ಕಾವ್ಯ ಕನ್ನಿಕೆ....ಪ್ರಸವ !

ಕಾವ್ಯ ಕನ್ನಿಕೆ....ಪ್ರಸವ !

ಕವನ

  

    ಮನದ ಮನೆಯಲ್ಲಾದ

    ಸಂಭ್ರಮದ ಮಿಲನಕ್ಕೆ....!

    ಮನವು  ಈಗಷ್ಟೇ  ಉಸುರಿತು

    ಕಾವ್ಯ ಕನ್ನಿಕೆ  ಬಸುರಿ.!

 

    ತಕ್ಷಣದ ಪ್ರಸವಕ್ಕೆ ಕ್ಷಣಗಣನೆ

    ಶಬ್ದಗಳ ಮಲ್ಲಿಗೆ ಮುಡಿಸಿ

     ಅರ್ಥಗಳ ಮುತ್ತನ್ನಿಟ್ಟು  ಸೀಮಂತ !

 

     " ಕನ್ನಿಕೆಯ ಪ್ರಸವವೇ ?

       ಇದು ಭಾವನೆಯ ಚಾದರದಡಿಯ ಹಾದರ "

       ಹಾಗೆಂದ  ಕಟಕಿಮಾತಿಗೆ ತಲೆಗೊಡದೆ

       ಹುಡುಕಾಡಿದೆ  ಇಲ್ಲಿ ಇಲ್ಲದ ಹೆಸರು !

 

      ಅರಸಿದರೂ ಸಿಕ್ಕ ಹೆಸರು ಅರಸಿಯದೇ ...!

      ಹುಟ್ಟುವುದು  ಹೆಣ್ಣು....ನಿಶ್ಚಿತ  

       ಏಕೆಂದರೆ....

      "ಗಂಡು ಹೆಣ್ಣಂತೆ ಕಾವ್ಯವಾಗಲಾರ

         -ಕಾವ್ಯಕ್ಕೆ ವಸ್ತುವಾಗುತ್ತಾನೆ"

 

       ಕ್ಷಣದಲ್ಲಿ  ಪ್ರಸವ ವೇದನೆ ಶುರು....

       ಆದರೆ.....

       ವಿಮರ್ಶೆಗಳಿಂದ  ಆಗಿದ್ದು..."ಸಿಸರಿಯನ್"

       ಹುಟ್ಟಿದ್ದು .....ಈ   ಕಾವ್ಯ ಕೂಸು..

       ನೀವಾದರೂ   ಇದ......ಕೊಂದು.!

       ಕ್ಷಮಿಸಿ...ಇದಕ್ಕೊಂದು  ಹೆಸರಿಡುವಿರಾ ?

   

Comments