ಸಂಪದದಲ್ಲಿ ಕೆಲವು ತಾಂತ್ರಿಕ ಸಮಸ್ಯೆ ಅಥವಾ ಬೇಕಿರೋ ತಿದ್ದುಪಡಿ ಹಾಗು, ಅಗತ್ಯಗಳು..
ಸಂಪದ ನಿರ್ವಾಹಕರ ಗಮನಕ್ಕೆ..
ಮೊದಲು ಒಬ್ಬ ಬರಹಗಾರನ ಬರಹಗಳನ್ನ ಒಂದೆಡೆ ನೋಡಲು ಸಂಪದದಲ್ಲಿ ಇದ್ದ ಕೊಂಡಿ, ಇತ್ತೀಚೆಗೆ ಸುಮಾರು ತಿಂಗಳಿಂದ ಕಾಣೆಯಾಗಿದೆ ಅಥವಾ ತಪ್ಪಾಗಿದೆ. ಸಂಪದ ನಿರ್ವಹಣಾ ಕಾರ್ಯದಲ್ಲಿ ಕೆಲವು ಹಚ್ಚಿನ ಕೆಲಸಗಳು ನಡೆಯತ್ತಿದ್ದ ಕಾರಣ, ಸದ್ಯದಲ್ಲೇ ಸರಿ ಹೋಗಬಹುದೆಂದು ನಿರೀಕ್ಷಿಸಿಕೊಂಡು ಕಾದಿದ್ದೆವು. ಯಾವುದೇ userನ ಬರಹಗಳು ಕೊಂಡಿ ತಲುಪಿದಲ್ಲಿ, ಅದು ಅವನ TRACK ಕೊಡುತ್ತಿದೆಯೇ ವಿನಃ ಅವನ ಬರಹಗಳ ಯಾದಿಯನ್ನಲ್ಲ.. ಒಬ್ಬ ಬರಹಗಾರನ, ಕೇವಲ ಅವನ ಬರಹಗಳ ಪಟ್ಟಿ ಯಾವ ರೀತಿಯಲ್ಲಿ ನೋಡಬೇಕೆಂಬುದು ತಿಳಿಯದಾಗಿದೆ. ಗೊಂದಲದಲ್ಲಿದ್ದೇವೆ.
ಹಾಗೇ, ಇತ್ತೀಚೆಗೆ, ನನ್ನ ಸ್ನೇಹಿತನೊಬ್ಬನ ಹೊಸದೊಂದು ಖಾತೆ ತೆರೆಯುವ ಅನ್ನೋ ಪ್ರಯತ್ನಕ್ಕೆ ಯಾವುದೇ ಫಲವಿಲ್ಲದಂತಾಗಿದೆ. CAPTCHA ಇಲ್ಲದೇ ಯಾವುದೇ ಕೆಲಸವಾಗುವುದು ಅಸಾಧ್ಯ. ಆದರೆ ಅದರ ಜಾಗದಲ್ಲಿ CAPTCHAನೇ ಇಲ್ಲವಾದಲ್ಲಿ ನಾವುಗಳು ಏನೂ ಮಾಡಲು ಅಸಾಧ್ಯ ಅನ್ನೋದು ಅಷ್ಟೇ ನಿಜ.
ದಯವಿಟ್ಟು ಕ್ಷಮಿಸಿ.. !
ಸಂಪದ ಸಂಪರ್ಕದ ಮಿಂಚೆ ವಿಳಾಸ, ನಾವು ಮರೆತಿದ್ದೇವೆ. ಅದು ಎಲ್ಲಿಯೂ ನಮೂದಿತವಾಗಿರದೇ ಇರೋದ್ರಿಂದ ನಮಗೆ ನಿಮ್ಮನ್ನ ಸಂಪರ್ಕಿಸಲೂ ಕೂಡ ಆಗದೇ ಹೋಗಿದೆ. ನಾಡಿಗರು ತುಂಬಾನೇ ಕಾರ್ಯಬಾಹುಳ್ಯದಲ್ಲಿದ್ದಾರೆಂಬುದು, ಅವರನ್ನ ಅಂತರ್ಜಾಲದ ಮೂಲಕ ಸಂಪರ್ಕಿಸಲು, ದೂರವಾಣಿಯ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದಾಗ ತಿಳಿದು ಬಂದಿದೆ.. ಇತರೇ ನಿರ್ವಾಹಕರು ಇದರೆಡೆಗೆ ಗಮನಿಸುವರೆಂದು ನಂಬಿದ್ದೇನೆ..
ಹಾಗೇ, ಇತರ ಸಂಪದಿಗರು, ಇನ್ನೇನಾದರೂ ಸಮಸ್ಯೆ ಎದುರಿಸದಲ್ಲಿ ಈ ಚಚಾಪುಟ ಸಹಾಯವಾಗಬಹುದೆಂದು ನಂಬಿದ್ದೇನೆ. ಸಂಪದಿಗರಿಗೆ ಇದು ಕರೆ ಕೂಡ.. ಅವರ ಸಮಸ್ಯೆಗಳನ್ನ ಎದುರಿಗೆ ಇಡಲು.
ನಿಮ್ಮೊಲವಿನ,
ಸತ್ಯ.. :)
Comments
ಉ: ಸಂಪದದಲ್ಲಿ ಕೆಲವು ತಾಂತ್ರಿಕ ಸಮಸ್ಯೆ ಅಥವಾ ಬೇಕಿರೋ ತಿದ್ದುಪಡಿ ...
ಉ: ಸಂಪದದಲ್ಲಿ ಕೆಲವು ತಾಂತ್ರಿಕ ಸಮಸ್ಯೆ ಅಥವಾ ಬೇಕಿರೋ ತಿದ್ದುಪಡಿ ...
In reply to ಉ: ಸಂಪದದಲ್ಲಿ ಕೆಲವು ತಾಂತ್ರಿಕ ಸಮಸ್ಯೆ ಅಥವಾ ಬೇಕಿರೋ ತಿದ್ದುಪಡಿ ... by ಸುಮ ನಾಡಿಗ್
ಉ: ಸಂಪದದಲ್ಲಿ ಕೆಲವು ತಾಂತ್ರಿಕ ಸಮಸ್ಯೆ ಅಥವಾ ಬೇಕಿರೋ ತಿದ್ದುಪಡಿ ...