ನನ್ನ ಮಗು
ಕವನ
ಅಂದು ಸುಖಿಸಿದ ಆ ಕ್ಷಣ ನನ್ನೊಳಗೆ ಬಿತ್ತಿದ ಜೀವಾಣು
ಮಿಡಿದದ್ದು ಹೊಡೆದಿದ್ದು,
ಮಾಂಸದ ಮುದ್ದೆಯಾಗಿ ಮುದ್ದಾದ ಮಗುವಾಗಿ
ಪ್ರಸವಿದ್ದು,
ಇಂದು ಸೊಗಸಾದ ನಗುವಾಗಿ, ಮಗುವಾಗಿ ಮಗನಾಗಿ
ನನಗಾಗಿ ನಿನಗಾಗಿ, ಆಡಿದ್ದು ಕಾಡಿದ್ದು,
ಮನದುಂಬಿ ಮನೆದುಂಬಿ, ನಲಿದಿದ್ದು ನಲಿಸಿದ್ದು,
ಕಲಿತದ್ದು ಕಲಿಸಿದ್ದು, ಬೆಳೆದಿದ್ದು ಬೆಳೆಸಿದ್ದು,
ಸೋಜಿಗವೋ ಸಂಯೋಗವೋ
ಜೀವವೋ, ಜೀವನವೋ
ಭಾವವೋ ಬಾಳ್ವೆಯೋ
ತಿಳಿಯದಾಗಿತ್ತು.
Comments
ಉ: ನನ್ನ ಮಗು
In reply to ಉ: ನನ್ನ ಮಗು by sada samartha
ಉ: ನನ್ನ ಮಗು
ಉ: ನನ್ನ ಮಗು
In reply to ಉ: ನನ್ನ ಮಗು by asuhegde
ಉ: ನನ್ನ ಮಗು