"ಕನ್ನಡದ ಗಿಳಿ ಕೋಗಿಲೆಗಳು"
ಗಿಳಿ ಕೋಗಿಲೆಗಳುತಾ ಮಂಜುಳರವದಲಿ
ಮಂಗಲ ಪಾಡುವ ನಾಡು,
ಇದು ನಮ್ಮಯ ಕನ್ನಡ ನಾಡು.
ಜಯ ಕನ್ನಡ, ಜಯ ಕನ್ನಡ, ಜಯ ಕನ್ನಡ||
ದತ್ತ ಕುವೆಂಪು ಕಾವ್ಯದ ಕಂಪು
ಬೀರಿದ ಬೆಳಗಿನ ಬೀಡು,
ಹಕ್ಕ-ಬುಕ್ಕ-ಪ್ರಭು-ಅಲ್ಲಮದೇವರು
ಬೆಳಗಿದ ಭಾಗ್ಯದ ಬೀಡು.
ಪಂಪ-ರನ್ನ-ಲಕ್ಶ್ಮೀಶರು ಹಾಡಿದ
ದಾಸರ ವ್ಯಾಸರ ಬೀಡು.
ಇದು ನಮ್ಮಯ ಕನ್ನಡ ನಾಡು.
ಜಯ ಕನ್ನಡ, ಜಯ ಕನ್ನಡ, ಜಯ ಕನ್ನಡ||
ಬೆಳಗೊಳದಾಗಸದಲಿ ತಲೆ ಎತ್ತಿದ
ಗೊಮ್ಮಟನೈಸಿರಿ ನೋಡು,
ಒಂದಕೇಳುಸಲ ಮಾರ್ದನಿಗೈಯ್ಯುವ
ಬಿಜಾಪುರ ಗುಮ್ಮಟ ನೋಡು,
ಜೋಗವು ಜೋ ಜೋ ಜೋಗುಳ ಹಾಡುವ
ಬೆಳಕಿನ ಭಾಗ್ಯದ ಬೀಡು.
ಇದು ನಮ್ಮಯ ಕನ್ನಡ ನಾಡು.
ಜಯ ಕನ್ನಡ, ಜಯ ಕನ್ನಡ, ಜಯ ಕನ್ನಡ||
ಕಾರವಾರದ ಕಡಲಿನ ತೀರಕೆ
ಹಾಸಿದೆ ಸುಂದರ ಸೆರಗು,
ದೇಶ-ವಿದೇಶದ ಜನರನು ಕರೆದಿದೆ
ಕನ್ನಂಬಾಡಿಯ ಬೆಡಗು,
ಶಿಲೆ-ಶಿಲೆಯಲ್ಲೂ ಪ್ರಾಣವ ತುಂಬಿದ
ಜಕ್ಕಣರಾಯರ ಬೀಡು.
ಇದು ನಮ್ಮಯ ಕನ್ನಡ ನಾಡು.
ಜಯ ಕನ್ನಡ, ಜಯ ಕನ್ನಡ, ಜಯ ಕನ್ನಡ||
ಮೈಸೂರಿನ ಹುಲಿ ಕನ್ನಡ ಕಲಿಗಳು
ಶೌರ್ಯವ ಮೆರೆದಿಹ ನಾಡು
ನಾಡಿನ ಕೀರ್ತಿಯ ನಾಲ್ದೆಸೆ ಹರಡಿದ
ಕಿತ್ತೂರರಸಿಯ ನಾಡು,
ಬಿಳಿಯರ ತುಳಿಯಲು ಪ್ರಾಣವ ನೀಡಿದ
ಎಂಟೆದೆ ಬಂಟರ ಬೀಡು.
ಇದು ನಮ್ಮಯ ಕನ್ನಡ ನಾಡು.
ಜಯ ಕನ್ನಡ, ಜಯ ಕನ್ನಡ, ಜಯ ಕನ್ನಡ||
~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~
ಮೈಸೂರು ದಸರಾ ಅಖಿಲ ಕರ್ನಾಟಕ ಮಕ್ಕಳ ಮೇಳದ (೧೯೭೭) ಸ್ಪರ್ಧೆಯಲ್ಲಿ ’ಪ್ರಥಮ ಪುರಸ್ಕಾರ’ ಮತ್ತು ’ಸುವರ್ಣ ಪದಕ’ ಪಡೆದ ಕವಿತೆ.
~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~
Comments
ಉ: "ಕನ್ನಡದ ಗಿಳಿ ಕೋಗಿಲೆಗಳು"
ಉ: "ಕನ್ನಡದ ಗಿಳಿ ಕೋಗಿಲೆಗಳು"
ಉ: "ಕನ್ನಡದ ಗಿಳಿ ಕೋಗಿಲೆಗಳು"
In reply to ಉ: "ಕನ್ನಡದ ಗಿಳಿ ಕೋಗಿಲೆಗಳು" by Gonchalu
ಉ: "ಕನ್ನಡದ ಗಿಳಿ ಕೋಗಿಲೆಗಳು"