ತೇವವಾದವು ಈ ಕಣ್ಣಾಲಿಗಳು

ತೇವವಾದವು ಈ ಕಣ್ಣಾಲಿಗಳು

ಗೆಳತಿ ನಾನಿಂದು ನಡೆಯುತ್ತಿರುವೆ ಒಂಟಿಯಾಗಿ

ಅದೇ ಕಡಲಂಚಿನಲಿ ಹುಣ್ಣಿಮೆಯ ಬೆಳದಿಂಗಳಿನಲ್ಲಿ

ಮರುಕಳಿಸುತಿವೆ ಬೇಡವೆಂದರೂ ಆ ನೆನಪುಗಳು

ನಾವಿಬ್ಬರೂ ಕಡಲಂಚಿನಲಿ ನಡೆದ ನೆನಪುಗಳು

 

ಕೈಯಲ್ಲಿ ಕೈ ಹಿಡಿದು ನಡೆಯುತಿರಲು ಆ ಸಂಜೆಯಲಿ

ಕಡಲ ನೀರು ಅಲೆ ಅಲೆಯಾಗಿ ಬಂದು ಪಾದವ ಚುಂಬಿಸಲು

ಆ ತಣ್ಣನೆಯ ವಾತಾವರಣದಿ ನಿನ್ನ ಬೆಚ್ಚನೆಯ ಸ್ಪರ್ಶ

ಎಂದೂ ಮರೆಯಲಾರೆನು ಆ ಮಧುರ ಸಂಜೆಯ...

 

ಮರಳಿನ ಗೂಡನ್ನು ಕಟ್ಟುತ್ತಾ ಕಟ್ಟಿದೆವು ಕನಸಿನ ಗೂಡನು

ಅಲೆಯು ಬಂದು ಮರಳ ಗೂಡನು ಕಚ್ಚಿಕೊಂಡು ಹೋದ ಹಾಗೆ

ವಿಧಿಯು ಕೊಚ್ಚಿಕೊಂಡು ಹೋಯಿತು ಕನಸಿನ ಗೂಡನು

ನೀ ಹೊರಟು ಹೋದೆ ಎಂದೂ ಮರಳಿ ಬಾರದ ಲೋಕಕೆ

 


ಗೆಳತಿ ನಾನಿಂದು ನಡೆಯುತ್ತಿರುವೆ ಒಂಟಿಯಾಗಿ

ಅದೇ ಕಡಲಂಚಿನಲಿ ಹುಣ್ಣಿಮೆಯ ಬೆಳದಿಂಗಳಿನಲ್ಲಿ

ಶುಭ್ರವಾದ ಆಗಸದಲಿ ಮಿನುಗುತಿರುವ ತಾರೆಯಲ್ಲಿ

ನಿನ್ನ ಕಂಡು ತೇವವಾದವು ಈ ಕಣ್ಣಾಲಿಗಳು..

 

ಚಿತ್ರ ಕೃಪೆ : ಅಂತರ್ಜಾಲ 
Rating
No votes yet

Comments