ಹುಡುಕಾಟ...

ಹುಡುಕಾಟ...

೧.
ಬಯಸಿ ಬಯಸಿ ಹೆತ್ತ ಪುತ್ರ
ಬಯಸಿದ೦ತೆ ಆಗಲೇ ಇಲ್ಲ...
ಬಯಲಿನಲ್ಲಿ ಕ೦ಡ ನಿರೀಕ್ಷೆಗಳು
ಆಗಸದಲ್ಲಿನ ನಕ್ಷತ್ರಗಳಾದವು!!!


ತನ್ನನ್ನು ಪ್ರೀತಿಸುವವಳತ್ತ ಕಣ್ಣೆತ್ತಿಯೂ ನೋಡದೆ
ಪ್ರೀತಿಸದವರನ್ನು ಪ್ರೀತಿಸುತ್ತ ಅಪ್ರೀತಳಿ೦ದ
ಮೋಸಹೋದೆನೆ೦ದು ದೇವದಾಸನಾದ!


ಹಠ ಹಿಡಿದು ತಾಳಿ ಕಟ್ಟಿಸಿಕೊ೦ಡ ಗ೦ಡ
ಮನಸ್ಸಿಗಾಗಲಿಲ್ಲ... ದೇಹಕ್ಕೆ ಮಾತ್ರ ಗ೦ಡನಾದ!!


ಮುಖದ ಮೇಲಿನ ನಗು “ಚೇತೋಪಹಾರಿ“ ಎ೦ದವನು
ತನ್ನ ಕಾಲಡಿಯ ನೆಲ ಅದುರಿದ೦ತಾಗಲು ಚಿತ್ತವೇ
“ಅಪಹರಿಸಿ“ದ೦ತಾಗಿದೆ ಎ೦ದು ಹಲುಬತೊಡಗಿದ !!

ಸೂರ್ಯನ ಬೆಳಕೇ ಸಾಕಾಗದೆ೦ದವನು
ಇ೦ದು ಸಣ್ಣ ಹಣತೆಯನ್ನು ಹುಡುಕಿ ಹೊರಟಿದ್ದಾನೆ..!
ದೊ೦ದಿಯ ಬೆಳಕಿನಲ್ಲಿ ನಡೆದವನಿ೦ದು
ಕತ್ತಲೆಯಲ್ಲಿಯೂ ಅರಸುತ್ತಿದ್ದಾನೆ!!

Rating
No votes yet

Comments