ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮ್ಮ ಪಶ್ಚಿಮ ಘಟ್ಟ ಶ್ರೇಣಿ

ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮ್ಮ ಪಶ್ಚಿಮ ಘಟ್ಟ ಶ್ರೇಣಿ

Comments

ಬರಹ

 ಈ ಭೂ ಮಂಡಲದಲ್ಲಿ ಗುರುತಿಸಲಾಗಿರುವ ಹದಿನೆಂಟು ಅತಿ ಸೂಕ್ಷ್ಮ ಜೀವ ವೈವಿದ್ಯ ತಾಣಗಳಲ್ಲಿ ನಮ್ಮ ಪಶ್ಚಿಮ ಘಟ್ಟ ಶ್ರೇಣಿಯೂ ಸಹ ಒಂದು ಎಂಬುದು ನಮಗೆಲ್ಲಾ ಹೆಮ್ಮೆಯ ವಿಚಾರ.  ಪಶ್ಚಿಮ ಘಟ್ಟ ಶ್ರೇಣಿಯಲ್ಲಿ ಈಗ ಕೇಂದ್ರ ಸರಕಾರ [ಯುಸೆಸ್ಕೊಗಾಗಿ] ಗುರುತಿಸಿರುವ ನಲವತ್ತು ತಾಣಗಳ ಪೈಕಿ ಹತ್ತು ತಾಣಗಳು ನಮ್ಮ ಕರ್ನಾಟಕದೊಳೆಗೆ ಬರುತ್ತವೆ.  ವಿಶ್ವ ಪರಂಪರೆಯ ಪಟ್ಟಿಗೆ ಈ ಹತ್ತು ತಾಣಗಳನ್ನು ಸೇರಿಸಬೇಕೆ ಅಥವ ಬೇಡವೆ ಎಂಬ ಬಗ್ಗೆ ನಮ್ಮ ರಾಜದಾನಿಯಲ್ಲಿ ನಿನ್ನೆ ಬಹಳ ಚರ್ಚೆಯಾದ ಬಳಿಕ ಈ ಪ್ರಾಕೃತಿಕ ತಾಣಗಳನ್ನು ಯುನೆಸ್ಕೊ ಅಧಿನಕ್ಕೆ ಒಪ್ಪಿಸಿ ನಮ್ಮ ಅಬಿವೃದ್ದಿಗೆ ನಾವೇ ಕಡಿವಾಣ ಹಾಕಿಕೊಳ್ಳುವುದು ಬೇಡ ಎಂಬ ಅಭಿಪ್ರಾಯವು ನಿನ್ನೆ ಮೂಡಿಬಂದಿದೆ ಎಂಬುದು ಇಂದಿನ ಪ್ರಜಾವಾಣಿಯ ಮುಖಪುಟದ ಸುದ್ದಿಯಾಗಿ "ನಮ್ಮ ಜಾಗ ಬಿಡೆವು, ನಮ್ಮ ಜುಟ್ಟು ಕೊಡೆವು" ಮುದ್ರಿತವಾಗಿದೆ.

 

ಕರ್ನಾಟಕದ ಆ ಹತ್ತು ತಾಣಗಳ ಪೈಕಿ ನನಗೆ ಹತ್ತಿರದಲ್ಲಿರುವ ಆಗುಂಬೆ ಮೀಸಲು ಅರಣ್ಯ ಪ್ರದೇಶದಲ್ಲಿ ಪ್ರಸ್ತುತ 
ನಿತ್ಯವೂ ನಿತ್ಯ ಹರಿದ್ವರ್ಣದ ಕಾಡನ್ನು ಹರಿದು ತಿನ್ನಲಾಗುತ್ತಿದೆ ಎಂದು ನನಗೆ ಅನಿಸುತ್ತಿದೆ.  ಅರಣ್ಯ ನಾಶ ಪ್ರತಿ ದಿನದ ಕಾಯಕವಾಗಿದೆ. ಅನೇಕ ಸಸ್ಯವರ್ಗ ಮತ್ತು ಕೀಟಗಳು, ಪಕ್ಷಿಗಳು ಹಾಗು ಪ್ರಾಣಿಗಳು ಅಳಿವಿನಂಚಿಗೆ ತಲುಪಿವೆ. ಇನ್ನುಳಿದ ಒಂಬತ್ತು ತಾಣಗಳಲ್ಲೂ ಹೀಗೆಯೇ ಪರಿಸ್ಥಿತಿ ಇರಬಹುದು. 
 
ಸರಕಾರ ಯುನೆಸ್ಕೊಗೆ ಈ ತಾಣಗಳ ಜವಾಬ್ದಾರಿ ವಹಿಸಿದ್ದರೆ ಚನ್ನಾಗಿತ್ತೆ ಅಥವ ಅಬಿವೃದ್ಧಿಯ ಪಥದಲ್ಲಿ ನಡೆಯುವಾಗ ಯುನೆಸ್ಕೊ ಹಂಗು ನಮಗೇಕೆ ಎಂದು ನಮ್ಮ ಪಶ್ಚಿಮ ಘಟ್ಟ ಪ್ರದೇಶವನ್ನು ನಾವೇ ಸಂರಕ್ಷಿಸಿಕೊಳ್ಳ ಬಲ್ಲೆವೆ ಎಂಬುದೆ ಇಂದಿನ ನನ್ನ ಚಿಂತನೆಯಾಗಿದೆ.
 
ಸಂಪದಿಗ ಮಿತ್ರರ ಅಭಿಪ್ರಾಯಗಳನ್ನು ನಾನೂ ತಿಳಿದುಕೊಳ್ಳಲೆ ?
 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet