ಹೊಸವರ್ಷದ ಚಿತ್ರಗಳು..

ಹೊಸವರ್ಷದ ಚಿತ್ರಗಳು..

ಕಳೆದ ಹೊಸವರ್ಷಕ್ಕೆ ಕೆಲವು ದಿನಗಳ ಮುಂಚೆ ನಾನು ಇಂಗ್ಲೆಂಡ್ ನಲ್ಲಿದ್ದೆ. ಲಂಡನ್ನಿನ ಹೊಸವರ್ಷಕ್ಕೆ ಹುಡುಗರೆಲ್ಲ ಗುಂಪಾಗಿ ಹೋಗಿದ್ದರು. ನನಗೆ ಅದರಲ್ಲಿ ಅಂಥ ಆಸಕ್ತಿ ಬರಲಿಲ್ಲ. ಆದರೆ ನನಗೆ ಭಾಗವಹಿಸುವುದಕ್ಕಿಂತ ಹೆಚ್ಚು ಸುಡುಮದ್ದಿನ ಪ್ರದರ್ಶನವನ್ನು ಶೂಟ್ ಮಾಡುವುದರಲ್ಲಿ ಆಸಕ್ತಿ ಇತ್ತು. ಈ ವರ್ಷ ಹೋಗಲೇ ಬೇಕೆಂದು ನಿರ್ಣಯವಾಯಿತು. ನಾನು ಮತ್ತು ಸ್ನೇಹಿತ ಅನಿರುದ್ಧ ಹೋಗಿ ಬಂದೆವು. ಸಂಜೆ ಏಳೂಕಾಲರಿಂದ ೧೨ ಗಂಟೆಯವರೆಗೆ ಶೂನ್ಯದ ಆಸುಪಾಸು ಹವಾಮಾನದಲ್ಲಿ ಕಾಲಹರಣ ಮಾಡಿದ್ದಾಯಿತು. ಆಚೀಚೆ ತಿರುಗಾಡಿ ಸ್ವಲ್ಪ ಕ್ರೌಡನ್ನು ನೋಡೋಣವೆಂದರೆ, ಹಿಡಿದ ಜಾಗ ಬಿಟ್ಟರೆ ಮತ್ತೆ tripod ಇಟ್ಟು ಫೋಟೋ ತೆಗೆಯಲು ಸಾಧ್ಯವಿರಲಿಲ್ಲ.
ಅಂತೂ ಇಂತೂ ೧೧:೫೯ ಕ್ಕೆ ಕೌಂಟ್ ಡೌನ್ ಶುರುವಾಯಿತು.
ಆಮೇಲೆ ಸುಮಾರು ೧೪ ನಿಮಿಷಗಳ ಆತಿಶ್ ಬಾಜಿ. ೨೭೯ ಚಿತ್ರಗಳನ್ನು ತೆಗೆದೆ. ಸುಮಾರು ೩ ಸೆಕೆಂಡಿಗೆ ೧ ಚಿತ್ರದ ಸರಾಸರಿಯಂತೆ...
How was the experience? ಎಂದು ಅನಿರುದ್ಧ ಕೇಳಿದ. ’Yeah it was good, I can't weigh it against the trouble we have taken though !', ಎಂದು ಹೇಳಿದೆ. ಕೈ ಕಾಲು, ಸೊಂಟ ನೋಯುತ್ತಿತ್ತು :(
ಅಂತೂ ಇನ್ನು ಹೋಗಿಲ್ಲ ಎನ್ನುವ ಕೊರಗು ಇಲ್ಲ. ನನಗೆ ನನ್ನ ಚಿತ್ರಗಳು ಸಂಪೂರ್ಣ ಸಮಾಧಾನ ತರುವುದು ಅಷ್ಟರಲ್ಲಿಯೇ ಇದೆ !!
ಹೊಸವರ್ಷದ ಶುಭಾಷಯಗಳು..
ವಸಂತ್ ಕಜೆ.
Rating
No votes yet

Comments