ನಿರುತ್ತರ

ನಿರುತ್ತರ

 

 

ನಿಮಗೆ ಕಾಳಿದಾಸ ಗೊತ್ತಾ 

ಕೇಳಿದೆ ರೈತನೋರ್ವನ
ಯಾರಾತ? ಎಷ್ಟೆಕೆರೆ ಹೊಲಗದ್ದೆಯವ
ಕೇಳಿದನಾತ
ನಾನು ನಿರುತ್ತರನಾದೆ  
 
ನಿಮಗೆ ರಾಘವಾಂಕ ಗೊತ್ತಾ?
ಕೇಳಿದೆ ಒಬ್ಬ ಶಿಲ್ಪಿಯ ಬಳಿ 
ಯಾರು ವಿಖ್ಯಾತ ಶಿಲ್ಪಗಾರನೇ 
ಎಷ್ಟು ಮಂದಿ ಶಿಷ್ಯರಿದ್ದಾರೆ ಆತನಿಗೆ 
ನಾನ್ನು ನಿರುತ್ತರನಾದೆ 
 
ನಿಮಗೆ ಪಂಪ ಗೊತ್ತಾ?
ಉದ್ಯೋಗಪತಿಯೋರ್ವರನ್ನು  ಕೇಳಿದೆ 
ಜಗತ್ತಿನ ಎಷ್ಟನೇ ಶ್ರೀಮಂತನಾತ ?
ಕೇಳಿದ ಪ್ರಶ್ನೆಗೆ ನಿರುತ್ತರನಾದೆ 
 
ನಿಮಗೆ ಜನ್ನ  ಗೊತ್ತಾ 
ಮಿಡಿಯಾದವರನ್ನು ಕೇಳಿದೆ 
ಯಾವ ಚಾನಲ್ಲಿನವರು ? ಅಥವಾ ಪೆಪರಿನವರಾ?
ಕೇಳಿದರು 
ನಾನು ನಿರುತ್ತರನಾದೆ 
 
ನಿಮಗೆ ರನ್ನ ಗೊತ್ತಾ ಮರಿ ?
ಹೌದು ಉತ್ತರಬಂತು ಪಾಪುವಿನಿಂದ
ಚೆಂಡುಲ್ಕರ್ ಹೊಡಿತಾನಲ್ಲಾ ಅದೇ ತಾನೇ ?
ಕೇಳಿತು ಪಾಪು  ಅಲ್ಲಪಾ ಅವನೊಬ್ಬ ಕವಿ ಎಂದೆ 
ಆಟ ಎಷ್ಟು ರನ್  ಹೊಡೆದಿದ್ದಾ ? ಕೇಳಿತು ಪಾಪು
ನಾನು ನಿರುತ್ತರನಾದೆ 
 
ಸಮಾಜದ ಎಲ್ಲಾ ಸ್ತರದವರಿಗೂ  ಉಪಯೋಗಕ್ಕೆ ಬಾರದ      
ಸಾಹಿತ್ಯ ಸಾಹಿತಿಗಳು  ಯಾಕೆ ಬೇಕು? 
ಕೇಳಿದೆ ಘಟ್ಟಿಯಾಗಿ 
ಒಮ್ಮೆಲೇ ಕೈ ಕಾಲು ಕತ್ತಿ ಕುಡುಗೋಲು ಗಳಿಗೆ   ಕೆಲಸ ಸಿಕ್ಕಿತು
ನಾನು ಶಾಶ್ವತವಾಗಿ ನಿರುತ್ತರನಾದೆ
 
 
Rating
No votes yet

Comments