ಚುರ್ಮುರಿ - ೧೪

ಚುರ್ಮುರಿ - ೧೪

೪೮) ತಾನು ಕೊಳ್ಳುತ್ತಿದ್ದ ಟೀ ಶರ್ಟ್ಗಳೆಲ್ಲ ಸಣ್ಣದೆಂದು ಗೊತ್ತಿದ್ದೂ ಅದನ್ನು ಹಾಕಿಕೊಂಡಾಗಲೆಲ್ಲಾ ಅವಳು ತನ್ನ ಕೈನಿಂದ ಆಗಾಗ ಕೆಳಗೆ ಎಳೆದುಕೊಳ್ಳುತ್ತಿದ್ದಳು. ೪೯) ಆ ಅಜ್ಜಿ ಹಣೆಗೆ ಕುಂಕುಮ, ಕೈಗೆ ಬಳೆ ಹಾಕಿಕೊಂಡು ಚರ್ಚಿಗೆ ಪ್ರಾರ್ಥನೆಗೆ ಹೋಗುತ್ತಿದ್ದಳು. ೫೦) ಅವನು ಕನ್ನಡಿಗನಾದರೂ ಕನ್ನಡ ಚಲನಚಿತ್ರಗಳನ್ನು ನೋಡುತ್ತಿರಲಿಲ್ಲ ಆದಾಗ್ಯೂ ಬೇರೆಯವರು ಕನ್ನಡ ಚಲನಚಿತ್ರ ಚೆನ್ನಾಗಿದೆ ಅಂದಾಗ ಮೂದಲಿಸುತ್ತಿದ್ದನು. ೫೧) ಅವರಿಬ್ಬರೂ ಅಕ್ಕ ತಂಗಿಯರು, ಇಬ್ಬರೂ ಒಂದೇ ಮನೆಯಲ್ಲಿದ್ದರೂ ತಂಗಿಯ ಹುಟ್ಟುಹಬ್ಬದಂದು ಅಕ್ಕ ಫೇಸ್ಬುಕ್ಕಿನಲ್ಲಿ ವಿಶ್ ಮಾಡಿದ್ದಳು. ೫೨) ಆ ರಸ್ತೆಯಲ್ಲಿ ಯಾವಾಗಲೂ ಅಪಘಾತವಾಗುತ್ತಿತ್ತು ಕಾರಣ ಅಲ್ಲಿದ್ದ ಒಂದು ಜಾಹೀರಾತಿನ ಬೋರ್ಡಿನಲ್ಲಿದ್ದ ಕಿಂಗ್ಫಿಶರ್ ಮಧ್ಯದ ಜೊತೆಗೆ ಕಿಂಗ್ಫಿಶರ್ ರೂಪದರ್ಶಿಯ ಚಿತ್ರ.

Comments