ಅವರು ಕೊನೆಗೂ ಕೇಳಿಲ್ಲ.......!

ಅವರು ಕೊನೆಗೂ ಕೇಳಿಲ್ಲ.......!

ಕವನ

 

       ಅಪ್ಪ  ಅಮ್ಮ.....!

       ತಾವೇ ಕಟ್ಟಿಕೊಂಡ ಸ್ವ ಪ್ರತಿಷ್ಠೆಯ ಗೂಡಿನಲ್ಲಿ

       ಕನಸಿನ ಮೊಟ್ಟೆ ಇಟ್ಟು......

       ಕಾವು ಕೊಡುತ್ತ  ಕುಳಿತು ಬಿಟ್ಟಿದ್ದಾರೆ.!

 

        ಅವರೆದುರು  ನನ್ನ ಕನಸು.

        ಮಳೆಗಾಲದ ಮಾವಿನಷ್ಟು ಅಗ್ಗ !

 

        ಪಕ್ಕದ ಮನೆಯ ಹುಡುಗನೊಂದಿಗೆ

        ತಾಳೆ ನೋಡಿ.....

        ತಾಳೆಗರಿ ತೆಗೆಯುವ ಭವಿಷ್ಯಕಾರರಂತೆ !

       

          ಅವರಿಗೆ...........!

         ಕಾರಲ್ಲಿ ಕುಳಿತು ಕಂಠ ಪೂರ್ತಿ ಬಂಗಾರ

         ಬಿಗಿದುಕೊಳ್ಳುವ  ಬಯಕೆ !

         ಅದಕಾಗಿ ನಾನು  ವೈದ್ಯನೋ,ಅಭಿಯಂತರನೋ.

        ಏನೇನೋ ಆಗಬೇಕೆಂಬ ಲೆಕ್ಕಾಚಾರ

 

        ಪರೀಕ್ಷೆಗೆ ತೆರಳುವ ಮುನ್ನ ಅಜ್ಜಿಯ ಆಶಿರ್ವಾದ

        " ಅತಿ ಹೆಚ್ಚು  ರೇಂಕ್ ಪಡೆದು ಪಾಸಾಗು ಮಗು"-

         ಅಜ್ಜಿಯ ಆಶಿರ್ವಾದ ಫಲಿಸಿದೆ.............

         ಮೊನ್ನೆ ಸಿ.ಇ.ಟಿ ಫಲಿತಾಂಶ ಬಂದಾಯ್ತು

        ಪಡೆದದ್ದು  "32000 "ನೇ ರೇಂಕ್

        ಪಾಪ !  ಅಜ್ಜಿಗೇನು ಗೊತ್ತು....

 

         ಆದರೆ.......

         ಅಪ್ಪ  ಅಮ್ಮ ಈಗಲೂ ನನ್ನನ್ನು ಕೇಳಿಲ್ಲ

         "ಮಗಾ ನೀನು ಏನಾಗ ಬಯಸುವಿ ಎಂದು "

        

     

        

       

      

Comments