ಬಾಬಾ ರಾಮದೇವ್ ಉಪವಾಸ ಸತ್ಯಾಗ್ರಹ
ಅಣ್ಣಾ ಹಜಾರೆ ಅವರ ನಂತರ ಆ ಮಟ್ಟದಲ್ಲಿ ಭ್ರಷ್ಟಾಚಾರದ ವಿರುದ್ಧ ಈಗ ಕೇಳಿ ಬರುತ್ತಿರುವ ಮತ್ತೊಂದು ಹೆಸರು ಯೋಗ ಗುರು ಬಾಬಾ ರಾಮದೇವ್ ಅವರದ್ದು. ಅಣ್ಣ ಹಜಾರೆ ಅವರ ಸತ್ಯಾಗ್ರಹಕ್ಕೆ ಇಡೀ ದೇಶವೇ ಬೆಂಬಲ ಸೂಚಿಸಿದ್ದು, ಸರ್ಕಾರ ಕೂಡ ಮಣಿದು ಲೋಕ್ಪಾಲ್ ಬಿಲ್ಲನ್ನು ಜಾರಿಗೆ ತರುವುದಾಗಿ ಭರವಸೆ ನೀಡಿದ್ದು, ಅಣ್ಣ ಹಜಾರೆ ಅವರ ಬಹಿರಂಗ ಸಭೆಗಳು ನಡೆಯುತ್ತಿರುವದು ಎಲ್ಲವೂ ಪ್ರಶಂಸನೀಯ.
ಈಗ ಯೋಗ ಗುರು ಬಾಬಾ ರಾಮದೇವ್ ಅವರು ಇದೆ ಜೂನ್ ನಾಲ್ಕರಿಂದ ಆಮರಣಾ೦ತರ ಉಪವಾಸ ಕೈಗೊಳ್ಳುವುದಾಗಿ ಹೇಳಿದ್ದಾರೆ. ಕೇಂದ್ರ ಸರ್ಕಾರಕ್ಕೆ ಈಗ ಹೊಸ ತಲೆನೋವು ಶುರುವಾಗಿದೆ. ಬಾಬಾ ರಾಮದೇವ್ ಅವರ ಕೋರಿಕೆಗಳೇ ಕೇಂದ್ರ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿರುವುದು. ಮೊದಲನೆಯ ಕೋರಿಕೆಯಾಗಿ ಸ್ವಿಸ್ ಬ್ಯಾಂಕ್ ನಲ್ಲಿ ಕೊಳೆಯುತ್ತಿರುವ ಭಾರತದ ಕಪ್ಪು ಹಣ ಅಷ್ಟನ್ನು ವಾಪಸ್ ತರಬೇಕು. ಎರಡನೆಯದಾಗಿ ಆ ಹಣವನ್ನು ಸಾರ್ವಜನಿಕ ಹಿತಾಸಕ್ತಿಗಾಗಿ ಉಪಯೋಗಿಸಬೇಕು. ಹಾಗೂ ಮೂರನೆಯದು ಭ್ರಷ್ಟಾಚಾರದಲ್ಲಿ ಭಾಗಿಯಾದರೆಂದು ಸಾಬೀತಾದವರಿಗೆ ಮರಣ ದಂಡನೆ ಹಾಗೂ ಜೀವಾವಧಿ ಶಿಕ್ಷೆ ವಿಧಿಸಬೇಕೆಂದು.
ಬಾಬಾ ರಾಮದೇವ್ ಅವರ ಜೊತೆ ಈ ಸತ್ಯಾಗ್ರಹಕ್ಕೆ ದೇಶಾದ್ಯಂತ ಬೆಂಬಲ ವ್ಯಕ್ತವಾಗುತ್ತಿದೆ. ಅಣ್ಣ ಹಜಾರೆ ಅವರೇ ಜೂನ್ ಐದರಿಂದ ರಾಮದೇವ್ ಅವರನ್ನು ಜೊತೆಯಾಗುತ್ತಿದ್ದಾರೆ, ಅಂತೂ ಇಂತೂ ಭ್ರಷ್ಟಾಚಾರಕ್ಕೆ ಕೊನೆ ಹಾಡುವ ಸಮಯ ಬಂದಂತಾಗಿದೆ. ಕೈ ಪಾಳಯದವರು ರಾಮದೇವ್ ಅವರನ್ನು ಸತ್ಯಾಗ್ರಹ ಕೈಗೊಳ್ಳದಂತೆ ಮನವೊಲಿಸಲು ಹಿಂದೆ ಬಿದ್ದಿದ್ದಾರೆ. ಕಾದು ನೋಡೋಣ ಏನಾಗುವುದೋ....
ಒಂದು ಒಳ್ಳೆಯ ಕಾರಣಕ್ಕೆ ಮುಂದಾಗಿರುವ ಬಾಬಾ ರಾಮದೇವ್ ಅವರಿಗೆ ನನ್ನ ಅಭಿನಂದನೆಗಳು
ಚಿತ್ರ ಕೃಪೆ : ಅಂತರ್ಜಾಲ
Comments
ಉ: ಬಾಬಾ ರಾಮದೇವ್ ಉಪವಾಸ ಸತ್ಯಾಗ್ರಹ
In reply to ಉ: ಬಾಬಾ ರಾಮದೇವ್ ಉಪವಾಸ ಸತ್ಯಾಗ್ರಹ by ಆರ್ ಕೆ ದಿವಾಕರ
ಉ: ಬಾಬಾ ರಾಮದೇವ್ ಉಪವಾಸ ಸತ್ಯಾಗ್ರಹ
ಉ: ಬಾಬಾ ರಾಮದೇವ್ ಉಪವಾಸ ಸತ್ಯಾಗ್ರಹ
In reply to ಉ: ಬಾಬಾ ರಾಮದೇವ್ ಉಪವಾಸ ಸತ್ಯಾಗ್ರಹ by kavinagaraj
ಉ: ಬಾಬಾ ರಾಮದೇವ್ ಉಪವಾಸ ಸತ್ಯಾಗ್ರಹ
ಉ: ಬಾಬಾ ರಾಮದೇವ್ ಉಪವಾಸ ಸತ್ಯಾಗ್ರಹ
In reply to ಉ: ಬಾಬಾ ರಾಮದೇವ್ ಉಪವಾಸ ಸತ್ಯಾಗ್ರಹ by ಆರ್ ಕೆ ದಿವಾಕರ
ಉ: ಬಾಬಾ ರಾಮದೇವ್ ಉಪವಾಸ ಸತ್ಯಾಗ್ರಹ
ಉ: ಬಾಬಾ ರಾಮದೇವ್ ಉಪವಾಸ ಸತ್ಯಾಗ್ರಹ
In reply to ಉ: ಬಾಬಾ ರಾಮದೇವ್ ಉಪವಾಸ ಸತ್ಯಾಗ್ರಹ by prasca
ಉ: ಬಾಬಾ ರಾಮದೇವ್ ಉಪವಾಸ ಸತ್ಯಾಗ್ರಹ
ಉ: ಬಾಬಾ ರಾಮದೇವ್ ಉಪವಾಸ ಸತ್ಯಾಗ್ರಹ
In reply to ಉ: ಬಾಬಾ ರಾಮದೇವ್ ಉಪವಾಸ ಸತ್ಯಾಗ್ರಹ by kaushik
ಉ: ಬಾಬಾ ರಾಮದೇವ್ ಉಪವಾಸ ಸತ್ಯಾಗ್ರಹ
ಉ: ಬಾಬಾ ರಾಮದೇವ್ ಉಪವಾಸ ಸತ್ಯಾಗ್ರಹ
In reply to ಉ: ಬಾಬಾ ರಾಮದೇವ್ ಉಪವಾಸ ಸತ್ಯಾಗ್ರಹ by Nagendra Kumar K S
ಉ: ಬಾಬಾ ರಾಮದೇವ್ ಉಪವಾಸ ಸತ್ಯಾಗ್ರಹ
ಉ: ಬಾಬಾ ರಾಮದೇವ್ ಉಪವಾಸ ಸತ್ಯಾಗ್ರಹ
ಉ: ಬಾಬಾ ರಾಮದೇವ್ ಉಪವಾಸ ಸತ್ಯಾಗ್ರಹ