ಚಿತ್ರಸಂತೆ ಇನ್ನೂ ನೆನಪಾಗುತ್ತಿದೆ

ಚಿತ್ರಸಂತೆ ಇನ್ನೂ ನೆನಪಾಗುತ್ತಿದೆ


ಚಿತ್ರಸಂತೆಯು ಬೆಂಗಳೂರಿನ ಒಂದು ಅಪರೂಪದ ಅನುಭವ ಎನ್ನಲೇಬೇಕು. ಆ ದಿನ ಕ್ಲಿಕ್ಕಿಸಿದ ಚಿತ್ರಗಳನ್ನು ನೋಡುತ್ತಿದ್ದಂತೆ, ಒಂದು ಪೂರ್ತಿ ರಸ್ತೆಯನ್ನು ಅಂದು ಕಲಾವಿದರ ಮತ್ತು ಕಲಾಪ್ರೇಮಿಗಳ ವಶಕ್ಕೆ ಕೊಟ್ಟದ್ದು ಅದ್ಭುತ ಎನಿಸಿತು. ಕುಮಾರಪಾರ್ಕ್ ರಸ್ತೆಯಲ್ಲಿ ಅಂದು ಜನ,ಜನ,ಡೊಳ್ಳು ಕುಣಿತ, ಚಿತ್ರಗಳ ರಾಶಿ. ಪಟ ಕುಣಿತ. ಆ ದಿನದ ಬಿಸಿಲು ಬಿರುಸಾಗಿರಲಿಲ್ಲ, ಪೂರ್ತಿ ಬಣ್ಣ ಬಣ್ಣವಾಗಿತ್ತು! ಕಲಾವಿದರ ಪಾಲಿಗೆ ಹಬ್ಬ, ಕಲಾಪ್ರೇಮಿಗಳಿಗೂ ಹಬ್ಬ, ಉಚಿತವಾಗಿ ಅಪರೂಪದ ಚಿತ್ರಗಳನ್ನು ನೋಡುವ ಅವಕಾಶ. ಈ ಮಧ್ಯೆ ಹಣ್ಣು ಮಾರುವ ಗಾಡಿಯನ್ನು ನಿಲ್ಲಿಸಿಕೊಂಡಿದ್ದ ಮಹಿಳೆಯೂ ಒಂದು ಚಿತ್ರದ ಚೌಕಟ್ಟಿನಲ್ಲಿ ಸೆರೆಯಾದಳು! ಕುದುರೆಯ ಚಿತ್ರವನ್ನು ರಚಿಸಿ ರಸ್ತೆಯ ಪಕ್ಕ ಇಟ್ಟುಕೊಂಡಿದ್ದ ಕಲಾವಿದರೊಬ್ಬರು ಮಾತ್ರ ತನ್ನ ಚಿತ್ರವನ್ನು ಕ್ಲಿಕ್ಕಿಸಲು ಅವಕಾಶ ನೀಡಲಿಲ್ಲ, ಹೊರತು ಬೇರಾರೂ ಎಷ್ಟು ಚಿತ್ರ ತೆಗೆದರೂ ಸುಮ್ಮನಿದ್ದರು. ಆ ವರ್ಣಮಯ ಬಿಸಿಲಿನಲ್ಲಿ ಕಳೆದ ಎರಡು ಗಂಟೆ, ಎರಡು ನಿಮಿಷದಂತೆ ಕಳೆದು ಹೋಯ್ತು ! ಮುಂದಿನ ವರ್ಷ ಪೂರ್ತಿ ದಿನ ಇಲ್ಲಿ ಕಳೆಯಬೇಕು ಎಂದು ನಾವು ಮಾತನಾಡಿಕೊಂಡು, ವಾಪಸಾದೆವು. ಆ ದಿನ ಕ್ಲಿಕ್ಕಿಸಿದ ಕೆಲವು ಚಿತ್ರಗಳನ್ನು ನಿಮಗೆ ತೋರಿಸಲೇ ಬೇಕು ಎಂದು ಇಲ್ಲಿ ಜೋಡಿಸಿರುವೆ.

Rating
No votes yet

Comments