ಬೀದಿ ಬದಿಯಲ್ಲಿರುವವರು

0
ಊರು ಅಂದ ಮೇಲೆ ಹೊಲಗೇರಿ ಇರಲೇಬೇಕು ಅನ್ನುವುದು ನಾಣ್ನುಡಿ (ನಾಡು ನುಡಿ). ಆದರೆ ಈಗ ಎಲ್ಲೆಲ್ಲಿಯೂ ಬೀದಿ ಬದಿಯಲ್ಲಿ ವಾಸ ಮಾಡುವವರು ಜಾಸ್ತಿ ಆಗ್ತಿದ್ದಾರೆ. ಎಷ್ಟೇ ಕ್ಷಾಮ, ಪ್ರಳಯ ಮತ್ತಿತರೇ ನೈಸರ್ಗಿಕ ಪ್ರಕೋಪಗಳು ಆಗುತ್ತಿದ್ದರೂ ಇವರುಗಳ ಸಾವು ಜಾಸ್ತಿ ಆಗುತ್ತಿದ್ದರೂ ಮತ್ತೆ ಮತ್ತೆ ಇವರ ಸಂಖ್ಯೆ ಹೆಚ್ಚಾಗುತ್ತಿದೆ. ಇವರು ಜೀವನಕ್ಕೆ ಎಷ್ಟೇ ಕಷ್ಟಪಟ್ಟರೂ ಜೀವನ ನಡೆಸುವುದು ದುಸ್ತರವಾಗುತ್ತಿದೆ. ಹಾಗೇ ಆಚೀಚೆಯ ಆಕರ್ಷಣೆಯೂ ಇವರುಗಳನ್ನು ಸೆಳೆಯುತ್ತಿದೆ. ಇದರಿಂದಾಗಿ ಕಳ್ಳತನಗಳು, ದರೋಡೆಗಳು, ಕೊಲೆ ಸುಲಿಗೆಗಳು ಜಾಸ್ತಿಯಾಗುತ್ತಿವೆ. ಇದಕ್ಕೆ ಕಾರಣವೇನಿರಬಹುದು? ಇವರ ಸಂಖ್ಯೆಯ ಹೆಚ್ಚಳ ತಡೆಯಲಾಗದೇ? ಹಾಗಿದ್ದರೆ ಏನು ಉಪಾಯ ಮಾಡಬೇಕು? ಇದಕ್ಕೆ ಮುಖ್ಯ ಕಾರಣ - ಬಡತನ, ಅನಕ್ಷ್ರರಸ್ತತೆ, ನಿರುದ್ಯೋಗ, ಹಳ್ಳಿಗಳಿಂದ ನಗರಗಳಿಗೆ ವಲಸೆ, ಮುಂತಾದ ಸಾಮಾಜಿಕ ಸಮಸ್ಯೆಗಳು. ಇದೆಲ್ಲ ಒಂದಕ್ಕೊಂದು ಸಂಬಂಧಿಸಿದವು. ಒಂದನ್ನು ಸರಿಪಡಿಸಿದರೆ ಮಿಕ್ಕೆಲ್ಲವೂ ಸರಿ ಹೋಗುವುದು. ಒಂದು ಸರಿಪಡಿಸದಿದ್ದರೂ ಮಿಕೆಲ್ಲ ಉಲ್ಬಣಗೊಳ್ಳುವುವು. ಸರ್ಕಾರವು ಮೊದಲಿಗೆ ಎಲ್ಲರಿಗೂ ಕಡ್ಡಾಯ ಶಿಕ್ಷಣ ಕೊಟ್ಟರೆ ಮಿಕ್ಕೆಲ್ಲವೂ ಕಡಿಮೆಯಾಗುವುದು. ಬರೆಯುತ್ತಾ ಹೋದರೆ ಇದೊಂದು ದೊಡ್ಡ ಲೇಖನವೇ ಆಗುವುದು. ನಿಮ್ಮ ನಿಮ್ಮಗಳ ಅನಿಸಿಕೆ ಏನು?
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ನಿಜ. ಇದೊಂದು ಉಲ್ಬಣವಾಗಿರುವ ಸಮಸ್ಯೆ. ನಮ್ಮ ರಾಜಕಾರಣಿಗಳಂತೂ ಇದನ್ನು ಸುಧಾರಿಸುವಲ್ಲಿ ಸಹಾಯವಾಗರು. ಅವರು ತಮ್ಮ ತಮ್ಮ ಜೇಬು ತುಂಬಿಕೊಳ್ಳುವುದಕ್ಕೆ ಅವರವರ ಹುದ್ದೆಯಲ್ಲಿರುವುದು. ಲಾಲ್ ಬಹದೂರ್ ಶಾಸ್ತ್ರಿ ಕಾಲ ಈಗಿಲ್ಲ :) ಇದಕ್ಕೆ ಪರಿಹಾರ ಇಷ್ಟೆ: ಇನ್ಫ್ರಾಸ್ಟ್ರಕ್ಚರ್ ಸುಧಾರಿಸುವುದು. ಹೆಚ್ಚು ಕೆಲಸಗಳನ್ನು ಸೃಷ್ಟಿ ಮಾಡುವುದು. ಪರಿಹಾರ 'ಇಷ್ಟೆ' ಎನಿಸಿದರೂ ಅದು ಸುಲಭವಲ್ಲ. ಆದರೂ ಹಲವಾರು ಭಾರತೀಯರು ತಮ್ಮ ಜೀವನವನ್ನೇ ತೆತ್ತು ಬಹುಮಟ್ಟಿಗೆ ಇದನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಂಬರುವ ವರ್ಷಗಳಲ್ಲಿ ಇನ್ನಷ್ಟು ಭಾರತೀಯರು ಆ ಹಾದಿ ಹಿಡಿಯುವರು ಎಂದು ನನ್ನ ನಂಬಿಕೆ. ಹೀಗೆ ಅಂತಹ ಹಾದಿ ಹಿಡಿದವರ ಸಂಖ್ಯೆ ಹೆಚ್ಚಾದಲ್ಲಿ ಸ್ಥಿತಿ ಸ್ವಲ್ಪ ಸುಧಾರಿಸಬಹುದು. ಇನ್ನು ಜನಸಂಖ್ಯೆ ಮತ್ತು ಕಳಪೆ ಹ್ಯೂಮನ್ ರಿಸೌರ್ಸಿಗೆ ಕಾರಣ ನೀವು ಹೇಳಿದಂತೆ ಶಿಕ್ಷಣ ವ್ಯವಸ್ಥೆ. ಇದು ಸುಧಾರಿಸಲೇಬೇಕು. ಸರಕಾರದ ಸುಧಾರಣೆಗಳು ಫಲ ಕೊಡುವ ಹೊತ್ತಿಗೆ ಈ ಶತಮಾನವೇ ಕಳೆದು ಹೋಗುತ್ತದೆ, ಬಹುಶಃ. ಇದಕ್ಕೆ ದುಡ್ಡಿದ್ದವರು ಆದಷ್ಟೂ ಸುಧಾರಣೆಯೆಡೆಗೆ ಎನ್ ಜಿ ಓ ಗಳ ಮೂಲಕ ಪ್ರಯತ್ನಿಸುವುದು ಒಳ್ಳೆಯ ದಾರಿ. ನಮ್ಮ ಭಾರತದಲ್ಲಿ ದುಡ್ಡು ಹಿಡಿದಿಡುವುದು, ಕೂಡಿಡುವುದು (ಬ್ಲಾಕ್ ಮನಿ) ಹೇರಳವಾದ್ದರಿಂದ ಹಣದ ಹರಿವಿಗೆ ತಡೆಯುಂಟಾಗುತ್ತದಾದ್ದರಿಂದ ಒಟ್ಟು ಇನ್ಫ್ರಾಸ್ಟ್ರಕ್ಚರ್ ವ್ಯವಸ್ಥೆಗೆ ಧಕ್ಕೆಯುಂಟಾಗುತ್ತದೆಂದು ಎಕಾನಾಮಿಕ್ಸ್ ಓದುತ್ತಿರುವ ಸ್ನೇಹಿತರೊಬ್ಬರು ಹೇಳಿದ ನೆನಪು (ಅದೆಷ್ಟು ಸರಿಯಾಗಿ ಆಗ ನಾನು ಅರ್ಥೈಸಿಕೊಂಡಿದ್ದೆನೊ ನನಗೆ ತಿಳಿಯದು, ನನಗೆ ನೆನಪು ಬಂದದ್ದನ್ನ ಬರೆದಿರುವೆ). ಕೂಡಿಟ್ಟ ಹಣ ಹೊಸತರಲ್ಲಿ ಹೂಡಿ, ಹೊಸ ವ್ಯವಸ್ಥೆಗಳಲ್ಲಿ ಹೂಡಿ ಹೆಚ್ಚಾಗಿ ಕೆಲಸಗಳನ್ನು ಸೃಷ್ಟಿಸಿದರೆ ಸ್ಥಿತಿ ಎಷ್ಟೊ ಸುಧಾರಿಸಬಹುದು. ಇವು ನನ್ನ ಆಲೋಚನೆಗಳು. [:http://sampada.net/u...|ಶಾಮ್ ಕಶ್ಯಪ್] ರವರು ಇದನ್ನು ಓದಿದರೆ ಒಂದಷ್ಟು ಬರೆಯುವರು. ಅವರು ಇದೇ ಕುರಿತು ಕೆಲವು ಸಂಶೋಧನೆಗಳನ್ನು ಮಾಡುತ್ತಿದ್ದಾರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಮೇಲೆ ತಿಳಿಸಿರುವಂತೆ, ಈ ಎಲ್ಲಾ ಸಾಮಾಜಿಕ ಸಮಸ್ಯೆಗಳಿಗೆ ಎಲ್ಲರಿಗೂ ಪ್ರಾಥಮಿಕ ವಿದ್ಯೆ ನೀಡದಿರುವುದೇ ಕಾರಣ. ಜೊತೆಗೆ ಆರ್ಥಿಕ ಅಸಮತೋಲನ, ರಾಜಕಾರಣಿಗಳಿಂದ ಸರಕಾರದ ಹಣದ ದುಂದುವೆಚ್ಚ, ಆದಾಯ ತೆರಿಗೆ ವಂಚನೆ, ಕಾಳ ಸಂತೆ, ಕಪ್ಪು ಹಣ ಇತ್ಯಾದಿಗಳೂ ಸಮಸ್ಯೆಗಳನ್ನು ಉಲ್ಬಣಗೊಳಿಸಿವೆ. ಈ ಹಿಂದೆ ೧೯೯೧ರಲ್ಲಿ ವಸಂತಸಾಠೆಯವರು ಆರ್ಥಿಕ ಸಮಸ್ಯಯನ್ನು ನಿವಾರಿಸಲು ಆದಾಯ ತೆರಿಗೆ ಹೇರುವ ಬದಲು ಖರ್ಚಿನ ಮೇಲೆ ತೆರಿಗೆ ವಿಧಿಸಲು ಸೂಚಿಸಿದ್ದರು. ಯಾರೂ ಅದರ ಕಡೆ ಗಮನ ಹರಿಸಲೇ ಇಲ್ಲ. ಖರ್ಚಿನ ಮೇಲೆ ತೆರಿಗೆ ಹೇರಿದರೆ ಕಪ್ಪು ಹಣವನ್ನು ಸುಲಭವಾಗಿ ನಿಯಂತ್ರಿಸಬಹುದು. ಆದರೆ ಇದನ್ನು ಎಷ್ಟರ ಮಟ್ಟಿಗೆ ಚಾಲ್ರಿಯಲ್ಲಿ ತರುವರೋ? ಈ ಸಮಸ್ಯೆಗಳನ್ನೆಲ್ಲಾ ನೋಡುತ್ತಿದ್ದರೇ ಮತ್ತು ನಮ್ಮ ಸರಕಾರದ (ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ) ವಿಮುಖ ಕಾರ್ಯಾಚರಣೆಯನ್ನೂ ಗಮನಿಸಿದರೆ ಅಷ್ಟು ಸುಲಭವಾಗಿ ಈ ದೇಶ ಉದ್ಧಾರವಾಗೋಲ್ಲ. --- ತವಿಶ್ರೀನಿವಾಸ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.