ಬದಲಾವಣೆ ಎಂಬುದೇ ಬದುಕು

ಬದಲಾವಣೆ ಎಂಬುದೇ ಬದುಕು

 

  " ಭಾವನೆಗಳು ಮೂಲ ರೂಪದಲ್ಲಿ ಇದ್ದರೇನೆ ಚಂದ" ಅಂತ ಸಹಜ ರವರ "ಬಲ್ಕಾನಿಂದ" ಎಂಬ ಪುಸ್ತಕ ಓದಿದ ಮೇಲೆ "ಮನಸಲ್ಲೇ ಇರಲಿ ಭಾವನೆ..ಮಿಡಿಯುತಿರಲಿ ಮೌನ ವೀಣೆ ಹೀಗೆ ಸುಮ್ಮನೆ..." ಅಂತ ಬರಯೋದನ್ನ ಕಮ್ಮಿ ಮಾಡಿದ್ದೆ. ನಿಜ ಹೇಳ್ಬೇಕಂದ್ರೆ ಕೆಲಸ ಮಾಡೋದು, ಹೊಸ ಕೆಲಸ ಹುಡ್ಕೊದ್ರಲ್ಲಿ ನನ್ನ ನೆನ್ನೆಗಳು ಕಳೆದಹೊಗಿವೆ. ಆಫಿಸ್ನಲ್ಲಿ ಔಟ್ ಲುಕ್ ಇಮೇಲ್ ಆದಮೇಲೆ, ಸಂಪದದಲ್ಲಿ ಅಥವಾ ಬೇರೆ ಸಾಹಿತ್ಯ ನೋಡ್ತಾ ಇದ್ದೆ. ಕೆಲವು ದಿನಗಳ ಹಿಂದೆ  ಎಲ್ಲ ಬಂದ್ ಮಾಡಿ ನನ್ನ ಕೆಲಸದ ಡೊಮೈನ್, ಟೆಕ್ನಾಲಜಿ ಸಂಬಂದ ಪಟ್ಟ ಬರಹಗಳು,ದಾಖಲೆಗಳನ್ನ ಓದೋಕ್ಕೆ ಪ್ರಾರಂಭಿಸಿದ್ದೆ. ಅವಾಗ ಅನಿಸಿತು ಬದಲಾಗುತಿದೆ  ಬದಕು. ಕೆಲವು ದಿನಗಳು ಹೀಗೆ ನಡೀತು,ಕೊನೆಗೂ ಹೊಸ ಕೆಲಸ ಸಿಕ್ಕಿದಾಗ ಸ್ವಲ್ಪ ಸಮಾದಾನ, ಖುಷಿ :). 

 

 ಸುಮ್ಮನೆ ಕೂತು ಹಿಂದಿನ ದಿನಗಳನ್ನು ಸ್ಮರಿಸಿದರೆ ಬದಲಾವಣೆ ಎಂಬುದೇ ಬದುಕು ಅನಿಸುತ್ತೆ. ಪ್ರತಿ ಹಂತದಲ್ಲೂ ನಮ್ಮೆಲ್ಲರ  ಬದುಕು ಬದಲಾಯಿಸುತ್ತೆ. ಎರಡು ತಿಂಗಳಾದಮೇಲೆ ನಾನು ಕೆಲಸ ಮಾಡುವ ಸಂಸ್ಥೆ ಬದಲಾಗುತ್ತೆ, ಹೊಸ ಜನ, ಹೊಸ ಕೆಲಸ, ಹೊಸ ಸ್ಥಳಕ್ಕೆ ಮತೊಮ್ಮೆ ಬದುಕು ಬದಲಾಗುತ್ತೆ.  ನಾಳೆ ಬಹಳಷ್ಟು ಬದಲಾಗಬಹುದು; ಆದರೆ ಕೆಲವು, ಕಾಲ ಕಾಲಕ್ಕೆ ಬದಲಾಗದೆ ಅಚಲವಾಗಿರುತ್ತೆ - ಸ್ಥಿರ  ಸತ್ಯವಾಗಿ. ಆ ಸತ್ಯಗಳಲ್ಲಿ  ಬರೆಯೋ ಬಯಕೆ ಒಂದು, ಹೀಗಿರುವಾಗ ಭಾವನೆಗಳು ಮೂಲ ರೂಪದಲ್ಲಿ ಇರಬೇಕೋ ಅಥವಾ ಬ್ಲಾಗ್ ಬರಹ ಆಗಬೇಕೋ ? ಎಂಬುದೇ  ಪ್ರಶ್ನೆ . ಉತ್ತರ ಪ್ಲೀಸ್ ..........

Rating
No votes yet

Comments