ನನಗೊಂದು ಅನುಮಾನ - ಬಗೆಹರಿಸುವಿರ?

ನನಗೊಂದು ಅನುಮಾನ - ಬಗೆಹರಿಸುವಿರ?

Comments

ಬರಹ

ಬಹಳ ದಿನಗಳಿಂದ ನನಗೊಂದು ಅನುಮಾನ ಕಾಡುತ್ತಿದೆ. ಸುಮ್ಮನೆ ಊಹಿಸಿಕೊಳ್ಳಿ ಭಾರತ ಯಾವುದಾದರೊಂದು ತಂಡದೊಂದಿಗೆ ಕ್ರಿಕೆಟ್ ಆಡುತ್ತಿದ್ದರೆ ಇಡೀ ದೇಶ ಭಾರತ ಗೆಲ್ಲಬೇಕು ಎಂದುಕೊಳ್ಳುತ್ತದೆ ಅಲ್ಲವೇ. ಕ್ರಿಕೆಟ್ ಒಂದೇ ಆಟ ಎಂದಲ್ಲ ಯಾವುದಾದರೂ ಆಟದಲ್ಲಿ ಭಾರತ ಸ್ಪರ್ಧಿಸುತ್ತಿದೆ ಎಂದರೆ ಇಡೀ ಭಾರತ ದೇಶವೇ ನಮ್ಮ ದೇಶ ಗೆಲ್ಲಬೇಕು ಎಂದುಕೊಳ್ಳುತ್ತೇವೆ ಅಲ್ಲವೇ?. ನಂತರ ಭಾರತ ಪರದೇಶದ ಮೇಲೆ ಯುದ್ಧದಲ್ಲಾಗಲಿ ಅಥವಾ ಬೇರೆ ಯಾವುದೇ ರಂಗದಲ್ಲಾಗಲಿ ಜಯಗಳಿಸಿದರೆ ಇಡೀ ದೇಶವೇ ಹೆಮ್ಮೆ ಪಟ್ಟು ಎಲ್ಲರ ಮುಂದೆ " ನಾವೆಲ್ಲರೂ ಭಾರತೀಯರು" ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ, ಡಜನ್ ಗಟ್ಟಲೆ ಇಮೇಲ್ ಗಳು, SMS ಗಳು ಹರಿದಾಡುತ್ತದೆ ಅಲ್ಲವೇ? ಅದೇ ರೀತಿ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಭ್ರಷ್ಟಾಚಾರದ ವಿಷಯದಲ್ಲೂ ಅಣ್ಣನ ಹಜಾರೆ ಹಾಗೂ ಬಾಬಾ ರಾಮ್ದೇವ್ ಅವರಿಗೆ ಇಡೀ ದೇಶದ ಜನ ಬೆಂಬಲವಾಗಿ ನಿಂತಿತಲ್ಲವೇ?

ಅಯ್ಯೋ ಹೌದು ಕಣಯ್ಯಾ ಇದು ಎಲ್ಲ ಭಾರತೀಯರಿಗೂ ತಿಳಿದಿರುವ ವಿಚಾರ ಅದನ್ನೇನು ಹೇಳುತ್ತಿಯ ಅಸಲಿಗೆ ನಿನ್ನ ತಲೆ ನೋವು ಏನೆಂದು ಕೇಳುತ್ತಿರ?

ಹೇಳುತ್ತೀನಿ

ನನ್ನ ಅನುಮಾನ ಇಷ್ಟೇ...

ಎಲ್ಲ ವಿಷಯದಲ್ಲೂ ನಾವು ಭಾರತೀಯರು, ನಾವೆಲ್ಲರೂ ಒಂದೇ ಎಂದು ಒದ್ದಾಡುವ ನಾವು ಪ್ರತ್ಯೇಕ ರಾಜ್ಯಗಳು, ಭಾಷೆಗಳ ವಿಷಯ ಬಂದರೆ ಮಾತ್ರ ಯಾಕೆ ಶತ್ರುಗಳಾಗುತ್ತೇವೆಂದು?

ಗಡಿ ಸಮಸ್ಯೆ, ನೀರಿನ ಸಮಸ್ಯೆ, ಭಾಷೆ ಸಮಸ್ಯೆ ಇದೆಲ್ಲ ಒಂದೇ ದೇಶದಲ್ಲಿರುವ ವಿವಿಧ ರಾಜ್ಯಗಳ ನಡುವೆ ಏಕೆ?

ಇಲ್ಲೂ ಸಹ ನಾವೆಲ್ಲಾ ಒಂದೇ ಎಂದು ಬಾಳಲು ಸಾಧ್ಯವಿಲ್ಲವೇ?

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet