ಈ ಶಬ್ದಗಳು ನಿಮಗೆ ಗೊತ್ತೇ ?
ಸಂತ್ಯಾಗ ಕಾಯಿಪಲ್ಲೇ ಕುಟ್ರಿ ಹಾಕಿದಂಗ ಇಲ್ಲಿ ಒಂದಿಷ್ಟು ಶಬ್ದ ಕುಟ್ರಿ ಹಾಕೇನಿ , ನೋಡ್ರಿ , ನಿಮಗ ಎಷ್ಟು ಗೊತ್ತ್ ಅವ ಅಂತ , ನಿಮಗ ಏನಾದ್ರೂ ಉಪಯೋಗ ಆಗ್ತಿದ್ರ ತಕೊಂಡು ಬಳಸ್ಲಿಕ್ಕೆ ಶುರು ಮಾಡ್ರಿ !
ಕುಟ್ರಿ = ಗುಡ್ಡೆ
ವಸ್ತ= ಒಡವೆ
ಒಡವಿ-ವಸ್ತ = ಒಡವೆ( ಜೋಡುಪದವಾಗಿ )
ಜಿನ್ನೆ - ಅಟ್ಟ ?
ಸೆಲ್ಲೆ = ಶಲ್ಯ
ದೈನಾಸಪಡು = ದೈನ್ಯಭಾವ ಹೊಂದು
ಮೈ ತೊಳಕೊಳ್ಳುವದು / ಜಳಕ = ಸ್ನಾನ ಮಾಡು (ಅಪ್ಪಟ ಕನ್ನಡ - ಗಮನಿಸಿ)
ಸ್ನಾನಾ-ಮೈ = ಸ್ನಾನ ಇತ್ಯಾದಿ
ಕಡಿಗಿ =ಮುಟ್ಟು ( ಕಡಿಗಿ-ಮುಟ್ಟು ಜೋಡುಪದವಾಗೂ ಇದೆ)
ಹಡಿ = ಹೆರು
ಜSರ್‍ಕರ್ತಾ -ಒಂದುವೇಳೆ
ಉಲಕೋಚಿ= ತುಂಟ
ಪೈಲಾ ನಂಬರು = ಮೊದಲ ಸ್ಥಾನ
ನಪಾಸು = ಫೇಲ್ , ಅನುತ್ತೀರ್ಣ
ಪಾಸು = ಪಾಸ್ , ಉತ್ತೀರ್ಣ
ಇಯತ್ತಾ/ಇಯತ್ತೆ = ಶಾಲೆಯಲ್ಲಿನ ವರ್ಗ - ಮೊದಲನೇತ್ತಾ , ಎರಡನೇತ್ತಾ ಇತ್ಯಾದಿ
ಬಿನ್ನೇತ್ತಾ= ಮೊದಲ ಇಯತ್ತೆಗಿಂದ ಮೊದಲಿನದು = ಈಗಿನ LKG/UKG
ಗಂಗಾವನ= ಚೌರಿ ? ಸ್ಟೆಪ್ನಿ ಕೂದಲು !ತುರುಬಿಗೆ ಉಪಯೋಗಿಸ್ತಿದ್ರಂತ ಕಾಣ್ತದೆ
ಉರವಣಗಿ,ಉರಿವಣಿಗೆ - ಉರಿಯುವದು / ಹಾರಾಡುವದು ( ಮೆರೆ -> ಮೆರೆವಣಿಗೆ ಯ ಹಾಗೆ ಉರಿ->ಉರಿವಣಿಗೆ , ಅಂದ ಹಾಗೆ ಮೆರವಣೂಕಿ ಮರಾಠೀಯಲ್ಲಿ ಮೆರೆವಣಿಗೆ ಅರ್ಥದಲ್ಲಿ ಇದೆ)
ಭಾವುಜೀ = ಮೈದುನ
ವೈನಿ = ಅತ್ತಿಗೆ
ಕಾಕಾ = ಚಿಕ್ಕಪ್ಪ / ದೊಡ್ಡಪ್ಪ
ಕಾಕು = ಚಿಕ್ಕಪ್ಪ/ದೊಡ್ಡಪ್ಪನ ಹೆಂಡತಿ
ಅಬಚಿ/ಮಾವಶಿ = ತಾಯಿಯ ತಂಗಿ
ಒಪ್ಪಿಡು =ಪರ ವಹಿಸಿಕೊಂಡು ತಪ್ಪನ್ನು ಮುಚ್ಚಿ ಹಾಕುವದು, ಗಮನಿಸಿ ->ಒಪ್ಪ ಇಡು
ನಾಡದ = ನಾಡಿದ್ದು
ಸಾಡೇ = ಮದುವೆ /ಮುಂಜಿವೆ ಇತ್ಯಾದಿ ಮಂಗಳಕಾರ್ಯ
ಅನಿರ್ವಾ/ ನಿರ್ವಾ ಇಲ್ಲದ = ಬೇರೆ ಉಪಾಯವಿಲ್ಲದೆ , ನಿರ್ವಾಹವಿಲ್ಲದೆ /ಅನಿರ್ವಾಹ
ತರುಬು = ನಿಲ್ಲಿಸು
ಮೋಘಂ = ಮುಗುಮ್ಮಾಗಿ
ಸನ್ನಿ-ಸೂಕ್ಷ್ಮ = ಸಂಜ್ಞೆ-ಸೂಕ್ಷ್ಮ
ಪರಕಾರ = ಲಂಗ
ಪಂಗ್ತಿ = ಪಂಕ್ತಿ/ಪಂಙ್ತಿ , ಸಾಲು ( ಸಾಮಾನ್ಯವಾಗಿ ಸಮಾರಂಭದಲ್ಲಿ ಊಟದ ಸರದಿ)
ಪಂಕ್ತಿ-ಊಟ = ಒಟ್ಟಿಗೆ ಮಾಡುವ ಊಟ
ಪೋಲಕ = ಒಂದು ತರಹದ ರವಿಕೆ/ಬ್ಲೌಸು
ಕುಬಸ = ಕುಪ್ಪಸ , ರವಿಕೆ ,ಬ್ಲೌಸು
ಹುರುಹುರು / ರಕರಕ = ನೆಮ್ಮದಿ /ಸಮಾಧಾನ ಇಲ್ಲದೆ ಇರುವದು
ಹ್ಯಾಂವ ( ಹೇವ) = ಛಲ ( ಅಪ್ಪಟ ಕನ್ನಡ ? )
ಕಬೂಲ್ = ಒಪ್ಪಿಗೆ
ಕಬೂಲ್ ಮಾಡಿಸು = ಒಪ್ಪಿಸು
ಜಿನSಗ = ಸಣ್ಣ, ಸೂಕ್ಷ್ಮ
ನಸೀಕ್ಲೆ = ನಸುಕಿನಲ್ಲಿಯೇ
ಪಾತೇಲಿ/ಭಾಂಡಿ/ಭಾಂಡೇ = ಪಾತ್ರೆ
ಯೆಬ್ಬಂಕ = ಧಡ್ಡ
ಘೋಕು = ಬಾಯಿಪಾಠ
ತೋಂಡಿ = Oral ಪರೀಕ್ಷೆ
ಅಡ್ಡಾಗಲ = ಅಡ್ಡ-ಅಗಲ (ಜೋಡುಪದವಾಗಿ )
ಒಪ್ಪತ್ತು = ಒಂದು ಹೊತ್ತು / ಒಂದು ಹೊತ್ತಿನ ಉಪವಾಸ
ನಾಕೊಪ್ಪತ್ತು (ನಾಲ್ಕು ಒಪ್ಪತ್ತು )= ಕೆಲವು ದಿನ
ಭಿಡೆ = ಸಂಕೋಚ
ಹಂತೀಲೆ , ಹತೀಲೆ , ಹಂತೇಕ= ಹತ್ತಿರ
ರೊಕ್ಕ = ಹಣ
ಪಿಸಿ = ಜಾಳು ಜಾಳಾಗಿದ್ದು ಹರಿಯುವಂತಿರು
ಟಿಕಳಿ = ಬಿಂದಿ
ಟಿಕ್ಕಿ = ಚುಕ್ಕಿ , ಬಿಂದು
ಚಹಾಅಂಗಡಿ/ಚಾದಂಗಡಿ =ಹೋಟೆಲು
ಪಂಚೇತಿ = ಫಜೀತಿ
ರಸಕಸಿ = ಜಗಳ , ಮನಸ್ತಾಪ (ರಂದಿ-ರಸಕಸಿ ಜೋಡುಪದವಾಗಿ)
ಬಾಕು = ಬೆಂಚು
ವಾದಿಸ್ಯಾಟ = ಮಾತಿನ ಚಕಮಕಿ ...( ಕನ್ನಡದವರು ಜಗಳ ’ಆಡು’ತ್ತಾರೆ ಎಂಬುದಕ್ಕೆ ಇನ್ನೊಂದು ಉದಾಹರಣೆ!)
ತಂಬೂ = ಟೆಂಟು
ಪಾವಟಣಿಗೆ = ಮೆಟ್ಟಿಲು ( ಎರಡೂ ಕಾಲಿಗೆ ಸಂಬಂಧಪಟ್ಟಿರೋದನ್ನ ಗಮನಿಸಿ!)
ಕಾಲಾಗಿಂದು / ಕಾಲಾಗಿನ್ನು = ಚಪ್ಪಲಿ ... ( ಹೋಲಿಸಿ ಮೆಟ್ಟು -ಕಾಲಲ್ಲಿ ಮೆಟ್ಟಿಕೊಳ್ಳೋದು) !
ತುದಿನಾಲಿಗೆ = ನಾಲಿಗೆಯ ತುದಿ
ಜುಲುಮಿ = ಒತ್ತಾಯ
ಗುನ್ಹೆ = ಅಪರಾಧ
ಗಡಿಯಾಳ = ಗಡಿಯಾರ
ಹೌಸು = ಉತ್ಸಾಹ
ಇಳಿಥರ = ಇಳಿಕೆಯ (ಅವನತಿ , ಪತನ , ಡೌನುಫಾಲು :) ) ಟ್ರೆಂಡು. ( ಅಪ್ಪಟ ಕನ್ನಡ ಗಮನಿಸಿ)
ಹೌರಗ = ಹಗುರವಾಗಿ
ಹವಣೀ - ಹೆಚ್ಚೂ ಅಲ್ಲದ ಕಡಿಮೆಯೂ ಅಲ್ಲದ, ’ಮೀಡಿಯಂ’:) , ಸರಿಯಾದ
ಸೈಲ = ಸಡಿಲ
ಹಪಾಪಿಸು - ಬಾಯಿಬಿಡು
ಹಪಾಪೀ, ಹಪಾಪಿತನ
ಲಠ್ಠ - ದಪ್ಪ
ಅಡಬರಿಸು= ಧಾವಿಸು , ಓಡಿ ಬಾ
ಸೆಡವು - ಸೆಟೆದುಕೊಂಡಿರುವದು (ಸಿಟ್ಟು-ಸೆಡವು ಜೋಡಿಪದ)
ಮಸಡಿ/ಮುಸಡಿ = ಮುಖ,ಮೋರೆ
ಮಾರಿ= ಮೋರೆ , ಮುಖ (ಮುಖ-ಮಾರಿ ಜೋಡಿಪದ)
ಗಪ್ಪಾಗು = ಸುಮ್ಮನಾಗು
ಚುಟ್ಟಾ=ಬೀಡಿ (ಬೀಡಿ-ಚುಟ್ಟಾ ಜೋಡಿಪದ)
ನಜರು=ದೃಷ್ಟಿ , ನೋಟ
ಸಾಬಾಣ = ಸಾಬೂನು
ಸಾಬಾಣವಡಿ=ಸಾಬೂನುಬಿಲ್ಲೆ
ಗವಸಣಿಗೆ = cover , ಹೊದಿಕೆ
ಹಾಸಿ = ಹಾಯಿಸಿ
ಹಾಸ್ಯಾರ್ತಿ/ಚ್ಯಾಷ್ಟಿ = ಚೇಷ್ಟೆ,ಹಾಸ್ಯ
ಮಾರಾಮಾರಿ= ಹೊಡೆದಾಟ
ಮೇಲುಗಟ್ಟು - ಇದೇ/ಇವರೇ ಮೇಲು ಅಂತ ಸಾಧಿಸು
ಗದಿಗ್ಗೆ = ಗದುಗಿಗೆ
ಅಯ್! = ಅರೆ!
ಅಯ್ಯS - ಒಂದು ಉದ್ಗಾರ
(ವಾಸನೆ) ಇಡುಗು = ವ್ಯಾಪಿಸು , ಹರಡಿರು
ಕಟಿಯೋದು = ತಿನ್ನೋದು ಅಥವಾ ಹೊಡಿಯೋದು ( ಸಂದರ್ಭಾನುಸಾರ ಅರ್ಥ )
ಘಳಸು = ಗಳಿಸು
ಅಪದ್ಧ/ವಾಗತ್ಯ = ಆಡಬಾರದ ಮಾತು
ತೆಳಗ = ಕೆಳಗೆ
ದೇಖರೇಕಿ = ಮೇಲ್ವಿಚಾರಣೆ
ಪಿಂಚಣಿ = ಪೆನ್ಶನ್
ಮುಸಾಫಿರಿ ಬಂಗ್ಲೆ = ಟ್ರಾವೆಲರ್‍ಸ್ ಬಂಗ್ಲೋ
ಡಾಣಿ = ಖಾರಾ , ಸೇವು , ಮಿಕ್ಸ್‍ಚರ್
ಚುರಮುರಿ = ಮಂಡಕ್ಕಿ ... ನೀರುಚುರಮುರಿ ಮತ್ತು ಬೆಳಗಾಂವ್ ಚುರುಮುರಿ ಎರಡು ಬಗೆ
ಅಂಗಾರ = ಗುಡಿಯಲ್ಲಿರುವ ಹಚ್ಚಿಕೊಳ್ಳುವ ಭಸ್ಮ
ಅಕ್ಷಂತಿ-ಅಂಗಾರ / ಅಂಗಾರ ಅಕ್ಷಂತಿ ಜೋಡುಪದ
ಮಾಳಿಗಿ - ಮೇಲ್ಛಾವಣಿ , ಟೆರೇಸು :)
ಮುನ್ನಾದಿನ = ಮುಂಚಿನ ದಿನ
ಮುಂಚಿತ= ಮುಂಗಡ , ಅಡ್ವಾನ್ಸ್ ( ಅಪ್ಪಟ ಕನ್ನಡ ಶಬ್ದ ಗಮನಿಸಿ )
ಮೊದ್ಲೇಕ -ಮೊದಲು
ಪಟ್ಟಾ = ಬೆಲ್ಟ್
ಮುಂಜಿವಿ = ಮುಂಜಿ , ಉಪನಯನ
ಗಮನಿಸಿ
ಹಾಸು (ಕ್ರಿಯಾಪದ)-> ಹಾಸು (ನಾಮಪದ), ಹಾಸಿಗೆ
ಟೈಲ್ಸ್ =ನೆಲಹಾಸು
ಮಗ್ಗುಲಾಸಿಗಿ = ಹಾಸಿಗೆಯ ಮೇಲೆ ಹಾಸುವ ಬೆಡ್‍ಶೀಟು
ಪಲ್ಲಂಗ = ಮಂಚ - ಕಾಟ್ :)
ಗುಣಾ ಕೂಡಿ ಬರುವದು - ಜಾತಕದಲ್ಲಿ ಅಂಕಗಳು ಬರುವದು
ಜಡ್ಡು = ರೋಗ
ಜಡ್ಡು-ಜಾಪತ್ರಿ = ರೋಗ-ರುಜಿನ (ಜೋಡುಪದ)
ಮುಂದಿನ್ನು ಸರೀತ್ನಾಗಿ ಗೊತ್ತಿಲ್ಲ . ಗೊತ್ತಿದ್ದವ್ರು ಅರ್ಥ ಹೇಳ್ರಿ .
ಗೊಕ್ಕು ತುಂಬುವ ಬಾವಿ ?
ಜಂಗೀ - ?
ಜಂಗೀ ನಿಕಾಲಿ -?
ಕಟಬಾಯಿ ?
ಉರುಟಣೆ ?
ಭೂಮ ?
ಈ ಗಾದಿ ಮಾತು ನಿಮಗ ಗೊತ್ತೇನು ?
ಅಂತಃಕರಣಕ್ಕೆ ನಾಚಿಕೆ ಇಲ್ಲ ; ಅಂಗಾಲಿಗೆ ಹೇಸಿಗೆ ಇಲ್ಲ
Comments
ಉ: ಈ ಶಬ್ದಗಳು ನಿಮಗೆ ಗೊತ್ತೇ ?
ಉ: ಈ ಶಬ್ದಗಳು ನಿಮಗೆ ಗೊತ್ತೇ ?
ಉ: ಈ ಶಬ್ದಗಳು ನಿಮಗೆ ಗೊತ್ತೇ ?