ಕೌತುಕ

ಕೌತುಕ

ಕವನ

 

ಕೌತುಕ

ಸಹ್ಯಾದ್ರಿಯ ಮಲೆಮಲೆಯಲಿ ಕೌತುಕ
ವರ್ಣ ಚೇತನದ ಚೆಲುವು
ಆ ಬೊಮ್ಮ ನ ಕುಂಚದ ಬಲವು
ಅದ ಕಂಡರೆ ಕಣ್ಣಿಗೆ ಗೆಲುವು ||ಪ||

ತೆಂಕಣ ಭಾರತ ಪಡುವಣದಂಚಿಗೆ 
ಬೊಮ್ಮ ನಿಲ್ಲಿಸಿದ ಗೋಡೆ
ಸುತ್ತ ಹಸಿರು ಹಚ್ಚಿಟ್ಟು ಜೀವ
ಚಿತ್ತಾರ ಗೈದ ಮೇಲೆ ||
ನೂರಾರು ತೊರೆಯು ಹೆನ್ನದಿಗಳುದಿಸಿ
ಮೂಡಿದವು ನಾಡುನಾಡಿ
ಹರದಾರಿ ಜೀವ ದಾಹವನು ನೀಗಿ
ಹಸಿರೂಡಿ ಶರಧಿ ಹುಡುಕಿ ||೧||

ದಿಕ್ಕರಸುವಾಗ ದಡಬಡಿಸಿ ಧುಮುಕಿ
ಜಲಕನ್ಯೆ ಪಾತವಾಗಿ
ಬಲು ಬಳುಕಿ ಅಳುಕಿ ಬೀಳುತ್ತಾ ಬೆಡಗಿ
ಕಾಣುವಳು ರಮ್ಯವಾಗಿ ||
ಮೈದುಂಬಿದೊಡಲು  ಅಪ್ಪಳಿಸುವಾಗ
ಭೋರ್ಗರೆತ ಭವ್ಯ ಮಯವು
ಓಡಿದರೆ ಭಯವು ನಡು ಬಿದ್ದರೂ ಚೆಲುವು
ನದಿಕನ್ಯೆ ಪಡೆದ ವರವು ||೨||

                                                                                                                                 -ಸದಾನಂದ


 

Comments