ಐವತ್ತು ಭಾವ

ಐವತ್ತು ಭಾವ

 

ಐವತ್ತು ಭಾವ

 

ಕತ್ತಲ ಮಧ್ಯೆ ಆಗಾಗ ಬೀಳುವ ಬಣ್ಣದ ಕನಸುಗಳು ದೀಪವಾದಾಗ

ಹಠ ಮಾಡಿದಾಗ ಅಮ್ಮ ಮುನಿಸಿಕೊಂಡರೆ ಹೀಗೆ ’ಅಮ್ಮ, ನಿನಗಾಗಿ’

ನಿರಾಭರಣ ಸೌಂದರ್ಯಕ್ಕೊಂದು ಬೆಳ್ಳಿ ಸರಪಳಿ..

ತುಂಟತನದ ಒಂಟಿ ಕಣ್ಣ ನೋಟ

ಜಗಮಗಿಸುವ ಮಾನವ ನಿರ್ಮಿತ ಬೆಳಕಿನಡಿಯಲ್ಲಿ ಸತ್ಯಂ ಶಿವಂ ಸುಂದರಂ

ಮೊಗ್ಗೊಂದು ಕೇಳಿತು ದುಂಬಿಯನ್ನು, ಅರಳಲೇ ನಾ ಈ ದಿನ ?

ಭಕ್ತನ ಕಣ್ಣುಗಳಲ್ಲಿ ಸಿದ್ಧಿಯ ಸೊಬಗು, ಅಂಚಿನಲ್ಲಿ ಸಂತ ಭಾವ

ಸಾಗರದ ವಿಶಾಲತೆಗೆ ಹುಟ್ಟು ಹಾಕುವ ಮಂದಿ, ಎಲ್ಲಿಗೆ ಪಯಣ?

ಕಪ್ಪು ಬಿಳುಪಿನ ಪ್ರಪಂಚಕ್ಕೆ ಬಣ್ನಗಳ ಮಾರಾಟಗಾರರು

ಛಿದ್ರ ಆಗಸದ ಸೂರಿನಡಿ, ಸಾಗರದ ಮೌನ ಸಮ್ಮೇಳನ

ಹೊಸ ಹುಟ್ಟಿಗೆ ಕಾಯುವ ಬೀಜ ಕೋಶ

ಪ್ಲಾಟ್ ಪಾರ್ಮ್ ಮೇಲೊಬ್ಬಳು ಜಲಬಾಲೆ

ದಿನಪೂರ್ತಿ ಹಾರುವ ಕಾಯಕಕ್ಕೆ ಅಲ್ಪ ವಿರಾಮ

ಗಾಳಿಯು ನಿನ್ನದೇ .. ದೀಪವು ನಿನ್ನದೇ. ಆರದಿರಲಿ ಬೆಳಕು

ಸಾವಿರ ಕಣ್ಣುಗಳ ಒಂಟಿ ಮಿಡಿತ - ಗರಿ ಲಹರಿ

ವಿಶಾಲ ಬಾನಿಗೆ ಭೂಮಿಯ ಪರಿಧಿ

ಹೆಗಲಿಗೆ ಭಾರ, ನಡೆಯಲು ಆಧಾರ - ಜೀವನ ಸತ್ಯ

ಅಗೋ ಆ ಅಂಚಿನಲ್ಲಿ ಕಾಣುವುದೇ ಆಶಾಕಿರಣ

ಮದ್ದಳೆ ವಾದ್ಯ- ಉಯ್ಯಾಲೆ ಗೋಷ್ಠಿ

ಬಣ್ಣ ಬಳಿದೇ ಬಣ್ಣವಾಗುವ ಕಣ್ಣು

ಕೈ ಕಾಲು ಮುಖ ದೇಹ ದಾರವೊಂದೇ ಕೊಂಡಿ - ಇದು ಬೊಂಬೆಯಾಟ

ಸೂರ್ಯನ ಭಯಕ್ಕೆ ಕರಗಿದ ಮೋಡ - ಅಲ್ಲಲ್ಲಿ ಆಗಾಗ

ಇತಿಹಾಸದ ಭವಿಷ್ಯ - ಜೀವಂತ ಪಳೆಯುಳಿಕೆ

ನೆರಳು ಬೆಳಕಿನ ಆಟ - ಪಾದ ಪಾಠ

ತೊಳೆಯಿರಿ ಕೊಳೆಯ ತಿಕ್ಕಿ ತಿಕ್ಕಿ.. ಅಕ್ಕ ತಂಗಿಯರ ಪಾಪು

ಕಂಬ ಕಂಬಗಳ ಬೆಸೆದು, ಬೆಳಕು ಹರಿಸುವ ತಂತಿ

ಶರಾವತಿಯ ಧೀಮಂತ ನಡಿಗೆ, ಮಲೆನಾಡ ತಪ್ಪಲಿನಲ್ಲಿ

ಕೆಂಡದ ಬಿಸಿಗೆ ಕೆಂಡಾಮಂಡಲ

ಕೊಂಕಣ ರೈಲಿನ ಸೊಕ್ಕಿನ ತಿರುವು

ಸರಗಳಿವೆ ರಾಶಿ ರಾಶಿ, ಚಿಂತೆಯಾಕೆ ಶೋಢಶಿ?

ಆಟೋ ಮೇಲೆ ಹೀಗೊಂದು ಆಟಾಟೋಪ

ಸಹಜದಲ್ಲಿ ಮೂಡಿದ ವಿವರ

ತ್ರಯಂಬಕೇಶ್ವರನ ಜೋಡಿ ಕಳಶ

ಮಸೂರದ ನಿಲುಕಿನಾಚೆ ಪ್ರಕೃತಿ ವಿನ್ಯಾಸ

ಮನದ ಹಸಿರು ತೋರಣ, ಭಾವಪೂರ್ಣ ಹೂರಣ

ದಿನನಿತ್ಯದ ಸಾರಿಗೆ, ದಾರಿತೋರುವ ಬರಹ

ಆರ್ತನಾದದ ಮೌನ ಗೀತೆ

ಗಿಜಿಗುಟ್ಟುವ ಪೇಟೆಯಲ್ಲಿ ಸಮರ ರಥದ ಮಾರಾಟ

ಬೆಟ್ಟದ ಮೇಲೊಂದು ತಪವಗೈದು..

ಚಂದ ನಗುವಿನ ತುಂಬು ಸಂಸಾರ

ಮುಗಿಲೆತ್ತರಕೆ ಬೆಳೆಯುವ ಉತ್ಸಾಹವಿರಲಿ ಗರಿಕೆಗೆ

ಬೆಳಕಿನ ಗಡೀಪಾರು , ಸೂರ್ಯ ಚಲನೆಯ ಪ್ರತೀಕಾರ,

ನಿಲ್ಲು ನಿಲ್ಲೇ ಪತಂಗ

ಮಾರಾಟದ ಭರಾಟೆಯಲ್ಲಿ ಭಾಷೆ ಏಕೆ?

ನಿಂತಲ್ಲೇ ಕಲ್ಲಾದ ಜೀವಂತ ಶಿಲಾ ಬಾಲಕಿ

ಕಾಲಿಗೆ ಚೆಲ್ಲಾಟ, ನೀರಿಗೆ ಪ್ರಾಣಸಂಕಟ

ನೀರೆಯರ ನೀರಾಟ, ಬದುಕಿನ ಜಂಜಾಟ

ದೂರ ತೀರ ಯಾನ - ಜೀವನ

ಜೋಡಿಯಾಗಿ ನಿಂತ ಲೋಹ ದಂಪತಿ

ತೆರೆದಷ್ಟೇ ಬಾಗಿಲು

Rating
No votes yet

Comments