ಕನಸಿರುವುದು ಜೀವನದಿ ಕನಸಿರುವುದು

ಕನಸಿರುವುದು ಜೀವನದಿ ಕನಸಿರುವುದು

ಕವನ

ಕನಸಿರುವುದು ಜೀವನದಿ ಕನಸಿರುವುದು

ಏಣಿಯ ಹಾಕಿ ಆಗಸವ ಚುಂಬಿಸುವ ಕನಸಿರುವುದು

ಚುಕ್ಕಿಗಳ ಪೋಣಿಸಿ ಹಾರ ಮಾಡುವ ಕನಸಿರುವುದು

ಚಂದ್ರಮನ ಜೊತೆ ಆಟ ಆಡುವ ಕನಸಿರುವುದು

 

ಹರಿಯುವ ನೀರಿನ ಜುಳು ಜುಳು ನಾದವಾಗುವ ಕನಸಿರುವುದು

ಸಾಗರದ ಪ್ರಶಾಂತ ಅಲೆಯಾಗುವ ಕನಸಿರುವುದು

ಅಲೆ ಅಲೆಯಾಗಿ ದಡವ ಮುತ್ತಿಕ್ಕುವ ಕನಸಿರುವುದು

ಕಪ್ಪೆಚಿಪ್ಪಿನೊಳಗಿನ ಮುತ್ತಾಗುವ ಕನಸಿರುವುದು

 

ಕೋಗಿಲೆ ಕಂಠದ ನಾದವಾಗುವ ಕನಸಿರುವುದು

ಹಕ್ಕಿಯಂತೆ ಆಗಸದಿ ಹಾರುವ ಕನಸಿರುವುದು

ಮೊದಲ ಮಳೆಯ ಮೊದಲ ಹನಿಯ ಸ್ಪರ್ಶದ ಕನಸಿರುವುದು

ನವಿಲಾಗಿ ಮಳೆಗೆ ನರ್ತಿಸುವ ಕನಸಿರುವುದು

 

ಹಸಿರು ಪೈರಿನ ಮೇಲೆ ಮಂಜಿನಹನಿಯಾಗುವ ಕನಸಿರುವುದು

ಹೂವಿನೊಳಗಿನ ಮಕರಂದವಾಗುವ ಕನಸಿರುವುದು

ಬಣ್ಣ ಬಣ್ಣದ ಪತಂಗದಂತೆ ಹಾರುವ ಕನಸಿರುವುದು

ಗಾಳಿಪಟವಾಗಿ ಆಗಸದಿ ಹಾರಾಡುವ ಕನಸಿರುವುದು

Comments