ವ್ಯತ್ಯಾಸ

ವ್ಯತ್ಯಾಸ

ಬಂದರದು ಸುಮ್ಮನೆ
ನೂರ್ಕೋಟಿ ರೂಪಾಯಿ
ಮನವದುವೆ ಮರ್ಕಟ
ಹಾಡುವುದು ಗಾನ
ತಾನತಂದಾನ..
ಕೇಳದದು ಒಮ್ಮೆಯೂ
ಇಂಬಿಟ್ಟ ದೈವವನು
ಹೇಗಿದು ಸರಿಯೆಂದು?
ಏಕಿದು ತನಗೆಂದು?


ಬಂದರದು ಒಮ್ಮೆಗೆ
ಅಕಟಕಟ ಸಂಕಟ
ಮನವದುವೆ ಮರುಗವುದು
ಮುಮ್ಮಲ, ಕುಣಿವುದದು
ತಕತಕ....
ಕೇಳ್ವುದದು ಒಡನೆಯೆ
ಇಂಬಿಟ್ಟ ದೈವವನು
ಹೇಗಿದು ಸರಿಯೆಂದು?
ಏಕಿದು ತನಗೆಂದು?

Rating
No votes yet

Comments