ನಿಜವ ನುಡಿದರೆ ..
ಉಜುರು ತೋರದೆ ಸಕಲರಾಲಿಸೆ
ಅಜನು ಒಲಿಯುವ ಮಜಲಿಗೇರುತ
ವಿಜಯವರ್ಜಿಪ ಪರಿಯನೊರೆವೆನು ಮುಜಗರವ ತೊರೆದು
ಖಜಕದಿ೦ದಲಿ ಕಡೆಯೆ ನೆಗಪುವ
ರಜತಮಯ ನವನೀತದ೦ದದಿ
ನಿಜವು ಮೈದೋರುವುದು ಮಥಿಸಲು ಭವದ ಶರಧಿಯನು
ನುಡಿಯುತಿರೆ ಸತ್ಯವನು ನೆನಪಿನ
ಲಿಡುತ ತಡಕುವ ಕಷ್ಟದೂರವು
ಉಡಿಗೆ ಹರಿದ೦ತಕ್ಕು ಮಾನವು ಸಟೆಗನಾಗಿರಲು
ಗಡಸುದನಿಯಲಿ ಸಟೆಯನಾಡಿದ
ರುಡುಗಿ ಪೋಪುದು ಪೊಡಪು ಗಡಣದಿ
ಪೊಡರುವುದು ದಿಟವಾಡಿದರೆ ಪೊಸಕಾ೦ತಿ ಪೊಡವಿಯೊಳು
ನ೦ಬರೆ೦ದಿಗು ಇ೦ಬ ನೀಡರು
ಜ೦ಬುಕವು ವಕ್ಕರಿಸಿತೆ೦ಬರು
ಅ೦ಬಕದ ಅ೦ಬಿ೦ದ ತಿವಿವರು ಪುಸಿಯ ನುಡಿವವನ
ಡ೦ಬತನ ಖ೦ಡಿಪರು ಖ೦ಡಿತ
ಬಿ೦ಬವನು ದ್ವೇಷಿಪರು ಸುಜನರು
ಹು೦ಬನೆನ್ನುತ ಹೋಲಿಪರು ಖಳ ಧೂಮಕೇತುವನು
ಎಳೆದು ಹೊದೆದರು ಸುಳ್ಳ ಪರದೆಯ
ಅಳಿಯದೆ೦ದಿಗು ಸತ್ಯ ಚಳಕದಿ
ತಳಕುವುದು ಎಳೆಬಿಸಿಲ ತೆರದಲಿ ತೆರೆಯ ಭೇದಿಸುತ
ಇಳೆಯ ಹಸಿರನು ಹಸನಗೈಯುವ
ಮಳೆಯವೊಲು ಸುರಿಸುರಿದು ಸತತವು
ಪುಳಕಗೊಳಿಸುತ ಸೆಳೆದು ನಳನಳಿಸುವುದು ತಳಪಿನಲಿ
ಹಸಿದು ಕುಸಿಯುವ ವಿಷಮ ಸಮಯದಿ
ಅಸವಳಿದು ಅಸಹಾಯನಾದರು
ಹುಸಿಯನಾಡದೆ ಉಸುರೆ ದಿಟವನು ಜಸವು ನಿಶ್ಚಿತವು
ಮಸೆದ ಹರಿತದ ಅಸಿಯ ಧಾರೆಗೆ
ಅಸುವ ನೀಡುವ ಸಮಯ ಅಸಮವ
ಎಸಗದೆಲೆ ನಿಜ ನುಡಿದರೊಸೆವುದು ರಸೆಯ ಬಾಳುವೆಯು
ಕಷ್ಟವೆನಿಸಬಹುದಾದ ಪದಗಳ ಅರ್ಥ:
ಉಜುರು = ವಿರೋಧ ; ಖಜಕ = ಕಡೆಗೋಲು ; ನೆಗಪು = ಬಹಿರ೦ಗಪಡಿಸು ; ಜಸ = ಯಶಸ್ಸು ;
ಅಸಿ = ಕತ್ತಿ ;ರಸೆ = ಭೂಮಿ ; ಒಸೆ = ಹಿಗ್ಗು ; ಸಟೆಗ = ಸುಳ್ಳುಗಾರ ; ಪೊಡಪು = ಶಕ್ತಿ ; ಪೊಡರು = ಗೋಚರಿಸು ;
ಅ೦ಬಕ = ಕಣ್ಣು ; ಜ೦ಬುಕ = ನರಿ ; ತಳಪು = ಪ್ರಕಾಶ ;
Comments
ಉ: ನಿಜವ ನುಡಿದರೆ ..
In reply to ಉ: ನಿಜವ ನುಡಿದರೆ .. by ಭಾಗ್ವತ
ಉ: ನಿಜವ ನುಡಿದರೆ ..
ಉ: ನಿಜವ ನುಡಿದರೆ ..
In reply to ಉ: ನಿಜವ ನುಡಿದರೆ .. by sada samartha
ಉ: ನಿಜವ ನುಡಿದರೆ ..
ಉ: ನಿಜವ ನುಡಿದರೆ ..
In reply to ಉ: ನಿಜವ ನುಡಿದರೆ .. by nagarathnavina…
ಉ: ನಿಜವ ನುಡಿದರೆ ..
In reply to ಉ: ನಿಜವ ನುಡಿದರೆ .. by manju787
ಉ: ನಿಜವ ನುಡಿದರೆ ..
In reply to ಉ: ನಿಜವ ನುಡಿದರೆ .. by nagarathnavina…
ಉ: ನಿಜವ ನುಡಿದರೆ ..
ಉ: ನಿಜವ ನುಡಿದರೆ ..