ಪಕ್ಷಿನೋಟ - ಮೇ ಮಾಸದಲ್ಲಿ ಸಂಪದ
ಮೇ ಮಾಸದಲ್ಲಿ ಲೇಖನಗಳು ಪ್ರಕಟವಾಗಿದ್ದು ಒಟ್ಟು ೩೫೨. ಎಂದಿನಂತೆ ಬ್ಲಾಗ್ ಬರಹ ಹಾಗು ಕವನಗಳದ್ದೆ ಮೇಲುಗೈ. ಈ ತಿಂಗಳ ಪ್ರತಿಕ್ರಿಯೆಗಳು ಎಂದಿಗಿಂತ ಚೆನ್ನಾಗಿದ್ದವು ಎಂದು ನನ್ನ ಅಭಿಮತ.
ಕೆಲವೊಮ್ಮೆ ಚಿತ್ರಗಳು , ಸ್ವರಚಿತ ಕವನಗಳು ತಮ್ಮ ವಿಭಾಗದಲ್ಲಿಯೆ ಬಂದರೆ ಸುಂದರವಾಗಿರುತ್ತೆ ಅನ್ನಿಸುತ್ತೆ. ಅಂದರೆ fallow the lane ಎಂಬಂತೆ, ಇದು ನನ್ನ ಸ್ವಂತ ಅಭಿಪ್ರಾಯ ಅಷ್ಟೆ. ಲೇಖನಗಳಿಗು ಬ್ಲಾಗ್ ಬರಹಗಳಿಗು ಬಹಳ ಸಂದರ್ಪದಲ್ಲಿ ಹೆಚ್ಚು ವೆತ್ಯಾಸವೇನು ಇರಲ್ಲ. ಆದರೆ ಕಥೆಗಳಿಗೆ ಬೇರೆಯೆ ಆದ ವಿಭಾಗವಿದ್ದಲ್ಲಿ ಚೆನ್ನಿತ್ತು.
ಕಳೆದ ತಿಂಗಳು ಬರೆದ ಪಕ್ಷಿನೋಟ ಸಂಪದರಿಗೆ ಇಷ್ಟವಾಯಿತು ಅನ್ನಿಸಿತು. ಆದರೆ ಇದನ್ನು ಪ್ರತಿ ತಿಂಗಳು ಒಬ್ಬರು ಬರೆದರೆ ಪ್ರತಿಯೊಬ್ಬರಲ್ಲಿಯು ಇರುವ ವಿಮರ್ಷಕ ಹರಿತಗೊಳ್ಳುತ್ತಾನೆ ಎಂದು ನನ್ನ ಅನಿಸಿಕೆಯಾಗಿತ್ತು. ಆದರೆ ಏಕೊ ಯಾರು ಇದನ್ನು ಮುಂದುವರೆಸಲು ಕೈ ಎತ್ತಲಿಲ್ಲ. ಜಯಂತ್ ಇದೊಂದು ತಿಂಗಳು ನೀವೆ ಬರೆಯಿರಿ ನಂತರ ಮುಂದಿನ ತಿಂಗಳು ನಾನು ಬರೆಯುತ್ತೇನೆ ಅಂದರು ಹೀಗಾಗಿ ಮತ್ತೆ ನಾನೆ ಬರೆಯುತ್ತಿದ್ದೇನೆ.
ಲೇಖನ ವಿಭಾಗ :
ನಂದೀಶರ ಮಾತು ನಿಜ 'ಇಬ್ಬರ ತೀರ ಹತ್ತಿರದ ಸಂಬಂಧವೆಂದರೆ ಮುಗುಳ್ನಗೆ'ಯೆ ಸರಿ ಹಾಗು ತಿಂಗಳ ಮೊದಲ ಲೇಖನವೆ ಇದು. ನಾವಡರ 'ಕಾಲದ ಕನ್ನಡಿ-.ಹೊಳೆಯಲ್ಲಿ ಇಳಿಯುವವರೆಗೆ ...' ಪ್ರಸ್ತುತ ಭಾರತದ ಭ್ರಷ್ಟಾಚಾರದ ವಿವಿದ ಮುಖಗಳನ್ನು ಹಾಗೆಯೆ ಜನತೆಯ ಆಶೋತ್ತರಗಳನ್ನು ಪ್ರತಿಬಿಂಬಿಸುವಲ್ಲಿ ಸಫಲವಾಯಿತು.
ಸುರೇಶನಾಡಿಗರ 'ಕಾಡಲ್ಲ ನಾಡಲ್ಲಿ ಹುಲಿಬಂದಿತ್ತು' ಕೇವಲ ಮೂರು ಚಿತ್ರಗಳು ನೂರು ಲೇಖನವನ್ನು ಬರೆದಂತ ವಿಷಯವನ್ನು ಮನಸಿಗೆ ತಲುಪಿಸಿತು.ಹಾಗೆ ಜಯಂತರೆ ನೀವು 'ಅಕ್ಷಯ ತೃತೀಯಕ್ಕೆ' ಚಿನ್ನಕೊಳ್ಳಲು ಸಂಪದಿಗರ ಯಾವ ತಕರಾರು ಇಲ್ಲ ಅನ್ನಿಸುತ್ತೆ!. ಸತ್ಯಚರಣರ 'ಬ್ಯಾಂಕಿನ ಹೆಸರಲ್ಲಿ...' ಲೇಖನವು ಸಂಪದಿಗರನ್ನು ಎಚ್ಚರಿಸುವ ಹಾಗು ಸಮಯೋಚಿತ ಲೇಖನ. ಆದರೆ ಇದೆ ಇದೆ ಚಿತ್ರಗಳು ಚಿತ್ರವಿಭಾಗದಲ್ಲು ಬೇಕಿರಲಿಲ್ಲ ಅನ್ನಿಸುತ್ತೆ.
ಗುರುರಾಜರ 'ಗಿಫ್ಟ್' ಕಥೆ ಕುತೂಹಲಕರ ಅಂತ್ಯದೊಂದಿಗೆ ಸೊಗಸಾಗಿದೆ. ಡಾ||ಲೀಲಾಆಪ್ಪಾಜಿಯವರು ತಮ್ಮ ಪದಾರ್ಪಣೆಯೊಂದಿಗೆ 'ಕಳ್ಳಾಟ' ಎಂಬ ಕವನ ಬರೆಯುತ್ತ ತಮ್ಮ ಲೇಖನಿಯ ಕ್ಯಾಪ್ ತೆಗೆದಿದ್ದಾರೆ, ಈಗೆಲ್ಲ ಅದನ್ನು ಕೀಬೋರ್ದ್ ತೆರೆದಿದ್ದಾರೆ ಎನ್ನಬೇಕೆನೊ?. ಮೂಂಸೊರೆಯವರು ಪ್ರೊಡಕ್ಷನ್ ನಂ.೧ ರ ಶೂಟಿಂಗ್ ನ ಕಂತುಗಳನು ಮುಂದುವರೆಸಿದ್ದಾರೆ.
ಬೆಳ್ಳಾಲ ಗೋಪಿನಾಥರು ಸುಂದರವಾಗಿ ನಿರೂಪಿಸಿರುವ , ಹೆಚ್ ಎಸ್ ವಿ ರವರ ಪಾಠದ ವಡ್ಡಾರಾದನೆಯ ವಿವರಣೆ, ಅದರಲ್ಲಿ ಬರುವ ಕಥೆಗಳ ವಿವರ, ಜೊತೆಯಲ್ಲಿ ಅಲ್ಲಿರುವ ಸುಂದರ ವರ್ಣಚಿತ್ರಗಳು ಎಲ್ಲವೂ ಸೇರಿ ಲೇಖನ ಆಕರ್ಷಣೀಯವಾಗಿದೆ.
ಅದೆ ರೀತಿ ಈ ಬಾರಿ ಮತ್ತೊಂದು ಆಕರ್ಷಣೆ ನಾಗರಾಜರ 'ಪಂ ಸುದಾಕರರವರ ಚತುರ್ವೇದಿಯವರ ವಿಚಾರದಾರೆ'ಯ ಲೇಖನಗಳು. ಅವರ ಪರಿಚಯ ಹಾಗು ಬದುಕೋಣ ಸಾಯದಿರೋಣ ಎಂದು ಪ್ರಾರಂಬವಾಗುವ ವಿಚಾರಪೂರ್ಣ ಲೇಖನ, ಜೀವನ ದರ್ಶನ ಖಂಡಿತ ಈ ತಿಂಗಳ ಸಂಪದದ ತೂಕವನ್ನು ಹೆಚ್ಚಿಸಿದೆ. ಅಲ್ಲದೆ 'ಮೇಲಕ್ಕೇರಿದ ಮೈಲಾರ ಶರ್ಮ ' ಉತ್ತಮವಾಗಿ ಚರ್ಚೆಯಾಗಬಹುದಾಗಿದ್ದ ಬರಹ
ಜಯಂತರು ತಮ್ಮ ತಂದೆಯ ನೆನಪಿನ ಸುರಳಿಯೊಂದಿಗೆ ನಮ್ಮನ್ನು ಕಾಲದ ಸುರಳಿಯಲ್ಲಿ ಹಿಂದಕ್ಕೆ ಕರೆದೋಯ್ದಿದ್ದಾರೆ. 'ಪಂಜರದ ಹಕ್ಕಿ ಮತ್ತು ನೀನು' ಸಂತೋಷರ ಅಪರೂಪವಾದರು ಉತ್ತಮ ಕಥೆ. ಸ್ವಾತಂತ್ರವೆ ತನ್ನತನ ಎಂದು ಭಾವಿಸುವ ನಾಯಕಿ ಅವಳ ಆಕರ್ಷಣೆಯಲ್ಲಿ ನಾಯಕ ಒಂದು ಉತ್ತಮ ಅಭಿವ್ಯಕ್ತಿ.
ತಿಂಗಳ ಕಡೆಯ ಲೇಖನವಾಗಿ ಪ್ರಕಟವಾದ 'ಅವಳು ಕನಸಾಗುತ್ತಿದ್ದಾಳೆ' ವಸಂತರ ಕವನ, ಸುಂದರ ಚಿತ್ರದೊಂದಿಗೆ ಪ್ರಕಟವಾದ , ಜನಸಾಮಾನ್ಯರ ಕನಸುಗಳು ಹಾಗು ಪ್ರಸ್ತುತ ಸಮಾಜದ ಪರಿಸ್ಥಿಥಿಯನ್ನು ಒಟ್ಟಿಗೆ ಬಿಂಬಿಸುವ ಕವನ ಚೆನ್ನಾಗಿದೆ.
ಮತ್ತೆ ಮರೆತೆ... ಶ್ರೀನಾಥರು 'ಸಾಲ ಪ್ರಸಂಗವು ಗಾನಮಾಲೆಯು' ಹಲವು ಭಕ್ತಿಗೀತೆಗಳ ಮಾಲೆಯನ್ನು ಸಹಜ ಹಾಸ್ಯದೊಂದಿಗೆ ಬೆರೆಸಿ ಎಲ್ಲ ಸಂಪದಿಗರಿಗು ರಂಜಿಸಿದರು, ಮತ್ತು ಎಲ್ಲರು ಉತ್ಸಾಹದಿಂದ ಪ್ರತಿಕ್ರಿಯೆ ನೀಡಿದರು.
ಬ್ಲಾಗ್ ಬರಹಗಳು:
'ಚಿನ್ನ ನನಗೇಕೆ ಚಿನ್ನ...' ಎಂದು ಸರಸ್ವತಿಯವರ ಬ್ಲಾಗ್ ಬರಹದೊಂದಿಗೆ ಪ್ರಾರಂಬವಾದ ವಿಭಾಗ ಮಾಸ ಪೂರ ಬರಹಗಳೊಂದಿಗೆ ತುಂಬಿ ಹರಿಯಿತು. ಮೊದಲಲ್ಲಿ ಅನಿರೀಕ್ಷಿತವಾಗಿ ಎಂಬಂತೆ ಒಸಾಮ ಬಿನ್ ಲಾಡನ್ ದುತ್ತನೆ ಹಲವು ಪುಟಗಳನ್ನು ಆಕ್ರಮಿಸಿದ. ಹಂಸಾನಂದಿಯವರು ಬರಹಗಳು ಸ್ವಗತ ಎಂಬಂತೆ ಓದಿಸಿಕೊಂಡಿತು, ಅವರ ಕಳ್ಳಹೊಳೆ ಹೇಮಾವತಿ ಬರಹ ಹಲವರಿಗೆ ಅವರ ಬಾಲ್ಯ ನೆನಪಾಗಿರಲು ಸಾಕು.
ಭಾವಾನುವಾದದ ಗುಂಗಿನಲ್ಲಿಯೆ ಆತ್ರಾಡಿ ಸುರೇಶ್ ರವರು ಹಲವು ಹಿಂದಿ ಸಿನಿಮಾಗೀತೆಗಳನ್ನು ಕನ್ನಡಕ್ಕೆ ಅನುವಾದಿಸಿದರು,'ಹಳೆಯ' ಹಿಂದಿ ಹಾಡುಗಳ ಗುನುಗುಗಳು 'ಹಳಬರಿಗೆ' ಅತ್ಯಂತ ಖುಷಿ ಕೊಟ್ಟಿತ್ತು, ನನಗೆ ಕೊಟ್ಟಂತೆ!. ಪ್ರಾರಂಬದಲ್ಲಿ ಅವರ ಬರಹ (ಕವನ) 'ಸೂರ್ಯ ಚಂದ್ರರ...' ಪ್ರಕೃತಿ ನಮಗೆ ಕೊಡಬಹುದಾದ ಉತ್ತಮ ನೀತಿ ಸಂದೇಶಗಳನ್ನು ತೋರಿಸಿತು.
ಕಾಮತರು ಎಂದಿನ ತಮ್ಮ ಶೈಲಿಯಿಂದ ಹೊರಬಂದು ಇದ್ದಕಿದ್ದಂತೆ 'ದಿಲ್ಲಿಯಲ್ಲಿ ಒಂದು ಮಿಲಿಗ್ರಾಂ..." ಎಂದು ಬರೆದು ನನ್ನನ್ನು ಸೇರಿ ಹಲವರನ್ನು ಗಲಿಬಿಲಿಗೊಳಿಸಿದರು, ನಂತರ ಹೀಗೆ ಸುಮ್ಮನೆ ಬದಲಾವಣೆಗೆ ಎನ್ನುತ್ತ ಖುಷಿಪಟ್ಟರು.
ಅಬ್ದುಲ್ಲರ 'ಅಮೇರಿಕೆಯ ೯/೧೧ ಮತ್ತು ಭಾರತದ ೨೬/೧೧' ಪ್ರಪಂಚದ ನಿಜ ರಾಜಕೀಯ ಮುಖವನ್ನು ಪರಿಚಯಿಸುವ ಲೇಖನ. ಬಾಲಚಂದ್ರರ 'ರಸ್ತೆಯೊಂದರ ರೊಟೀನು' ಒಂದು ವಿಶಿಷ್ಟ ಪ್ರಯತ್ನ. ನಾವಡರೇಕೊ ಈ ಬಾರಿ ಯೋಚಿಸಲು ಹೆಚ್ಚು ಅಂತರ್ಮುಖಿ.
ವಾಣಿಶೆಟ್ಟಿಯವರು 'ಹಾವುಗಳ ಪುರಾಣ' ಹಾಗು 'ಎಲ್ಲಿಹೋದವೊ ಆ ದಿನಗಳು' ಎಂಬ ಮೆಲಕು, ಕಡೆಗು ಅವರು ಸಮುದ್ರತೀರದ ಹೆಜ್ಜೆಗಳ 'hangover' ನಿಂದ ಹೊರಬಂದಿರುವುದನ್ನು ತೋರಿಸಿತು, ಅವರು ತಮ್ಮ ಕವಿತೆಗಳ ರಚನೆಯನ್ನು ಮುಂದುವರೆಸಿದ್ದರೆ ಸಂಪದಿಗರಿಗೆ ಒಂದಿಷ್ಟು ಲಾಭ.
ಪ್ರಸನ್ನರು ಕವನ ರಚನೆಯಷ್ಟೆ ಅಲ್ಲದೆ ಪೇಂಟಿಂಗ್ ನಲ್ಲು ಸಿದ್ದಹಸ್ತರು, ಅವರ 'ಹೀಗಿರಲಿ ಬಾಳ ಪ್ರತಿಬಿಂಬ'ದ ಕವನ ಚಿತ್ರಗಳು ಎಲ್ಲರ ಮೆಚ್ಚುಗೆ ಗಳಿಸಿತು. ಅಲ್ಲದೆ ಅವರು ತಮ್ಮ ಪತ್ನಿಯ ಜೊತೆಗೂಡಿ 'ಮಳೆಯಲ್ಲಿ ಅವಳು ಮತ್ತು ಅವನು' ಎಂಬ ಒದ್ದೆಯಾದ ಕವನ ರಚಿಸಿ, 'ಜೋಡಿಕವಿಗಳ' ಏಕಕವನ ಪ್ರಯೋಗ ನಡೆಸಿ ಯಶಸ್ವಿಯಾದರು.
ನಾಗರಾಜರು ಎಂದಿನಂತೆ ಮೂಡ ಉವಾಚ ' ಮೂಲಕ ಹೊಸ ದರ್ಶನಗಳ ಪರಿಚಯಮಾಡಿಸಿದರು. ಇವರ ಲೇಖನದ (ಮೇಲಕ್ಕೇರಿದ ಮೈಲಾರ ಶರ್ಮ) ಪ್ರಭಾವದಿಂದ ಎಂಬಂತೆ ಬಂದ ಗಣೇಶರ 'ದೇಹದಾನ' ಬ್ಲಾಗ್ ಮನುಷ್ಯನ ಆಲೋಚನೆಯ ಹೊಸಮಜಲನ್ನು ತೋರಿಸಿದಂತೆ, ಈ ವಿಷಯ ಹೆಚ್ಚೆಚ್ಚು ಚರ್ಚೆಗೆ ಒಳಪಟ್ಟಿದ್ದರೆ ಚೆನ್ನಾಗಿತ್ತು ಅನ್ನಿಸಿತು. ಆದರೆ ಏಕೊ ಸಂಪದಿಗರು ಉತ್ಸಾಹಿತರಾಗಿರಲಿಲ್ಲ.
ಕವನ ವಿಭಾಗ:
ಮೊದಲ ದಿನವೆ ಎರಡು ಉತ್ತಮ ಕವನ ಪ್ರಕಟಗೊಂಡವು, ನಂದೀಶರು ನವಚೈತನ್ಯ ಮೂಡಿಸಿದರೆ, ಹರಿಹರಪುರ ಶ್ರೀದರ ಅಪರೂಪಕ್ಕಾದರು ಭಕ್ತಿವೇದಾಂತ ತುಂಬಿದ 'ಇಷ್ಟು ದಿನ ನೆಚ್ಚುನಂಬಿ' ಎಂಬ ರಚನೆ ಪ್ರಕಟಿಸಿದರು, ಅದು ಕೆಲವು ಸಂಪದಿಗರಿಗೆ ಹಾಡಲು ಸ್ಪೂರ್ತಿ ಕೊಡುವಂತೆ.
ಬಾಪೂಜಿಯವರ ಸಾಲು ಸಾಲು ಕವನಗಳಲ್ಲಿ 'ನೀನಿರದೆ' ಎಂಬ ಕವನ ಇಷ್ಟವಾಯಿತು, ನನಗಷೇ ಅಲ್ಲ ಎಲ್ಲ ಸಂಪದಿಗರಿಗು ಅಂದು ಕೊಳ್ತೀನಿ. ಬಾಲಚಂದ್ರ ಸ್ನಾನದ ಬಗ್ಗೆ ಹೇಳುತ್ತಲೆ, ದೇಹ ಮನಸ್ಸು ತೊಳೆದುಕೊಳ್ಳುವ ಬಗ್ಗೆ ತಿಳಿಸಿದರು.
siddhkirthi ಯವರು ಈ ಬಾರಿ ಸಂಖ್ಯೆಯಲ್ಲಿ ಕಡಿಮೆ ಅನ್ನಿಸಿದರು, ಉತ್ತಮ ಕವನಗಳನ್ನಿ ನೀಡಿದ್ದಾರೆ, 'ಕವಿಮನ' ಅದಕ್ಕೆ ಸಾಕ್ಷಿ, ನಾನು ಓದಿದ ಅವರ ಕವಿತೆಗಳಲ್ಲಿ ತುಂಬಾ ಚೆನ್ನಾಗಿದೆ ಅಂತ ಮನಸಿಗೆ ಖುಷಿ ಕೊಟ್ಟ ಕವನ ಕವಿಮನ. ಸರಸ್ವತಿಯವರು ಮಾತೆಯ ಪ್ರೀತಿಯನ್ನು ಸಾರುವ 'ಮಾತೆಗೊಂದು ನಮನ' ಬರೆದರು.
ಗಣೇಶಕುಮಾರರ 'ವಿಪರ್ಯಾಸದಲ್ಲಿ' ಒಂದು ಮಳೆಗೆ ಕಲ್ಲು ಸಂದಿಗಳಲ್ಲೆಲ್ಲ ಹಸಿರು ಚಿಗುರುತ್ತದೆ ಆದರೆ ಎಷ್ಟು ಪ್ರೀತಿ ಸುರಿಸಿದರು ಮನುಷ್ಯನ ಮನ ಮೃದುವಾಗಲ್ಲೊಲ್ಲದು, ಎಂದು ಮನುಷ್ಯನ ಮನಸಿನ 'ದುರಭಿಮಾನದ' ಅಹಂಕಾರದ ಚಿತ್ರಣವನ್ನು ಸಫಲರಾಗಿ ಮೂಡಿಸಿದ್ದಾರೆ ಅದು ಕೆಲವೆ ಸಾಲುಗಳಲ್ಲಿ.
ರಘುಮುಳಿಯರು ತಮ್ಮ ಮೌನವನ್ನು ಮುರಿದು ಮಾತು-ಮೌನ ವೆಂಬ ಭಾಮಿನಿ ಪದ್ಯವನೊಸೆದು ಪುನಃ ತಮ್ಮ ಮೌನವನ್ನು ವ್ರತವನ್ನು ಮುಂದುವರೆಸಿದರು. ಮದ್ವೇಶರು 'ವಾರ್ಷಿಕೋತ್ಸ್ವವ' ಮೂಲಕ ತಮ್ಮ ಮದುವೆಯ ಸಂಭ್ರಮವನ್ನಾಚರಿಸಿದರು.
ನೂರಕ್ಕು ಹೆಚ್ಚು ಪ್ರಕಟವಾದ ಕವನಗಳಲ್ಲಿ ಕೆಲವನ್ನು ಮಾತ್ರ ಆರಿಸಿಕೊಂಡಿರುವೆ. ಬಾಪೂಜಿಯವರು ಈ ಬಾರಿ ಹೆಚ್ಚು ಹೆಚ್ಚು ಕವನಗಳನ್ನ ರಚಿಸಿ ಪ್ರಕಟಿಸಿದ್ದಾರೆ. ಹಾಗೆಯೆ ದಯಾನಂದರು, ನಾಗೇಂದ್ರಕುಮಾರರು, ಚಾರ್ವಾಕರು, ಡಾ|ಲೀಲಾಪ್ಪಾಜಿಯವರು ಬಾಗ್ವತರು ಮೋಹನರಾಜ ಮತ್ತು.. ಮತ್ತು... ಎಲ್ಲರ ಕವನಗಳನ್ನೋದುವಾಗ ಒಂದು ಲೇಖನದಲ್ಲಿ ಎಲ್ಲವನ್ನು ಅಳವಡಿಸಿಕೊಳ್ಳುವುದು ಕಷ್ಟವೆನಿಸಿ ನಿಲ್ಲಿಸಬೇಕಾಯಿತು. ಕವನಗಳ ವಿಭಾಗವನ್ನು ನೋಡುವಾಗ 'ಮೇ ಮಾಸ' ಸಂಪದದಲ್ಲಿ 'ಫಲಬರಿತ' ವೆಂದೆ ಅನ್ನಿಸುತ್ತದೆಯಲ್ಲವೆ?.
ಚಿತ್ರವಿಭಾಗ:
ಸುಮಾನಾಡಿಗರ ಮೈಸೂರಿನ ಚಾಮುಂಡಿ ತಪ್ಪಲಿನ ಆಕರ್ಷಕ ಚಿತ್ರದೊಂದಿಗೆ ಆರಂಬವಾಯಿತು. ಪ್ರಕೃತಿಪ್ರಿಯ ನಂದೀಶರು ಹಲವು ಹೂವಿನ ಪಕ್ಷಿಗಳ ಪ್ರಕೃತಿಯ ವರ್ಣಚಿತ್ರಗಳನ್ನು ನೀಡಿ ಸಂಪದಿಗರ ಕಣ್ಣು ಹೃದಯಗಳನ್ನು ತಣಿಸಿದರು. ತಿಂಗಳ ಕಡೆಯಲ್ಲಿ ಅವರು ಪ್ರಕಟಿಸಿದ 'ಸರ್ಪಮಿಲನ' ಅತ್ಯಂತ ಅಪರೂಪದ ಚಿತ್ರ. ಹಾಗೆಯೆ ಶಶಿದರ, ದೇವರು , ವಸಂತ್ ಪ್ರಕೃತಿಯ ಹಲವು ಮುಖಗಳನ್ನು ಅನಾವರಣಗೊಳಿಸಿದರು. ಸಿದ್ದರಾಮರ ಅಮ್ಮ ಚಿತ್ರದಲ್ಲಿ ಪ್ರಕೃತಿಯ ಸಹಜತೆ ಇದ್ದರೆ, ಜಯಂತರ 'ಸಚಿವರ ಹಂದಿ..' ಸುದ್ದಿವಾಹಿನಿಯ ತಪ್ಪಿನ ಅಪರೂಪದ ಛಾಯಚಿತ್ರ ಒದಗಿಸಿ ಎಲ್ಲರ ಗಮನ ಸೆಳೆದರು. ಜಯಂತರ 'ಸಚಿವರ..' ಹೆಚ್ಚೆಚ್ಚು ಪಾಯಿಂಟ್ ಗಳಿಸಿದರೆ ನಂದೀಶರ 'ಯಾವುದೀ ಚಕ್ಕುಲಿ' ಹೆಚ್ಚು ಪ್ರತಿಕ್ರಿಯೆ ಪಡೆಯುವಲ್ಲಿ ಸಫಲವಾಯಿತು.
ಪ್ರಿಯ ಸಂಪದಿಗರೆ ನಾನು ಈ ಲೇಖನ ಬರೆಯಲು ಸಂಪದದ ಬರಹಗಳನ್ನು ಆರಿಸಿಕೊಳ್ಳಲು ಯಾವ ಮಾನದಂಡವನ್ನು ಅನುಸರಿಸಿಲ್ಲ!. ಮೊದಲಿಂದ ಕಡೆಯವರೆಗು ನೋಡುತ್ತ ಮನಸಿನ ಲಹರಿಯಂತೆ (random selection) ಆರಿಸಿಕೊಂಡಿದ್ದೇನೆ. ಕೆ(ಹ)ಲವು ತಪ್ಪುಗಳು ನುಸುಳಿರಬಹುದು ಮಾನವ ಸಹಜ ಎನ್ನುತ್ತ ಕ್ಷಮಿಸಿಬಿಡಿ. ಹಾಗೆಯೆ ಇದನ್ನು ಮುಂದೆ ಯಾವ ರೀತಿ ಉತ್ತಮ ಪಡಿಸಬಹುದು ಎಂದು ಸಲಹೆಗಳನ್ನು ನೀಡಿ
ಇಂತಿ ವಿಶ್ವಾಸಗಳೊಡನೆ
ನಿಮ್ಮೆಲ್ಲರ ಆತ್ಮೀಯ
-ಪಾರ್ಥಸಾರಥಿ
Comments
ಉ: ಪಕ್ಷಿನೋಟ - ಮೇ ಮಾಸದಲ್ಲಿ ಸಂಪದ
In reply to ಉ: ಪಕ್ಷಿನೋಟ - ಮೇ ಮಾಸದಲ್ಲಿ ಸಂಪದ by Jayanth Ramachar
ಉ: ಪಕ್ಷಿನೋಟ - ಮೇ ಮಾಸದಲ್ಲಿ ಸಂಪದ
ಉ: ಪಕ್ಷಿನೋಟ - ಮೇ ಮಾಸದಲ್ಲಿ ಸಂಪದ
In reply to ಉ: ಪಕ್ಷಿನೋಟ - ಮೇ ಮಾಸದಲ್ಲಿ ಸಂಪದ by Chikku123
ಉ: ಪಕ್ಷಿನೋಟ - ಮೇ ಮಾಸದಲ್ಲಿ ಸಂಪದ
ಉ: ಪಕ್ಷಿನೋಟ - ಮೇ ಮಾಸದಲ್ಲಿ ಸಂಪದ
In reply to ಉ: ಪಕ್ಷಿನೋಟ - ಮೇ ಮಾಸದಲ್ಲಿ ಸಂಪದ by MADVESH K.S
ಉ: ಪಕ್ಷಿನೋಟ - ಮೇ ಮಾಸದಲ್ಲಿ ಸಂಪದ
In reply to ಉ: ಪಕ್ಷಿನೋಟ - ಮೇ ಮಾಸದಲ್ಲಿ ಸಂಪದ by MADVESH K.S
ಉ: ಪಕ್ಷಿನೋಟ - ಮೇ ಮಾಸದಲ್ಲಿ ಸಂಪದ
In reply to ಉ: ಪಕ್ಷಿನೋಟ - ಮೇ ಮಾಸದಲ್ಲಿ ಸಂಪದ by partha1059
ಉ: ಪಕ್ಷಿನೋಟ - ಮೇ ಮಾಸದಲ್ಲಿ ಸಂಪದ
ಉ: ಪಕ್ಷಿನೋಟ - ಮೇ ಮಾಸದಲ್ಲಿ ಸಂಪದ
In reply to ಉ: ಪಕ್ಷಿನೋಟ - ಮೇ ಮಾಸದಲ್ಲಿ ಸಂಪದ by ನಂದೀಶ್ ಬಂಕೇನಹಳ್ಳಿ
ಉ: ಪಕ್ಷಿನೋಟ - ಮೇ ಮಾಸದಲ್ಲಿ ಸಂಪದ
ಉ: ಪಕ್ಷಿನೋಟ - ಮೇ ಮಾಸದಲ್ಲಿ ಸಂಪದ
In reply to ಉ: ಪಕ್ಷಿನೋಟ - ಮೇ ಮಾಸದಲ್ಲಿ ಸಂಪದ by Nagendra Kumar K S
ಉ: ಪಕ್ಷಿನೋಟ - ಮೇ ಮಾಸದಲ್ಲಿ ಸಂಪದ
ಉ: ಪಕ್ಷಿನೋಟ - ಮೇ ಮಾಸದಲ್ಲಿ ಸಂಪದ
In reply to ಉ: ಪಕ್ಷಿನೋಟ - ಮೇ ಮಾಸದಲ್ಲಿ ಸಂಪದ by ಗಣೇಶ
ಉ: ಪಕ್ಷಿನೋಟ - ಮೇ ಮಾಸದಲ್ಲಿ ಸಂಪದ
ಉ: ಪಕ್ಷಿನೋಟ - ಮೇ ಮಾಸದಲ್ಲಿ ಸಂಪದ
In reply to ಉ: ಪಕ್ಷಿನೋಟ - ಮೇ ಮಾಸದಲ್ಲಿ ಸಂಪದ by bhalle
ಉ: ಪಕ್ಷಿನೋಟ - ಮೇ ಮಾಸದಲ್ಲಿ ಸಂಪದ
In reply to ಉ: ಪಕ್ಷಿನೋಟ - ಮೇ ಮಾಸದಲ್ಲಿ ಸಂಪದ by partha1059
ಉ: ಪಕ್ಷಿನೋಟ - ಮೇ ಮಾಸದಲ್ಲಿ ಸಂಪದ
ಉ: ಪಕ್ಷಿನೋಟ - ಮೇ ಮಾಸದಲ್ಲಿ ಸಂಪದ
In reply to ಉ: ಪಕ್ಷಿನೋಟ - ಮೇ ಮಾಸದಲ್ಲಿ ಸಂಪದ by kavinagaraj
ಉ: ಪಕ್ಷಿನೋಟ - ಮೇ ಮಾಸದಲ್ಲಿ ಸಂಪದ
ಉ: ಪಕ್ಷಿನೋಟ - ಮೇ ಮಾಸದಲ್ಲಿ ಸಂಪದ
In reply to ಉ: ಪಕ್ಷಿನೋಟ - ಮೇ ಮಾಸದಲ್ಲಿ ಸಂಪದ by ksraghavendranavada
ಉ: ಪಕ್ಷಿನೋಟ - ಮೇ ಮಾಸದಲ್ಲಿ ಸಂಪದ
ಉ: ಪಕ್ಷಿನೋಟ - ಮೇ ಮಾಸದಲ್ಲಿ ಸಂಪದ
In reply to ಉ: ಪಕ್ಷಿನೋಟ - ಮೇ ಮಾಸದಲ್ಲಿ ಸಂಪದ by ಭಾಗ್ವತ
ಉ: ಪಕ್ಷಿನೋಟ - ಮೇ ಮಾಸದಲ್ಲಿ ಸಂಪದ
In reply to ಉ: ಪಕ್ಷಿನೋಟ - ಮೇ ಮಾಸದಲ್ಲಿ ಸಂಪದ by manju787
ಉ: ಪಕ್ಷಿನೋಟ - ಮೇ ಮಾಸದಲ್ಲಿ ಸಂಪದ
In reply to ಉ: ಪಕ್ಷಿನೋಟ - ಮೇ ಮಾಸದಲ್ಲಿ ಸಂಪದ by ಭಾಗ್ವತ
ಉ: ಪಕ್ಷಿನೋಟ - ಮೇ ಮಾಸದಲ್ಲಿ ಸಂಪದ