No subject)